ನೈಸ್ ರೋಡ್ ಎಂಬ ಹೆಸರಿನಿಂದ ಸದ್ದುಮಾಡಿದ್ದ ಚಿತ್ರದ ಹೆಸರನ್ನು ‘ನೈಟ್ ರೋಡ್’ ಎಂದು ಬದಲಿಸಲಾಗಿದೆ. ಈ ಹಿಂದೆ ಶೀರ್ಷಿಕೆಬದಲಿಸುವಂತೆ ನೈಸ್ ರೋಡ್ ಆಡಳಿತ ಮಂಡಳಿ ನೋಟೀಸ್ ನೀಡಿತ್ತು.ಹೀಗಾಗಿ, ಚಿತ್ರತಂಡ ಶೀರ್ಷಿಕೆ ಬದಲಿಸಿದೆ.ಇದೀಗ ‘ನೈಟ್ ರೋಡ್’ ಚಿತ್ರ ಬಿಡುಗಡೆಗೆ ಸಜ್ಜುಗೊಂಡಿದೆ.
ಅಪಘಾತದಿಂದ ಮೃತಪಟ್ಟ ಯುವಕನ ಅಸಹಜ ಸಾವಿನ ತನಿಖೆಗೆ ಮುಂದಾಗುವ ನಾಯಕ ಆಧ್ಯಾತ್ಮದತ್ತ ವಾಲುತ್ತಾನೆ. ಹೀಗೆ ತಿರುವು ಪಡೆಯುವ ಚಿತ್ರದ ಪ್ರತಿ ದೃಶ್ಯದಲ್ಲೂ ಪ್ರೇಕ್ಷಕರ ಹೃದಯ ಬಡಿತವನ್ನು ಹೆಚ್ಚಿಸುವ ಜೊತೆಗೆ ಯೋಚನೆಯ ಓರೆಗಲ್ಲಿಗೆ ಹಚ್ಚುತ್ತದೆ. ಕ್ಲೈಮಾಕ್ಸ್ ವೇಳೆಗಂತೂ ನೋಡುಗರನ್ನು ತನ್ನಲ್ಲಿ ಆವಾಹನೆ ಮಾಡಿಕೊಂಡಿರುತ್ತದೆ ಎನ್ನುತ್ತದೆ ಚಿತ್ರತಂಡ.
ಈ ಹಿಂದೆ ಗೋಪಾಲ್ ಹಳೇಪಾಳ್ಯ ‘ತಾಂಡವ’ ಚಿತ್ರವನ್ನು ನಿರ್ದೇಶಿಸಿದ್ದರು. ಕಳೆದ 15ವರ್ಷಗಳಿಂದ ಸಿನೆಮಾ ರಂಗದಲ್ಲಿ ಬರವಣಿಗೆ ಸೇರಿದಂತೆ ನಿರ್ದೇಶನದ ವಿಭಾಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ, ತಮ್ಮ 2ನೇ ಚಿತ್ರವನ್ನು ಪುನರ್ ಗೀತಾ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಗೋಪಾಲ್ ಹಳೇಪಾಳ್ಯ ಅವರೇ ನಿರ್ಮಾಣ ಮಾಡುವ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಎನ್.ರಾಜು ಗೌಡರು ಚಿತ್ರವನ್ನು ಅರ್ಪಿಸಿದ್ದಾರೆ.
ತಾರಾಗಣದಲ್ಲಿ ಧರ್ಮ, ಜ್ಯೋತಿ ರೈ, ಗಿರಿಜಾ ಲೋಕೇಶ್, ಗೋವಿಂದೇಗೌಡ(ಜಿ.ಜಿ), ರವಿಕಿಶೋರ್,. ಸಚ್ಚಿ, ಮಂಜು ಮೈಸೂರ್,ಪ್ರಭು, ರೇಣು ಶಿಕಾರಿ, ಸುರೇಖಾ,ಚಂದ್ರು,ಮೂರ್ತಿ,ಮಂಜು ಕ್ರಿಷ್ ಇದ್ದಾರೆ. ಸತೀಶ್ ಆರ್ಯನ್ ಸಂಗೀತದ ಮೋಡಿಇದೆ, ಪ್ರವೀಣ್ ಶೆಟ್ಟಿ ಛಾಯಾಗ್ರಹಣ,ಜೀವನ್ ಪ್ರಕಾಶ್ ಸಂಕಲನ, ರೋಹನ್ ದೇಸಾಯಿ ಡಿಟಿಎಸ್ ಮಾಡಿದ್ದಾರೆ.