ನಿಶಾ ಕಣ್ಣೊಟ, ಸೌಂದರ್ಯ, ಅಭಿನಯ, ಮೊಗದಲ್ಲಿ ಮೂಡುವ ನಗುವಿನ ಮೂಲಕ ಕಲಾರಸಿಕರನ್ನು ಕಟ್ಟಿಹಾಕಿದ್ದಾರೆ.ಗಟ್ಟಿಮೇಳ ಧಾರವಾಹಿಯ ನಾಯಕಿ ಪಾತ್ರಧಾರಿ ಅಮೂಲ್ಯ ಅಂದ್ರೆ ಯಾರಿಗ್ ಗೊತ್ತಿಲ್ಲ ಹೇಳಿ, ನಿಶಾ ಎಂಬ ನವನಟಿಯನ್ನು ಕಿರುತೆರೆಯಲ್ಲಿ ರಾರಾಜಿಸುವಂತೆ ಮಾಡಿತು. ಮೂರಕ್ಷರದ ಅಮೂಲ್ಯ ಎನ್ನುವ ಪಾತ್ರ ನಟಿ ನಿಶಾ ಅವರನ್ನು ಮನೆ ಮಾತು ಆಗುವಂತೆ ಮಾಡಿತು. ಆ ಮೂಲಕ ಕಿರುತೆರೆ ವೀಕ್ಷಕರ ಮನಸು ಗೆದ್ದ ನಟಿ ನಿಶಾ ರವಿಕೃಷ್ಣನ್. ನಿಶಾ ರವಿಕೃಷ್ಣನ್ ಸಹಜಸುಂದರ ಅಭಿನಯಕ್ಕೆ ಮನಸೋಲದವರಿಲ್ಲ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಈ ಧಾರಾವಾಹಿಯಿಂದ ಅವರ ವೃತ್ತಿ ಜೀವನದ ಮೈಲೇಜ್ ಹೆಚ್ಚಿದೆ.ನಿಶಾ ಅವರು ತೆಲುಗಿನಲ್ಲೂ ಧಾರಾವಾಹಿ ಮಾಡುತ್ತಿದ್ದಾರೆ. ಜೀ ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ‘ಮುತ್ಯಮಂತ ಮುದ್ದು’ ಧಾರಾವಾಹಿಯಲ್ಲಿ ಅವರು ಗೀತಾ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಮೂಲಕ ತೆಲುಗು ಕಿರುತೆರೆಯಲ್ಲೂ ಅವರು ಫೇಮಸ್ ಆಗಿದ್ದಾರೆ.ನಿಶಾ ರವಿಕೃಷ್ಣನ್ ಅವರ ಇತ್ತೀಚೆಗೆ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ ಫೋಟೋಗಳಿಗೆ ನೆಟ್ಟಿಗರಿಂದ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.
![](https://chittaranews.com/wp-content/uploads/2025/01/WEB-SITE-FEATURE-IMAGE-8.jpg)