Sandalwood Leading OnlineMedia

ಚಾಲೆಂಜಿಂಗ್ ಪಾತ್ರದ ಮೂಲಕ ನಿಶಾ ರಜಪೂತ್ ಎಂಟ್ರಿ

 

ಕನ್ನಡ ಚಿತ್ರರಂಗದಲ್ಲಿ ಪ್ರತಿವರ್ಷ ನೂರಾರು ನಾಯಕ ನಟಿಯರ ಆಗಮನವಾಗುತ್ತಲೇ ಇರುತ್ತದೆ. ಹೀಗೆ ಚಿತ್ರರಂಗಕ್ಕೆ ಅಡಿಯಿಟ್ಟವರಲ್ಲಿ ಕೆಲವೇ ಕೆಲವರು ಮಾತ್ರ ತಮ್ಮ ಮೊದಲ ಸಿನಿಮಾದಲ್ಲೇ ತಮ್ಮ ಶ್ರದ್ಧೆ ಮತ್ತು ಪ್ರತಿಭೆಯ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿಬಿಡುತ್ತಾರೆ. ಹೌದು, ಇಲ್ಲೊಂದು ಪ್ರತಿಭೆ ತಮ್ಮ ಹೊಸ ಸಿನಿಮಾದ ಮೂಲಕ ಚಂದನವನದಲ್ಲಿ ಮಿಂಚು ಹರಿಸಲು ಬರುತ್ತಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕ ಹಾಗೂ ವಿತರಕರೂ ಆದ ಮಂಜುನಾಥ್ ಮಸ್ಕಲ್‌ಮಟ್ಟಿ ಅವರ `ವರಾಹ ಚಕ್ರಂ’ ಚಿತ್ರದ ಚಾಲೆಂಜಿಂಗ್ ಪಾತ್ರದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ ನಟಿ ನಿಶಾ ರಜಪೂತ್. ಉತ್ತರ ಕರ್ನಾಟಕದ ಬಿಜಾಪುರದಲ್ಲಿ ಜನಿಸಿದ ನಿಶಾ, ವಿಧ್ಯಾಭ್ಯಾಸವನ್ನು ಬಾಂಬೆಯಲ್ಲಿ ಮಾಡಿರುತ್ತಾರೆ. ಕಳೆದ ಒಂದು ದಶಕದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇವರು, ಸಿನಿಮಾ ರಂಗದಲ್ಲಿ ಏನಾದರೂ ಸಾಧಿಸುವ ಮಹದಾಸೆ ಇರುವ ಇವರು `ಚಿತ್ತಾರ’ದ ಜೊತೆ ತಮ್ಮ ಸಿನಿ ಪಯಣದ ಮಜಲುಗಳನ್ನು ಹಂಚಿಕೊಂಡಿದ್ದಾರೆ.
-ಬಿ.ಎನ್ಕೆ

`ವರಾಹ ಚಕ್ರಂ’ ಕೊಟ್ಟ ಅನುಭವ ವಿಭಿನ್ನ

ನನ್ನ ತಂದೆಗೆ ಕನ್ನಡ ಭಾಷೆ, ಕನ್ನಡ ಸಿನಿಮಾಗಳೆಂದರೆ ಹೆಮ್ಮೆ. ವಿಷ್ಣು ವರ್ಧನ್ ಅವರ ಬಿಗ್ ಫ್ಯಾನ್ ಅವರು. ಪ್ರತೀ ಭಾನುವಾರ ತಪ್ಪದೆ `ಆಪ್ತ ಮಿತ್ರ’ ಚಿತ್ರವನ್ನು ಇವತ್ತಿಗೂ ನೋಡುತ್ತಾರೆ. ಅಷ್ಟೇ ಅಲ್ಲದೇ ಇವತ್ತಿಗೂ ಅವರ ದಿನ ಆರಂಭವಾಗುವುದು ರೆಡಿಯೋದಲ್ಲಿ ಕನ್ನಡ ಸಿನಿಮಾದ ಹಾಡುಗಳನ್ನು ಕೇಳುವ ಮೂಲಕ. ಬಹುಶಃ ಈ ಎಲ್ಲಾ ಅಂಶಗಳು ನನ್ನನ್ನು ನಟಿಯಾಗಲು ಪ್ರೇರೇಪಿಸಿದೆ ಅನ್ನವುದು ನನ್ನ ಭಾವನೆ. ಮಾಡೆಲಿಂಗ್ ಅನುಭವಕ್ಕಿಂತ ಸಿನಿಮಾ ಅನುಭವ ಬೆರೆದೇ ರಿತಿಯಾಗಿದೆ. ಎಲ್ಲವನ್ನೂ ಜವಾಬ್ದಾರಿ ಅಂದುಕೊಂಡು ಕಲಿಯುತ್ತಿದ್ದೇನೆ. ನಾನು ಈ ಹಿಂದೆ ನಟಿಸಿದ ಚಿತ್ರಕ್ಕಿಂತ `ವರಾಹ ಚಕ್ರಂ’ ಬೇರೆಯದೇ ರೀತಿಯಾಗಿದೆ. ಏಕೆಂದರೆ ಇಲ್ಲಿ ಒಂದು ಕೌಟಿಂಬಿಕ ವಾತಾವರಣವಿದೆ. ಇಲ್ಲಿ ತಾಂತ್ರಿಕ ವರ್ಗ ಕೂಡ ಸಾಕಷ್ಟು ಸಪೋರ್ಟ್ ಮಾಡ್ತಾರೆ. ಮನೆಯಿಂದ ದೂರ ಇದ್ದು ಕೆಲಸ ಮಾಡುತ್ತಿರುವ ನನ್ನಂತಹ ನಟಿಯರಿಗೆ ಒಂದು ಕೌಟಿಂಬಿಕ ವಾತಾವರಣ ಇನ್ನಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಲು ಅನುವು ಮಾಡಿಕೊಳ್ಳುತ್ತದೆ.

ಇದನ್ನೂ ಓದಿ :ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಪಾರು ಸೀರಿಯಲ್ ಆದಿ..ಶರತ್ ಪದ್ಮನಾಭ್ ಚೊಚ್ಚಲ ಕನಸಿಗೆ ಟೈಟಲ್ ಫಿಕ್ಸ್

 

ಒಂದೇ ಚಿತ್ರದಲ್ಲಿ ಹಲವು ಪಾತ್ರ

`ವರಾಹ ಚಕ್ರಂ’ ನನ್ನ ಸಿನಿಪಯಣ ಉತ್ತಮ ಚಿತ್ರವಾಗಲಿದೆ ಎಂಬುದು ನನ್ನ ಆಶಯ. ನನಗೆ ಭಾಷೆಯ ಹಂಗಿಲ್ಲ, ಯಾವುದೇ ಭಾಷೆಯ ಉತ್ತಮ ಅಭಿನಯಕ್ಕೆ ಅವಕಾಶವಿರುವ ಚಿತ್ರ ಸಿಕ್ಕರೆ ಖಂಡಿತಾ ಒಪ್ಪಿಕೊಳ್ಳುತ್ತೇನೆ. ಅದಕ್ಕಾಗಿ ಈಗಾಗಲೇ ತೆಲುಗು-ತಮಿಳು ಕಲಿಯುತ್ತಿದ್ದೇನೆ. ನನಗೆ ಎಗ್ಸಾಯ್ಟ್ ಮಾಡುವಂತಹ ಉತ್ತಮ ಪಾತ್ರದಲ್ಲಿ ಅಭಿನಯಿಸಬೇಕೆಂಬುದು ನನ್ನ ಮಹದಾಸೆ. `ವರಾಹ ಚಕ್ರಂ’ ಚಿತ್ರದಲ್ಲಿ ಒಂದೇ ಪಾತ್ರ ಮಾಡುತ್ತಿಲ್ಲ. ಒಂದೇ ಚಿತ್ರದಲ್ಲಿ ವಿಭಿನ್ನ ಥೀಮ್ಸ್ ಇರುವ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಅದ್ಭುತ ಅವಕಾಶವನ್ನು. ನಿರ್ದೇಶಕರಾದ ಮಂಜು ಸರ್ ಮಾಡಿಕೊಟ್ಟಿದ್ದಾರೆ. ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಲು ನನ್ನ ಸರ್ವ ಪ್ರಯತ್ನವನ್ನೂ ನಿಷ್ಠೆಯಿಂದ ಮಾಡುತ್ತಿದ್ದೇನೆ. ಒಂದು ರೀತಿಯಲ್ಲಿ ಖಂಡಿತಾ ನನ್ನ `ನೇತ್ರಾವತಿ’ ಅನ್ನುವ ಪಾತ್ರ ಜನಕ್ಕೆ ತಲುಪುವಂತಹ ವಿಶೇಷ ಪಾತ್ರ. ನನ್ನ ಪ್ರಕಾರ ಸಿನಿಮಾ ಮನೋರಂಜನೆಯ ಜೊತೆ ಜೊತೆಗೆ ಸಂದೇಶಗಳನ್ನೂ ನೀಡಬೇಕು. ಈ ನಿಟ್ಟಿನಲ್ಲಿ `ವರಾಹ ಚಕ್ರಂ’ ಮನೋರಂಜನೆಯ ಜೊತೆ ಒಂದು ಉತ್ತಮ ಸಂದೇಶ ನೀಡುವ ಚಿತ್ರವಾಗಲಿದೆ. ಸಸ್ಪೆನ್ಸ್-ಥ್ರಿಲ್ಲರ್ ಜಾನರ್ ಪಾತ್ರ ಮಾಡುತ್ತಿರುವ ನಾನು ಮೆಂಟಲ್ ಡಿಸಾರ್ಡ್ ರೀತಿಯ ಪಾತ್ರ ನಿಭಾಯಿಸುತ್ತಿದ್ದೇನೆ. ಪಾತ್ರಕ್ಕಾಗಿ ಮಂಜು ಸರ್ ಸಾಕಷ್ಟು ತರಬೇತಿ ತರಗತಿಗಳನ್ನು ಮಾಡಿದ್ದಾರೆ.

ಇದನ್ನೂ ಓದಿ :ಸತೀಶ್ -ರಚಿತಾ ಮ್ಯಾಟ್ನಿ ಸಿನಿಮಾಗೆ ಸಿಕ್ತು ಡಿ ಬಾಸ್ ದರ್ಶನ್ ಸಾಥ್

ನಿರ್ದೇಶಕರೇ ಇಂದು ಸಿನಿಮಾ ಯುನಿರ್ವಸಿಟಿ

ಮಂಜು ಸರ್ ಜೊತೆ ಕೆಲಸ ಮಾಡಿದ ಅನುಭವ ಅದ್ಭುತ. ಅವರು ಒಂದು ರೀತಿಯಲ್ಲಿ ಸಿನಿಮಾ ಯುನಿವರ್ಸಿಟಿ ಇದ್ದ ಹಾಗೆ. ಅವರಿಗೆ ಸಿನಿಮಾದ ಅಷ್ಟೂ ವಿಭಾಗಗಳ ಬಗ್ಗೆ ಅಗಾಧವಾದ ಜ್ಞಾನವಿದೆ. ಆದರೂ ಒಬ್ಬ ಲೈಟ್ ಬಾಯ್ ಕೂಡ ಏನಾದರೂ ಸಲಹೆ ಕೊಟ್ಟರೆ, ಆ ಸಲಹೆ ನಿಜಕ್ಕೂ ಸೂಕ್ತವಾಗಿದ್ದರೆ ಸ್ವೀಕರಿಸುತ್ತಾರೆ. ಒಂದು ಧನಾತ್ಮಕ ಮನೋಸ್ಥಿತಿ ಇರುವ ತಂಡವನ್ನು ಅವರು ಕಟ್ಟಿದ್ದಾರೆ. ಇವರ ನೇತೃತ್ವದಲ್ಲಿ ಪ್ರತಿಯೊಬ್ಬರೂ ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ರಿಹರ್ಸಲ್ ಸಮಯದಲ್ಲೇ ಮಂಜು ಸರ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ, ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಅವರ ಅನುಭವ ಅಗಾಧವಾಗಿರುವುದರಿಂದ ಅವರು ಕೊಡುವ ಸಲಹೆಯನ್ನು ಗಂಭೀರವಾಗಿ ಪರಗಿಣಿಸಿದರೆ ಸಾಕು. ನಮ್ಮ ಮುಂದಿನ ಜರ್ನಿಗೆ ಅದು ಅಡಿಪಾಯವಾಗುತ್ತದೆ. ಸಿನಿಮಾ ರಂಗದಲ್ಲಿ ಇಂತಹ ನಿರ್ದೇಶಕರೂ ಇದ್ದಾರೆ ಅನ್ನುವ ಹೆಮ್ಮೆ ನನಗಿದೆ.

 

ಇದನ್ನೂ ಓದಿ :ರಶ್ಮಿಕಾ ಮಂದಣ್ಣ ಫ್ಯಾಮಿಲಿ ಸ್ಟಾರ್ ಗೆ ಡಾರ್ಲಿಂಗ್ಸ್ ವಿಜಯ ದೇವರಕೊಂಡ ಮತ್ತು ಪರಶುರಾಮ್ ಶುಭ ಹಾರೈಸಿದ್ದಾರೆ

ಮಾಡೆಲಿಂಗ್‌ಗಿಂತ ಸಿನಿಮಾ ಥ್ರಿಲ್ಲಿಂಗ್

ಮಾಡೆಲಿಂಗ್ ರಂಗದಿಂದ ಸಿನಿಮಾ ರಂಗಕ್ಕೆ ಬರುವಾಗ ಇಲ್ಲಿ ಸಾಕಷ್ಟು ಚಾಲೆಂಜಸ್‌ಗಳನ್ನು ಎದುರಿಸಬೇಕಾಗುತ್ತದೆ. ಮಾಡೆಲಿಂಗ್‌ಗಿಂತ ಸಿನಿಮಾ ರಂಗದಲ್ಲಿ ಸಾಕಷ್ಟು ಸಿಸ್ಟಮ್ಯಾಟಿಕ್ ಆಗಿ ಕೆಲಸ ಮಡಬೇಕಾಗುತ್ತೆ. ಮಾಡೆಲಿಂಗ್‌ನಲ್ಲಿ ಮುಖದ ಭಾವನೆಗಳಿಗೆ ಸಿನಿಮಾದಷ್ಟು ಪ್ರಾಮುಖ್ಯತೆ ಇರುವುದಿಲ್ಲ. ಸಿನಿಮಾದಲ್ಲಿ ನಟಿಯಾಗಿ ಮತ್ತು ನಟಿಯಲ್ಲದೆಯೂ ಕಲಿಯುವುದು ಸಾಕಷ್ಟಿದೆ. ಕಲಾವಿದೆಯಾಗಿ ಕ್ಯಾಮರಾ ಎದುರಿಸುವುದು ಥ್ರಿಲ್ಲಿಂಗ್ ಅನುಭವ. ಇಲ್ಲಿವರೆಗೆ ನಾನು ಸ್ಟಂಟ್-ಜನ್ಮಾಸ್ಟಿಕ್ ಇರುವಂತಹ ಪಾತ್ರ ಮಾಡಿರಲ್ಲಿ. `ವರಾಹ ಚಕ್ರಂ’ಚಿತ್ರದಲ್ಲಿ ಮಾಡಿದ್ದೇನೆ. ಮಾಡೆಲಿಂಗ್‌ನಲ್ಲಿದ್ದರೆ ಈ ಎಲ್ಲಾ ನನ್ನ ಕನಸುಗಳೆಲ್ಲಾ ಕನಸುಗಳಾಗಿಯೇ ಇರುತ್ತಿದ್ದವು. ಮಾಡೆಲಿಂಗ್ ಮತ್ತು ಸಿನಿಮಾ ಬಿಟ್ಟು ನನಗೆ ಅಡುಗೆಯ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಎಲ್ಲಾ ರೀತಿಯ ವಜ್-ನಾನ್‌ವೆಜ್ ಅಡುಗೆಯನ್ನೂ ಮಾಡುತ್ತೇನೆ. ಸೀ ಫುಡ್ ನನ್ನ ಫೇವರೇಟ್ ಇದರ ಜೊತೆ ನೃತ್ಯ, ಫಿಟ್‌ನೆಸ್ ಮತ್ತು ಪೈಟಿಂಗ್ ನನ್ನ ಅಚ್ಚುಮೆಚ್ಚಿನ ಹವ್ಯಾಸಗಳು. ಯಾವುದೇ ಕ್ರಿಯೇಟೀವ್ ಕೆಲಸಗಳು ಮಾಡೋದು ನನಗೆ ತುಂಬಾ ಇಷ್ಟ.

ಇದನ್ನೂ ಓದಿ :ಪುಷ್ಪ 2 ಬಿಗ್ ಅಪ್‌ಡೇಟ್: ಅಲ್ಲು ಅರ್ಜುನ್ ಅಭಿನಯದ ಚಿತ್ರ 2025 ರಲ್ಲಿ ಥಿಯೇಟರ್‌ಗೆ ಬರಲಿದೆಯೇ? ಇಲ್ಲಿ ತಿಳಿಯಿರಿ

`ವರಾಹ ಚಕ್ರಂ’ ಕನ್ನಡಿಗರು ಹೆಮ್ಮೆ ಪಡುವ ಚಿತ್ರ

ಪ್ರಾಮಾಣಿಕವಾಗಿ ಹೇಳೋದಾದ್ರೆ ಕೆಲವು ವರ್ಷದ ಹಿಂದೆ ನಮ್ಮ ಇಂಡಸ್ಟಿçà ಈಗಿರುವಷ್ಟು ರೀಚ್ ಇರಲಿಲ್ಲ. ಈಗ ಓಟಿಟಿ ಫ್ಲಾಟ್‌ಫಾರ್ಮ್ನ ಅವಕಾಶ ಇರೋದ್ರಿಂದ ಪ್ರತಿಯೊಬ್ಬ ಪ್ರೇಕ್ಷಕನೂ ಬೆಸ್ಟ್ ಕಂಟೆಟ್‌ನ ಚಿತ್ರ ನೋಡಲು ಇಚ್ಛಿಸುತ್ತಾನೆ. ನನ್ನ ಮಹರಾಷ್ಟçದ ಸ್ನೇಹಿತರೂ ಈಗ ಕನ್ನಡ ಸಿನಿಮಾದ ಅಭಿಮಾನಿಗಳಾಗಿದ್ದಾರೆ. ಇದು ನಿಜಕ್ಕೂ ದೊಡ್ಡ ಬದಲಾವಣೆ. ಇದು ಒಬ್ಬಳು ಕನ್ನಡತಿಯಾಗಿ ನನಗೆ ಸಾಕಷ್ಟು ಹೆಮ್ಮೆ ಕೊಡುವ ಸಂಗತಿ. ಕೆಜಿಎಫ್ ಆಗಿರಬಹುದೂ, ಕಾಂತರ ಆಗಿರಬಹುದೂ.. ಹೀಗೆ ಸಾಕಷ್ಟು ಇತ್ತೀಚಿಗಿನ ಚಿತ್ರಗಳ ಕನ್ನಡ ಚಿತ್ರರಂಗವನ್ನು ಎಲ್ಲಾ ಕಡೆಗೂ ತಲುಪಿಸುತ್ತಿದೆ. ಈ ಸಂದರ್ಭದಲ್ಲಿ ನಾನು ಚಿತ್ರರಂಗದಲ್ಲಿ ಕೆಲಸ ಮಾಡ್ತಿರೋದು ನಿಜಕ್ಕೂ ಖುಷಿ ನೀಡುತ್ತಿದೆ. `ವರಾಹ ಚಕ್ರಂ’ ಸಿನಿಮಾ ಕೂಡ ಆ ಮಟ್ಟದ ಸಿನಿಮಾ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಜೊತೆಗೆ ನನ್ನ ತಂದೆ ಹೆಮ್ಮೆ ಪಡುವಂತಹ ಕೆಲಸ ಚಿತ್ರರಂಗದಲ್ಲಿ ಮಾಡುತ್ತೇನೆ ಅದಕ್ಕಾಗಿ, ಪ್ರೇಕ್ಷಕರ ಮತ್ತು ಸಿನಿಮಾ ರಂಗದವರ ಆಶೀರ್ವಾದ ಸದಾ ನನ್ನಮೇಲಿರುತ್ತದೆ ಅನ್ನವುದು ನನ್ನ ಬಾವನೆ.

 

 

 

Share this post:

Related Posts

To Subscribe to our News Letter.

Translate »