Sandalwood Leading OnlineMedia

ಗೆಳತಿಯ ಜೊತೆ ‘ಲಿಪ್ ಲಾಕ್’ ಮಾಡಿಕೊಂಡ ನಟಿ ನಿಶ್ವಿಕಾ ನಾಯ್ಡು

ಅಮ್ಮ ಐ ಲವ್ ಯು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ನಿಶ್ವಿಕಾ ನಾಯ್ಡು ಬಹುತೇಕ ಎಲ್ಲಾ ಸಿನಿಪ್ರಿಯರಿಗೆ ಪರಿಚಿತ ನಟಿ. ಆಕೆ ನಟಿಸಿರುವುದು ಕಡಿಮೆ ಸಿನಿಮಾಗಳಾದರೂ, ತಮ್ಮ ಸರಳ ಸೌಂದರ್ಯದಿಂದಲೇ ಅಭಿಮಾನಿಗಳ ಮನಸ್ಸಿಗೆ ನಿಶ್ವಿಕಾ ನಾಯ್ಡು ಬಹಳ ಹತ್ತಿರವಾಗಿದ್ದಾರೆ. ಆದರೆ ಇದೀಗ ವೈರಲ್ ಆಗಿರುವ ನಿಶ್ವಿಕಾ ನಾಯ್ಡು ಅವರ ವಿಡಿಯೋವೊಂದು ಅಭಿಮಾನಿಗಳಿಗೆ ಶಾಕ್ ನೀಡಿದೆ.

ಪಾರ್ಟಿ ಗುಂಗಿನಲ್ಲಿ ನಿಶ್ವಿಕಾ ನಾಯ್ಡು ಗೆಳತಿಯ ತುಟಿಗೆ ತುಟಿ ಒತ್ತಿ ಹೊಗೆ ಬಿಟ್ಟಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. ಇದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಗುರು ಶಿಷ್ಯರು ಚಿತ್ರದಲ್ಲಿ ಲಂಗ ದಾವಣಿ ಧರಿಸಿ ಕುಣಿದಿದ್ದ ನಟಿ ಇವರೇನಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಮೂಲಗಳ ಪ್ರಕಾರ ಈ ವಿಡಿಯೋ ನಿಶ್ವಿಕಾ ನಾಯ್ಡು ಗೋವಾದ ಪಾರ್ಟಿಯೊಂದರಲ್ಲಿ ತೆಗೆದ ವಿಡಿಯೋವಾಗಿದೆ. ಈ ವಿಡಿಯೋ ನೋಡಿದರೆ ಯಾರಿಗಾದರೂ ಇದು ನಿಜಕ್ಕೂ ನಿಶ್ವಿಕಾ ನಾಯ್ಡು ಅವರೇನಾ ಎಂಬ ಪ್ರಶ್ನೆ ಕಾಡದೆ ಇರದು. ಈ ವಿಡಿಯೋದಲ್ಲಿ ಆಕೆಯ ಮತ್ತೊಬ್ಬ ಸ್ನೇಹಿತೆ ಹುಕ್ಕಾ ಎಳೆದು ನಿಶ್ವಿಕಾ ನಾಯ್ಡು ಬಳಿ ಹೋದಾಗ, ಆಕೆ ಸ್ನೇಹಿತೆಗೆ ಲಿಪ್ ಲಾಕ್ ಮಾಡಿ ಆಕೆ ಬಾಯಿಂದ ಹೊಗೆ ಎಳೆದುಕೊಂಡು ನಂತರ ಹೊಗೆಯನ್ನು ಹೊರಗೆ ಬಿಟ್ಟಿದ್ಧಾರೆ. ನಿಶ್ವಿಕಾ ನಾಯ್ಡು ಜೊತೆ ಪಾರ್ಟಿಯಲ್ಲಿ ಭಾಗವಹಿಸಿದ್ದ ಆಕೆಯ ಗೆಳತಿಯೊಬ್ಬರು ಈ ವಿಡಿಯೋವನ್ನು ತಮ್ಮ ಇನ್​​​ಸ್ಟಾಗ್ರಾಮ್ ಸ್ಟೇಟಸ್​​​​ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕೆ ಸ್ಟೇಟಸ್​​​​ನಿಂದ ವಿಡಿಯೋ ಡಿಲೀಟ್ ಮಾಡಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಿಶ್ವಿಕಾ ನಾಯ್ಡು ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಆಕೆ 2018 ರಲ್ಲಿ ತೆರೆ ಕಂಡ ಅಮ್ಮ ಐ ಲವ್ ಯು ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಬಂದರು. ಈ ಚಿತ್ರದಲ್ಲಿ ಅವರು ಚಿರಂಜೀವಿ ಸರ್ಜಾ ಜೊತೆ ನಟಿಸಿದ್ದರು.

ನಂತರ ಅನೀಶ್ ತೇಜೇಶ್ವರ್ ಜೊತೆ ವಾಸು ನಾನ್ ಪಕ್ಕಾ ಕಮರ್ಷಿಯಲ್, ಶ್ರೇಯಸ್ ಮಂಜು ಜೊತೆ ಪಡ್ಡೆ ಹುಲಿ, ಪ್ರಜ್ವಲ್ ದೇವರಾಜ್ ಜೊತೆ ಜಂಟಲ್​​​ಮ್ಯಾನ್, ಮತ್ತೆ ಅನೀಶ್ ತೇಜೇಶ್ವರ್ ಜೊತೆ ರಾಮಾರ್ಜುನ, ಗಣೇಶ್ ಜೊತೆ ಸಖತ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಗಾಳಿಪಟ-2 ಹಾಗೂ ಶರಣ್ ಜೊತೆ ನಟಿಸಿರುವ ಗುರುಶಿಷ್ಯರು ಸಿನಿಮಾ ಬಿಡುಗಡೆಗೆ ಕಾಯುತ್ತಿದೆ. ದಿಲ್ ಪಸಂದ್ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ.

Share this post:

Related Posts

To Subscribe to our News Letter.

Translate »