ನಟ, ನಿರೂಪಕ ನಿರಂಜನ್ ದೇಶಪಾಂಡೆ ಕನ್ನಡ ಹೋರಾಟಗಾರರ ಕ್ಷಮೆ ಕೇಳಿದ್ದಾರೆ. ಇರಲಾರದೇ ಇರುವೆ ಬಿಟ್ಟುಕೊಂಡೆ ಎನ್ನುವಂತೆ ಏನೋ ಮಾತನಾಡಲು ಹೋಗಿ ತಪ್ಪಾಯಿತು.ಕ್ಷಮಿಸಿ ಎಂದು ಇನ್ಸ್ಟಾಗ್ರಾಮ್ ಲೈವ್ ಬಂದು ಮಾತನಾಡಿದ್ದಾರೆ. ನನ್ನ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಕಷ್ಟು ಜನ ನನ್ನ ಮಾತಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ :ಕಾಸಿನ ಹಿಂದೆ ಬಿದ್ದವರ ಕನಸಿನ ಕಥೆ ‘ಪುಕ್ಸಟ್ಟೆ ಪೈಸ’ ಏ. 19ಕ್ಕೆ ತೆರೆಗೆ
ಈಗಷ್ಟೇ ಮಂಡ್ಯದ ಕನ್ನಡ ಹೋರಾಟಗಾರಾದ ಲೋಕೇಶ್ ಅವರೊಟ್ಟಿಗೆ ಮಾತನಾಡಿದೆ. ಅವರು ನಾನು ಆಡಿದ ಮಾತು ಎಷ್ಟು ತಪ್ಪು ಎಂದು ತಿಳಿ ಹೇಳಿದರು. ನನಗೆ ರೂಪೇಶ್ ರಾಜಣ್ಣ ಸೇರಿದಂತೆ ಹಲವು ಕನ್ನಡಪರ ಹೋರಾಟಗಾರರು ಗೊತ್ತು. ಅವರೊಟ್ಟಿಗೆ ಒಳ್ಳೆ ಒಡನಾಟವಿದೆ. ನಾನು ಆ ರೀತಿ ಮಾತನಾಡಬಾರದಿತ್ತು ಎಂದಿದ್ದಾರೆ. ನಾನು ಮಾತಿನ ಭರದಲ್ಲಿ ಏನೋ ಅಂದುಬಿಟ್ಟಿದ್ದೆ. ಕೆಲವ್ರು ಕನ್ನಡದ ಬಗ್ಗ ಚೆನ್ನಾಗಿ ತಿಳಿದು ಮಾತನಾಡುತ್ತಾರೆ. ಹೋರಾಟ ಮಾಡುತ್ತಾರೆ.
ಇದನ್ನೂ ಓದಿ :ಟೈಟಲ್ ಆಗಿ ಬದಲಾದ ಉಪೇಂದ್ರರ `ಕರಿಮಣಿ ಮಾಲೀಕ ‘!
ಇನ್ನು ಕೆಲವ್ರು ಕನ್ನಡದ ಬಗ್ಗೆ ತಿಳಿದುಕೊಳ್ಳದೇ ಮಾತನಾಡ್ತಾರೆ ಎಂದಿದ್ದೆ. ಕನ್ನಡ ಉಚ್ಛಾರಣೆ ಬಗ್ಗೆ ಗಮನ ಹರಿಸಬೇಕು ಎಂದು ಹೇಳುವಾಗ ಆ ರೀತಿ ಮಾತನಾಡಿದೆ.ನನಗೆ ಕನ್ನಡ ಅಂದ್ರೆ ಉಸಿರು, ತಾಯಿ. ಹಾಗಾಗಿ ಮಾತನಾಡುವಾಗ ತಪ್ಪಾಯಿತು ಕ್ಷಮಿಸಿ” ಎಂದಿದ್ದಾರೆ.ಇತ್ತೀಚೆಗೆ ನಿರಂಜನ್ ದೇಶಪಾಂಡೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ “ಕನ್ನಡ ಹೋರಾಟಗಾರರು ಮಾತೆತ್ತಿದರೆ ಸಾಕು ಹೋರಾಟ ಎಂದು ಬಂದುಬಿಡ್ತಾರೆ.
ಇದನ್ನೂ ಓದಿ :ಕಾಟೇರ ಚಿತ್ರಕ್ಕೆ 100 ದಿನದ ಸಂಭ್ರಮ
ಕೆಲವರು ಕನ್ನಡ ಚೆನ್ನಾಗಿ ತಿಳಿದು ಮಾತನಾಡುತ್ತಾರೆ. ಒಳ್ಳೆ ರೀತಿಯಲ್ಲಿ ಹೋರಾಟಗಳನ್ನು ಮಾಡುತ್ತಾರೆ. ಇನ್ನು ಕೆಲವರು ಹೋರಾಟಕ್ಕೆ ಬರ್ತಾರೆ, ಅವರಿಗೆ ಕನ್ನಡ ಸರಿಯಾಗಿ ಮಾತನಾಡಲು ಬರಲ್ಲ.ಕೆಲವರಿಗೆ ಉಗ್ರ ಹೋರಾಟ ಎಂದು ಸರಿಯಾಗಿ ಹೇಳೋಕೆ ಬರಲ್ಲ, ಹೋರಾಟ ಮಾಡುವ ಮುನ್ನ ಕನ್ನಡದ ಬಗ್ಗೆ ಜ್ಞಾನ ತುಂಬಿಕೊಳ್ಳಿ” ಎಂದಿದ್ದರು.