ಸ್ಯಾಂಡಲ್‌ವುಡ್‌ನ ಗುರುಶಿಷ್ಯರು ಖ್ಯಾತಿಯ ನಟಿ ನಿಶ್ವಿಕಾ ನಾಯ್ಡು ಕಿರುತೆರೆಗೆ ಕಾಲಿಟ್ಟಿದ್ದಾರೆ. ಮಹಾನಟಿ ಅನ್ನೋ ರಿಯಾಲಿಟಿ ಶೋ ಮೂಲಕ ನಿರ್ಣಾಯಕಿ ಆಗಿದ್ದಾರೆ. ಇವರ ಈ ಒಂದು ಹೊಸ ಹೆಜ್ಜೆಯ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಕನ್ನಡದ ಗುರು ಶಿಷ್ಯರು ಖ್ಯಾತಿಯ ನಟಿ ನಿಶ್ವಿಕಾ ನಾಯ್ಡು (Nishvika Naidu) ಕಿರುತೆರೆಗೆ ಬಂದಿದ್ದಾರೆ. 2018 ರಿಂದ 2024 ರವರೆಗೂ ಹೆಚ್ಚು ಕಡಿಮೆ 10 ಸಿನಿಮಾ ಮಾಡಿದ್ದಾರೆ. ಈ ಒಂದು ಸಿನಿ ಜರ್ನಿಯಲ್ಲಿ ಅಮ್ಮ ಐ ಲವ್ ಯು (Amma I Love You) ಮೊದಲ ಚಿತ್ರ ಆಗಿದೆ. ಇದಾದ್ಮೇಲೆ ಗುರು ಶಿಷ್ಯರು ಚಿತ್ರದ (Guru Shishyaru) ಆಣೆ ಮಾಡಿ ಹೇಳಲೇನು ಹಾಡು ಮೋಡಿ ಮಾಡಿತ್ತು. ಈ ಚಿತ್ರದ ಮೂಲಕ ಎಲ್ಲರ ಮನೆ ಮಾತಾಗಿದ್ದ ನಿಶ್ವಿನಾ ನಾಯ್ಡು ಪುಟ್ಟಪರದೆಗೆ ಬಂದಿದ್ದಾರೆ. ಹಾಗೆ ಬಂದು ಹೀಗೆ ಹೋಗೋ ರೋಲ್ ಆಗಲಿ, ಇಲ್ವೇ ಒಂದು ಸೀರಿಯಲ್ (Serial) ಒಪ್ಪಿಕೊಂಡಿರೋದಾಗಲಿ ಮಾಡಿಲ್ಲ ನೋಡಿ. ಬದಲಾಗಿ ನಿಶ್ವಿಕಾ ನಾಯ್ಡು ನಿರ್ಣಾಯಕಿ ಆಗಿಯೇ ಬರ್ತಿದ್ದಾರೆ.
ಇದನ್ನೂ ಓದಿ :ಪುನೀತ್ ರಾಜ್‌ಕುಮಾರ್ ಜಾಕಿ ಚಿತ್ರ ಮರು-ಬಿಡುಗಡೆ ಬಾಕ್ಸ್ ಆಫೀಸ್ ಕಲೆಕ್ಷನ್ 2024
ಈ ಮೂಲಕ ಕನ್ನಡ ಇತರರಿಗೂ ಸ್ಪೂರ್ತಿ ತುಂಬೋ ಕೆಲಸವನ್ನ ಈಗಾಗಲೇ ಪ್ರೋಮೋದಲ್ಲಿ ಮಾಡಿದ್ದಾರೆ. ಇವರ ಈ ಹೊಸ ಜರ್ನಿಯ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ
ಮಹಾನಟಿ ಶೋಗೆ ನಿರ್ಣಾಯಕಿ ಆದ ನಿಶ್ವಿಕಾ ನಾಯ್ಡು!
ಜೀ ಕನ್ನಡದಲ್ಲಿ ಮಹಾನಟಿ ರಿಯಾಲಿಟಿ ಶೋ ಶುರು ಆಗುತ್ತಿದೆ. ಈ ಶೋದಲ್ಲಿಯೇ ನಿಶ್ವಿಕಾ ನಾಯ್ಡು ನಿರ್ಣಾಯಕಿ ಆಗಿದ್ದಾರೆ. ಈಗಾಗಲೇ ಈ ಒಂದು ಶೋದ ಪ್ರೋಮೋ ರಿಲೀಸ್ ಆಗಿವೆ. ಹಾಗೆ ನಟಿ ನಿಶ್ವಿಕಾ ನಾಯ್ಡು ಇರೋ ಪ್ರೋಮೋ ಇಂಟ್ರಸ್ಟಿಂಗ್ ಆಗಿಯೇ ಇದೆ.
ಇದರ ಕಂಟೆಂಟ್ ಬಗ್ಗೆ ಹೇಳೋದಾದ್ರೆ, ಮಹಾನಟಿ ಆಗಲು ಬಣ್ಣಬೇಕಿಲ್ಲ. ಇದು ಮ್ಯಾಟರ್ ಕೂಡ ಆಗೋದಿಲ್ಲ. ಪ್ರತಿಭೆ ಇದ್ರೇ ಎಂತವರೂ ಮಹಾನಟಿ ಆಗಬಹುದು ಅನ್ನೋದೇ ಪ್ರೋಮೋದ ಒಟ್ಟು ತಿರುಳಾಗಿದೆ. ಇದರ ಜೊತೆಗೆ ಈ ಪ್ರೋಮೋ ಮೂಲಕ ನಿಶ್ವಿಕಾ ನಾಯ್ಡು ಸ್ಪೂರ್ತಿ ತುಂಬುವ ಕೆಲಸ ಕೂಡ ಮಾಡಿದ್ದಾರೆ.
ಮಹಾನಟಿ ಶೋದಲ್ಲಿ ಒಟ್ಟು ನಾಲ್ಕು ಜನ ನಿರ್ಣಾಯಕರಿದ್ದಾರೆ. ರಮೇಶ್ ಅರವಿಂದ್, ಹಿರಿಯ ನಟಿ ಪ್ರೇಮಾ, ಕಾಟೇರ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ನಿಶ್ವಿಕಾ ನಾಯ್ಡು ಈ ಶೋದ ನಿರ್ಣಾಯಕರಾಗಿದ್ದಾರೆ.
ಇವರ ಈ ಒಂದು ಶೋ ಇದೇ ಶನಿವಾರ ಶುರು ಆಗುತ್ತಿದೆ. ರಾತ್ರಿ 7.30 ಕ್ಕೆ ಶೋ ಪ್ರಸಾರ ಆಗುತ್ತದೆ. ಈ ಹಿನ್ನೆಲೆಯಲ್ಲಿ ಜೀ ಕನ್ನಡ ವಾಹಿನಿ ನಾಲ್ಕು ಜನ ನಿರ್ಣಾಯಕ ಪ್ರೋಮೋಗಳನ್ನ ರೆಡಿ ಮಾಡಿದೆ. ಈಗಾಗಲೇ ಅವುಗಳನ್ನ ರಿಲೀಸ್ ಕೂಡ ಮಾಡಿದೆ.
ಇದನ್ನೂ ಓದಿ :ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಕೆಟ್ಟ ಸುದ್ದಿ: ಮುಂಬೈ ಇಂಡಿಯನ್ಸ್ಗೆ ಬಿಗ್ ಶಾಕ್ : Suryakumar Yadav
ಮಹಾನಟಿ ರಿಯಾಲಿಟಿ ಶೋ ವಿಶೇಷವಾಗಿ ಕಾಣಿಸುತ್ತಿದೆ!
ಮಹಾನಟಿ ಅನ್ನೋ ಹೆಸರಿನ ಸಿನಿಮಾ ಕೂಡ ಬಂದಿತ್ತು. ಟಾಲಿವುಡ್‌ನ ಈ ಚಿತ್ರದಲ್ಲಿ ನಟಿ ಕೀರ್ತಿ ಸುರೇಶ್ ನಟಿಸಿದ್ದರು. ಇವರಿಗೆ ಒಳ್ಳೆ ಹೆಸರು ಕೂಡ ಬಂದಿದೆ. ಅಂತಹ ಮಹಾನಟಿ ಅನ್ನೋ ವಿಶೇಷ ಟೈಟಲ್ ಮೂಲಕ ಕನ್ನಡದಲ್ಲಿ ಈ ಒಂದು ಶೋ ಶುರು ಆಗಿದೆ.
ಆ್ಯಕ್ಟಿಂಗ್ಗೆ ಕಲರ್ ಮುಖ್ಯ ಅಲ್ಲ, ಆಸಕ್ತಿ ಇರೋ ಯಾವ್ದೇ ಕೆಲ್ಸ ಮಾಡಿದ್ರೂ ಆ ಶಕ್ತಿನೇ ನಿಮ್ ಜೊತೆ ನಿಲ್ಲುತ್ತೆ!
ಮಹಾನಟಿ | ಇದೇ ಶನಿವಾರದಿಂದ ಶನಿ-ಭಾನು ರಾತ್ರಿ 7:30ಕ್ಕೆ.#Mahanati #Nishvika #ZeeKannada #BayasidaBaagiluTegeyona @nishvikaa pic.twitter.com/XiZQTUHStd— Zee Kannada (@ZeeKannada) March 27, 2024
ಇದನ್ನೂ ಓದಿ :ಪುಷ್ಪ 2 ಬಿಗ್ ಅಪ್‌ಡೇಟ್: ಅಲ್ಲು ಅರ್ಜುನ್ ಅಭಿನಯದ ಚಿತ್ರ 2025 ರಲ್ಲಿ ಥಿಯೇಟರ್‌ಗೆ ಬರಲಿದೆಯೇ? ಇಲ್ಲಿ ತಿಳಿಯಿರಿ
ಇದರ ಬಗ್ಗೇನೂ ಜನರಲ್ಲಿ ಒಂದು ಕುತೂಹಲ ಹುಟ್ಟಿಕೊಂಡಿದೆ. ವಿಶೇಷವಾಗಿ ನಿರ್ಣಾಯಕರ ಹೆಸರುಗಳು ಇಲ್ಲಿ ಜನರಿಗೆ ವಿಶೇಷ ಕ್ಯೂರಿಯೋಸಿಟಿ ಬಿಲ್ಡ್ ಮಾಡಿವೆ ಅಂತಲೇ ಹೇಳಬಹುದು.