ಹೊಸ ಫೋಟೋಶೂಟ್ ಮೂಲಕ ಹುಡುಗರ ದಿಲ್ ಧಡಕ್ ಹೆಚ್ಚಿಸಿದ ನಿಧಿ ಸುಬ್ಬಯ್ಯ
ಆಗ್ಗಾಗ್ಗೆ ವಿಭಿನ್ನ ಕಾಸ್ಟ್ಯೂಮ್ ಧರಿಸಿ ಫೋಟೋಶೂಟ್ ಮಾಡಿಸುವ ಸ್ಯಾಂಡಲ್ವುಡ್ ನಟಿ ನಿಧಿ ಸುಬ್ಬಯ್ಯ ಇದೀಗ ಮತ್ತಷ್ಟು ಹೊಸ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ನಿಧಿ ಪೋಟೋಗಳನ್ನು ನೋಡಿ ಫಾಲೋವರ್ಗಳು ದಿನೇ ದಿನೆ ನೀವು ಬಹಳ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದೀರ, ಏನು ಇದರ ಗುಟ್ಟು…? ಎಂದು ಕೇಳುತ್ತಿದ್ದಾರೆ.
2010 ರಲ್ಲಿ ಬಿಡುಗಡೆಯಾದ ಪಂಚರಂಗಿ ಸಿನಿಮಾದಲ್ಲಿ ದಿಗಂತ್ ಗೆ ಜೋಡಿಯಾಗಿ ನಿಧಿ ಕಾಣಿಸಿಕೊಂಡಿದ್ದರು. ನಂತರದಲ್ಲಿ ಅಜಯ್ ರಾವ್ ಗೆ ನಾಯಕಿಯಾಗಿ ಕೃಷ್ಣನ್ ಮ್ಯಾರೇಜ್ ಸ್ಟೋರಿ, ಪುನೀತ್ ಅವರೊಂದಿಗೆ ಅಣ್ಣಾ ಬಾಂಡ್ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು.
ಕನ್ನಡದಲ್ಲಿ ಕೆಲವೇ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು ಕೂಡ ನಿಧಿ ಕನ್ನಡ ಸಿನಿ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ನಿಧಿ ಸುಬ್ಬಯ್ಯ ಮದುವೆಯಾದ ನಂತರ ಚಿತ್ರರಂಗದಿಂದ ಸ್ಪಲ್ಪ ದೂರ ಉಳಿದುಕೊಂಡಿದ್ರು.
ಆದರೆ ಈಗ ಸಖತ್ ಸ್ಲೀಮ್ ಆ್ಯಂಡ್ ಫಿಟ್ ಆಗಿ ಮತ್ತೆ ಚಿತ್ರರಂಗಕ್ಕೆ ವಾಪಾಸ್ ಆಗುವ ಮುನ್ಸೂಚನೆ ಕೊಟ್ಟಿದ್ದಾರೆ. ನಿಧಿ ಸುಬ್ಬಯ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.
ಮೊದಲಿಗಿಂತಲೂ ಸ್ಲೀಮ್ ಆಗಿರುವ ನಿಧಿ ಸುಬ್ಬಯ್ಯ ತಮ್ಮ ಹೊಸ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಸದ್ಯ ನಿಧಿ ಸುಬ್ಬಯ್ಯ ಮತ್ತೆ ಚಿತ್ರರಂಗದಲ್ಲಿ ಟಾಪ್ ನಟಿಯಾಗಲು ಎಲ್ಲಾ ರೀತಿಯ ತಯಾರಿಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.