ವಸ್ತುಗಳನ್ನು ಉಪಯೋಗಿಸಬೇಕು.. ವ್ಯಕ್ತಿಗಳನ್ನು ಪ್ರೀತಿಸಬೇಕು.. ಅದಲು ಬದಲಾದಾಗ ಸಂಭವಿಸುವ ಅಸಂಭವಕ್ಕೆ ಒಂದು ಹೆಸರಿದೆ. ಈ ಸಾಲು ಎಷ್ಟು ಅದ್ಭುತವಾಗಿದೆ ಅಲ್ವಾ. ಪ್ರಸ್ತುತ ಅದಲು ಬದಲಾಗಿನೇ ಇರುವುದು. ಮನುಷ್ಯನನ್ನು ಉಪಯೋಗಿಸಿಕೊಳ್ಳುತ್ತಾರೆ.. ವಸ್ತುಗಳನ್ನು ವಿಪರೀತ ಪ್ರೀತಿಸುತ್ತಾರೆ. ಅದಕ್ಕೆ `ನಿಮ್ಮ ವಸ್ತುಗಳಿಗೆ ನೀವೆ ಜವಾಬ್ದಾರರು’ ಅಂತ ಕೇಶವ ಮೂರ್ತಿ ಕಿವಿ ಮಾತು ಹೇಳುತ್ತಿದ್ದಾರೆ. ಯಾವುದೇ ವಸ್ತುವಿನ ಮೇಲೂ ಅಟ್ಯಾಚ್‌ಮೆಂಟ್ ಬೆಳೆಸಿಕೊಂಡರೆ ಅದನ್ನ ಕಾಪಾಡಿಕೊಳ್ಳುವುದು ಕೂಡ ಅವರದ್ದೇ ಜವಾಬ್ದಾರಿಯಾಗಿರುತ್ತದೆ ಎಂಬ ಅರ್ಥಪೂರ್ಣ ಸಿನಿಮಾವನ್ನು ಸಿದ್ಧ ಮಾಡಿದ್ದಾರೆ. ಸದ್ಯ ಸೆನ್ಸಾರ್ ಕೂಡ ಮುಗಿಸಿರುವ ಸಿನಿಮಾ ಕುಟುಂಬ ಸಮೇತ ಕೂತು ನೋಡಲೇಬೇಕಾ ಸಿನಿಮಾ ಎಂಬ ಅಭಿಪ್ರಾಯವನ್ನು ಪಡೆದುಕೊಂಡಿದೆ. ಜನವರಿ ೧೦ರಂದು ತೆರೆಗೆ ಬರುತ್ತಿದೆ.
ಈ ಚಿತ್ರವನ್ನು ಪಿಕ್ಚರ್ ಶಾಪ್ ಹಾಗೂ ನೇಟಿವ್ ಕ್ರಾಫ್ಟ್ ಬ್ಯಾನರ್ ನಲ್ಲಿ ಮಗೇಶ್ ರವೀಂದ್ರನ್, ಕುಬೇಂದ್ರನ್ ನಿರ್ಮಾಣ ಮಾಡಿದ್ದು, ದಿಲೀಪ್ ರಾಜ್ ಸೇರಿದಂತೆ ಶಿಲ್ಪ ಮಂಜುನಾಥ್, ಮಧುಸೂದನ್ ಗೋವಿಂದ್, ಅಪೂರ್ವ, ಅಜಯ್ ಶರ್ಮ, ಪ್ರಸನ್ನ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜನೆ ನೀಡಿದ್ದು, ಕೇಶವಮೂರ್ತಿ ಸಂಭಾಷಣೆ, ಕುಬೇಂದ್ರನ್ ಸಂಕಲನ ಹಾಗೂ ಹರ್ಷ ಕುಮಾರ್ ಗೌಡ ಛಾಯಾಗ್ರಾಹಣವಿದೆ.
`ಒಂದು ಸಿನಿಮಾ ಆರ್ಗ್ಯಾನಿಕ್ ಆಗಿ ಹೇಗೆ ಶುರುವಾಗಬೇಕು ಆ ರೀತಿಯಾಗಿ ಶುರುವಾಗಿದೆ. ಸಿನಿಮಾ ಶುರು ಮಾಡಿದಾಗಲೇ ನಿರ್ಧರಿಸಿದೆವು. ಅದೇಗೆ ಕರೆದುಕೊಂಡು ಹೋಗುತ್ತೆ ಹಾಗೇ ಕರೆದುಕೊಂಡು ಹೋಗಿ ಬಿಡಲಿ ಎಂದುಕೊಂಡೆವು. ಕಂಪ್ಲೀಟ್ ಸರೆಂಡರ್ ಆಗಿ ಬಿಟ್ಟೆವು. ಮೂರು ಶೆಡ್ಯೂಲ್‌ನಲ್ಲಿ ಸಿನಿಮಾ ಮುಗಿಸಿದೆವು. ಸಿನಿಮಾ ಕಂಪ್ಲೀಟ್ ಜನರ ಮಧ್ಯೆಯೇ ನಡೆಯುತ್ತದೆ. ಎಲ್ಲಾ ಜನತೆಗೂ ಬೇಕಾದಂತ ಕಂಟೆAಟ್ ಇದಾಗಿದೆ. ಸಂಕ್ರಾಂತಿಗೆ ಕನ್ನಡ ಸಿನಿಮಾ ರಿಲೀಸ್ ಆಗಲ್ಲ ಎಂಬ ಬೇಸರವನ್ನ ನಮ್ಮ ತಂಡ ತಣಿಸಲಿದೆ. ಎಲ್ಲರೂ ಥಿಯೇಟರ್‌ಗೆ ಬಂದು ಸಿನಿಮಾವನ್ನು ನೋಡಿ’
ಕೇಶವಮೂರ್ತಿ, ನಿರ್ದೇಶಕ