RATING /5
ಕೊರೋನಾದ ಲಾಕ್‌ಡೌನ್ ಸಮಯದಲ್ಲಿ ಅದೆಷ್ಟು ಜನರ ಬದುಕು ಲಾಕ್ ಆಯ್ತೋ ಗೊತ್ತಿಲ್ಲ, ಆದರೆ ಅಂತಹ ಸಂದರ್ಭವನ್ನು ಬೇಸ್ ಆಗಿಟ್ಟುಕೊಂಡು ಸಾಕಷ್ಟು ಭಾಷೆಗಳಲ್ಲಿ ವಿಭಿನ್ನ ಚಿತ್ರಗಳು ತೆರೆಕಂಡವು. ಈಗ ಇದೇ ಕೋರೋನಾ ಲಾಕ್‌ಡೌನ್ ಅನ್ನೇ ಒನ್‌ಲೈನ್ ಕಥೆ ಮಾಡಿಕೊಂಡ `ನೈಟ್ ಕರ್ಫ್ಯೂ’ ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿದೆ. ಹಾಗಿದ್ದರೆ `ನೈಟ್ ಕರ್ಫ್ಯೂ’ ಚಿತ್ರದಲ್ಲಿರುವ ಟರ್ನ್&ಟ್ವಿಸ್ಟ್ ಆದರೂ ಏನು? ಚಿತ್ರ ರಿಲೀಸ್‌ಗೂ ಮುನ್ನ ರಿಲೀಸ್ ಅದ trailerನಲ್ಲಿ ಒಂದು ಅಸ್ಪತ್ರೆಯನ್ನು ಕೂಡ ನಿರ್ದೇಶಕರು ಪಾತ್ರವನ್ನಾಗಿಸಿ ಒಂದು ಮೆಡಿಕಲ್ ಮಾಫಿಯಾದ ಕಥೆಯನ್ನು ಹೇಳಲು ಹೊರಟಿದ್ದಾರೆ ಎಂಬ ಗುಮಾನಿ ಮೂಡಿತ್ತು, ಆದರೆ ಮೆಡಿಕಲ್ ಮಾಫಿಯಾದ ಜೊತೆ ಒಂದು ರೋಚಕ ಮರ್ಡರ್ ಮಿಸ್ಟರಿಯನ್ನು ಹೇಳಿರೋದು ನಿಜಕ್ಕೂ ಚಿತ್ರವನ್ನು ಇಂಟ್ರೆಸ್ಟಿ0ಗ್ ಆಗಿಸಿದೆ.
ಇನ್ನಷ್ಟು ಓದಿಗಾಗಿ:- Matinee Movie Review: `ದೆವ್ವ’ವೊಂದು ನಾಮ ಹಲವು!
ಕೋವಿಡ್ ಸಮಯದಲ್ಲಿ ಕೋವಿ ಹಿಡಿದು ರಾತ್ರಿ ಪಹರೆ ಕಾಯುತ್ತಿದ್ದ ಪೋಲಿಸರು, ಅಸ್ಪತ್ರೆಯಲ್ಲಿ ಬೆಡ್‌ಗಾಗಿ ಪರದಾಡುತ್ತಿದ್ದ ರೋಗಿಗಳು.. ಇಂತಹ ಸಂದರ್ಭದಲ್ಲಿ `ನೈಟ್ ಕರ್ಫ್ಯೂ’ ವಿಧಿಸಿದರೆ ಜನರ ಪಾಡು ಏನಾಗಬಹುದು ಜೊತೆಗೆ ಅಲ್ಲೊಂದು ಮರ್ಡರ್ ಸಂಭವಿಸಿದರೆ ಇಡೀ ಸಮುದಾಯ ಅದಕ್ಕೆ ಹೇಗೆ ಸ್ಪಂದಿಸಬಹುದು ಎಂಬುದನ್ನು ಚಿತ್ರದಲ್ಲಿ ಮನಮುಟ್ಟುವಂತೆ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಇನ್ನು ಚಿತ್ರದ ಪಾತ್ರಗಳ ಬಗ್ಗೆ ಹೇಳುವುದಾದರೆ. ಮನೆ-ಮಠ ಬಿಟ್ಟು ರೋಗಿಗಳ ಅರೈಕೆಯೇ ಪರಮ ಧ್ಯೇಯ ಎಂದು ಬಾಳುತ್ತಿರುವ ದುರ್ಗಾ(ಮಾಲಾಶ್ರೀ) ಒಂದೆಡೆಯಾದರೆ, ಇನ್ನೊಂದೆಡೆ ದುರ್ಗಾಳಿಗೆ ಸಾಥ್ ನೀಡುತ್ತಿರುವ ಡಾಕ್ಟರ್ ವೇದ(ರಂಜನಿ ರಾಘವನ್). ಇವರಿಬ್ಬರೂ ಕೆಲಸ ಮಾಡುತ್ತಿರುವ ಆಸ್ಪತ್ರೆಗೆ ಅಂದೊ0ದು ರಾತ್ರಿ ಇಬ್ಬರು ವ್ಯಕ್ತಿಗಳು ಒಬ್ಬ ರೋಗಿಯ ಜೊತೆ ಬರುತ್ತಾರೆ. ಕೋವಿಡ್‌ನಿಂದಾಗಿ ಸಾವಿನ ಅಂಚಿನಲ್ಲಿರುತ್ತಾಳೆ ಆ ರೋಗಿ. ಆದರೆ ಬೆಡ್ ಇಲ್ಲದ ಕಾರಣ ವೇದಾಳಿಗೆ ರೋಗಿಯನ್ನು ಎಡ್ಮಿಟ್ ಮಾಡಿಕೊಳ್ಳಲಾಗದ ಧರ್ಮಸಂಕಟದಲ್ಲಿರುತ್ತಾಳೆ. ಕೊನೆಗೆ, ರೋಗಿಯ ಜೊತೆಗೆ ಬಂದ ವ್ಯಕ್ತಿಗಳ ಒತ್ತಾಯಕ್ಕೆ ಮಣಿದು ಎಡ್ಮಿಟ್ ಮಾಡಿಕೊಳ್ಳುವ ತೀರ್ಮಾನಕ್ಕೆ ಬರುತ್ತಾಳೆ. ಆದರೆ, ರೋಗಿಯ ಉಸಿರು ಅದಾಗಲೇ ನಿಂತಿರುತ್ತದೆ! ಪೋಸ್ಟ್ ಮಾರ್ಟಮ್ ನಂತರ ಗೊತ್ತಾಗುತ್ತದೆ ಆಕೆ ಸತ್ತಿದ್ದು ಕೋವಿಡ್‌ನಿಂದ ಅಲ್ಲ ಅದೊಂದು ಕೊಲೆ ಎಂದು. ಅಸಲಿಗೆ ನಿರ್ದೇಶಕ ರವೀಂದ್ರ ವೆಂಶಿ ಇಲ್ಲಿಂದ ಚಿತ್ರವನ್ನು ಕಟ್ಟಿಕೊಟ್ಟ ರೀತಿ ಅದ್ಭುತವಾಗಿದೆ. ಮತ್ತೆ, ಕಥೆಗೆ ಬರೋದಾದ್ರೆ ಕಥೆಯಲ್ಲಿ ಒಬ್ಬ ಫೇಮಸ್ ವ್ಯಕ್ತಿಯ ಎಂಟ್ರಿಯಾಗುತ್ತದೆ. ಆತ ಆಕೆ ಕೋವಿಡ್‌ನಿಂದಾಗಿಯೇ ಸತ್ತಿದ್ದಾಳೆ ಎಂದು ಡಾಕ್ಟರ್ ಸರ್ಟಿಫೀಕೇಟ್ ನೀಡಬೇಕೆಂದು ತನ್ನೆಲ್ಲಾ influences ಬಳಸಲು ಶುರು ಮಾಡುತ್ತಾನೆ. ಅವನಿಗೆ ಡಾಕ್ಟರ್ ಸರ್ಟಿಫೀಕೇಟ್ ಸಿಗುತ್ತಾ? ಇಡೀ ಘಟನೆಗೆ ದುರ್ಗಾ ಮತ್ತು ವೇದ ಹೇಗೆ ಸ್ಪಂದಿಸುತ್ತಾರೆ? ಅದೊಂದು ಪ್ಲಾನ್ಡ್ ಮರ್ಡರಾ? ಎಲ್ಲಾ ಪ್ರಶ್ನೆಗಳಿಗೂ ನಿರ್ದೇಶಕರು ಸಮರ್ಪಕ ಲಾಜಿಕ್‌ನೊಂದಿಗೆ ಉತ್ತರ ಕೊಡುತ್ತಾ ಹೋಗುತ್ತಾರೆ.
ಇನ್ನಷ್ಟು ಓದಿಗಾಗಿ:- ‘Kerebete’ movie review : ಪ್ರೇಮ `ಬೇಟೆ’ ಯ ಹಿಂದೆ ಮರ್ಯಾದಾ ಹತ್ಯೆ!
`ನೈಟ್ ಕರ್ಫ್ಯೂ’ ಮಾಲಾಶ್ರೀ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಚಿತ್ರ. ಆದರೆ ನಿರ್ದೇಶಕರಿಗೆ ಖಾಕಿ ಹಾಕದೆ ಬಿಳಿ ಪೋಷಾಕು ಹಾಕಿದ್ದಾರೆ. ಹಾಂಗ0ತ ಇಲ್ಲೂ `ಡಾಕ್ಟರ್ ಫೈಟ್’ಗೆನೂ ಕಮ್ಮಿ ಇಲ್ಲ. ಫಸ್ಟ್ ಹಾಫ್‌ನಲ್ಲಿ ವಿಲನ್‌ಗಳು ದುರ್ಗಾ ಅಂಡ್ ಟೀಮ್ ಅನ್ನು ಅರಿವಿಲ್ಲದಂತೆ ಹೇಗೆ ಕೆಡ್ಡಾಕ್ಕೆ ತಳ್ಳುತ್ತಾರೆ ಎಂಬುದನ್ನು ತೋರಿಸಲಾಗಿದ್ದು, ನೆಕೆಂಡ್ ಹಾಫ್‌ನಲ್ಲಿ ದುರ್ಗಾ, ದುರ್ಗೆ ರೂಪ ತಾಳಿ ಅವರೆನ್ನೆಲ್ಲಾ ಹೇಗೆ ಬಗ್ಗು ಬಡಿಯುತ್ತಾಳೆ ಎಂಬುದನ್ನು ಬೆಸ್ಟ್ screenplay ಮೂಲಕ ಹೇಳಲಾಗಿದೆ. ಇಡೀ ಕಥೆಯನ್ನು ಒಂದು ರಾತ್ರಿಯಲ್ಲಿ, ಒಂದೇ ಆಸ್ಪತ್ರೆಯಲ್ಲಿ ಕಟ್ಟಿಕೊಡಲಾಲಾದರೂ ಎಲ್ಲೂ ಬೋರ್ ಅನ್ನಿಸಿವುದಿಲ್ಲ. ಯಾಕೆಂದರೆ ಇಲ್ಲಿ ಲೋಕೇಶನ್ ಮತ್ತು ಕತ್ತಲು ಕೂಡ ಪಾತ್ರವಾಗಿದೆ. ನಿರ್ದೇಶಕರು ಸೆಕೆಂಡ್ ಹಾಫ್‌ನಲ್ಲಿ ಸಂಕಲನಕಾರ ಸಿ.ರವಿಚಂದ್ರನ್ ಅವರಿಗೆ ಇನ್ನಷ್ಟು freedom ಕೊಟ್ಟಿದ್ದರೆ ಚಿತ್ರ ಇನ್ನಷ್ಟು ರೋಚಕತೆಯಿಂದ ಕೂಡಿರುತ್ತಿತ್ತು. ನಟನೆಯ ವಿಚಾರಕ್ಕೆ ಬಂದರೆ ಮಾಲಾಶ್ರೀ, ರಂಜನಿ ರಾಘವನ್, ಪ್ರಮೋದ್ ಶೆಟ್ಟಿ, ಬಾಲ ರಾಜವಾಡಿ, ವರ್ಧನ್ ತೀರ್ಥಹಳ್ಳಿ, ಅಶ್ವಿನ್ ಹಾಸನ್.. ಹೀಗೆ ಎಲ್ಲಾ ಕಲಾವಿದರು ಸ್ಪರ್ಧೆಗೆ ಬಿದ್ದು ನಟಿಸಿದ್ದಾರೆ. ಇನ್ನು ರಂಗಾಯಣ ರಘುವನ್ನು ನಿರ್ದೇಶಕರು ಅತಿಥಿ ನಟನಂತೆ ಬಳಸಿಕೊಂಡಿರೋದು ಸಿನಿಮಾ ವ್ಯವಹಾರದ ದೃಷ್ಟಿಯಿಂದ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇಡೀ ಚಿತ್ರವನ್ನು ರಾತ್ರಿ ಕಟ್ಟಿಕೊಟ್ಟಿರುವ ಛಾಯಾಗ್ರಾಹಕ ಪ್ರಮೋದ್ ಭಾರತೀಯ ರವೀಂದ್ರ ವೆಂಶಿಯ ಬಹುಪಾಲು ಕನಸು ನನಸಾಗಲು ಕಾರಣ. ಹಾಡುಗಳಿಲ್ಲದ ಈ ಮರ್ಡರ್ ಸಸ್ಪೆನ್ಸ್ ಚಿತ್ರದಲ್ಲಿ ಎಮ್.ಎಸ್.ಮಾರುತಿಯವರ ಹಿನ್ನಲೆ ಸಂಗೀತ ಅದ್ಭುತವಾಗಿದೆ. ಒಟ್ಟಾರೆ, ನಿರ್ದೇಶಕರು ಇದೊಂದು ಟಿಪಿಕಲ್ ಮಾಲಾಶ್ರೀ ಚಿತ್ರವಾಗಿಸದೆ, ಕೋವಿಡ್ ಅನ್ನು ಬೇಸ್ ಆಗಿಟ್ಟುಕೊಂಡು ಸಾವು-ಬದುಕಿನ ನಡುವಿನ ಹೋರಾಟದ ಕಥೆಯನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ.
by-B.NAVEEN KRISHNA PUTTUR