Sandalwood Leading OnlineMedia

ನ್ಯೂ ಕ್ರಶ್ ಶ್ರೇಯಾಂಕ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು!

ಭಾನುವಾರ, ಮಾರ್ಚ್ 17ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿ ಹಿಡಿಯಿತು.

 

ನಂತರ, ಆರ್‌ಸಿಬಿ ಸ್ಟಾರ್ ಆಲ್‌ರೌಂಡರ್, ಕನ್ನಡತಿ ಶ್ರೇಯಾಂಕಾ ಪಾಟೀಲ್ ತಂಡದ ನಿಷ್ಠಾವಂತ ಅಭಿಮಾನಿಗಳಿಗೆ ಟ್ರೋಫಿ ಅರ್ಪಿಸುವ ಮೂಲಕ ಎಲ್ಲರ ಮನ ಗೆದ್ದರು. ಫೈನಲ್ ಪಂದ್ಯದಲ್ಲಿ 4 ವಿಕೆಟ್ ಪಡೆದ ಶ್ರೇಯಾಂಕಾ ಪಾಟೀಲ್ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು

 

ಅಲ್ಲದೆ, 2ನೇ ಆವೃತ್ತಿಯ ಪಂದ್ಯಾವಳಿಯುದ್ದಕ್ಕೂ ಆಡಿದ 8 ಇನ್ನಿಂಗ್ಸ್‌ಗಳಿಂದ 13 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಜೊತೆಗೆ 5 ಲಕ್ಷ ರೂಪಾಯಿ ಗೆದ್ದರು. ಇನ್ನು ಪಂದ್ಯಾವಳಿಯ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ಪಡೆದರು.

ಶ್ರೇಯಾಂಕಾ ಪಾಟೀಲ್ ಬಾಲ್ಯ ಜೀವನ:

ಆರ್‌ಸಿಬಿ ಸ್ಟಾರ್ ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ್ ಹುಟ್ಟಿದ್ದು 2002ರ ಜುಲೈ 31ರಂದು ಬೆಂಗಳೂರಿನಲ್ಲಿ. ಅವರ ತಂದೆ ರಾಜೇಶ್ ಪಾಟೀಲ್ ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದು, ಸ್ವಂತ ಉದ್ಯೋಗ ನಡೆಸುತ್ತಿದ್ದಾರೆ. ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿರುವ ಶ್ರೇಯಾಂಕಾ ಪಾಟೀಲ್ ಮುಂದೊಂದು ದಿನ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತೇನೆ ಅಂದುಕೊಂಡಿರಲಿಲ್ಲ.
ಇದನ್ನು ಓದು:ಪುನೀತ್ ಜನ್ಮಕ್ಕೆ ಅನ್ನದಾನ ಮಾಡಿದ ನಮ್ರತಾ ಗೌಡ: ಬಿಗ್ಬಾಸ್‌ ಸ್ಪರ್ಧಿಯ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ

ಶ್ರೇಯಾಂಕಾ ಪಾಟೀಲ್ ಅವರಿಗೆ ಒಬ್ಬ ಸಹೋದರಿ ಮತ್ತು ಒಬ್ಬ ಸಹೋದರ ಕೂಡ ಇದ್ದಾರೆ. ಸದಾ ನಗುಮುಖ ಹೊಂದಿರುವ ಶ್ರೇಯಾಂಕಾ ಭಾರತ ತಂಡದ ಪ್ರಮುಖ ಸ್ಪಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಚಿನಕುರಳಿಯಂತೆ ಕುಣಿದಾಡುತ್ತಾ ಸದಾ ಲವಲವಿಕೆಯಿಂದ ಇರುತ್ತಾಳೆ.

ಒಮ್ಮೆ ಶಾಲೆ ಮುಗಿಸಿ ಹೋಗುತ್ತಿದ್ದಾಗ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಟಗಾರರ ಅಭ್ಯಾಸ ಮಾಡುವುದನ್ನು ನೋಡಿ ತಾನೂ ಕ್ರಿಕೆಟರ್ ಆಗಬೇಕು ಅಂದುಕೊಂಡರಂತೆ. ಆಗ ಬಿತ್ತಿದ ಕ್ರಿಕೆಟ್ ಕನಸು ಇದೀಗ ನನಸಾಗಿದ್ದು ಮಾತ್ರವಲ್ಲದೆ, ಭಾರತ ಹಿರಿಯರ ಮಹಿಳಾ ತಂಡದಲ್ಲಿ ಆಡುತ್ತಿದ್ದಾರೆ. ಶ್ರೇಯಾಂಕಾ ಪಾಟೀಲ್ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿದ್ದಾರೆ. ಶಾಲಾ ದಿನಗಳಲ್ಲೇ ವಿರಾಟ್ ಕೊಹ್ಲಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಳು.
ಕಳೆದ ವರ್ಷ ಆರ್‌ಸಿಬಿ ಮಹಿಳಾ ತಂಡ ಸತತ ಐದು ಪಂದ್ಯಗಳನ್ನು ಸೋತಿದ್ದಾಗ, ವಿರಾಟ್ ಕೊಹ್ಲಿ ಧೈರ್ಯ ತುಂಬಿ, ಕೆಲವು ಸಲಹೆ ನೀಡಿದ್ದರು. ಆಗ ಕೊಹ್ಲಿಯ ಮಾತು ಕೇಳಿಸಿಕೊಳ್ಳದೇ ಕೇವಲ ಅವರನ್ನೇ ನೋಡುತ್ತಿದ್ದೆ ಎಂದು ಸ್ವತಃ ಶ್ರೇಯಾಂಕಾ ಹೇಳಿಕೊಂಡಿದ್ದಾಳೆ.

ಶ್ರೇಯಾಂಕಾ ಪಾಟೀಲ್ ಕುರಿತ ಮಾಹಿತಿ ನಿಕ್ ನೇಮ್ –

ಶ್ರೇಯ್ ಜನಿಸಿದ ಸ್ಥಳ – ಬೆಂಗಳೂರು

ಎತ್ತರ – 5.9 ಅಡಿ

ಸಹೋದರ – ಆದರ್ಶ್ ಪಾಟೀಲ್

ಸಹೋದರಿ – ಭೂಮಿಕಾ ಪಾಟೀಲ್

ಬ್ಯಾಟಿಂಗ್ ಶೈಲಿ – ಬಲಗೈ

ಬೌಲಿಂಗ್ ಶೈಲಿ – ಬಲಗೈ

ಪಾತ್ರ – ಆಲ್‌ರೌಂಡರ್

ಪ್ರತಿನಿಧಿಸಿದ ತಂಡಗಳು – ಕರ್ನಾಟಕ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಭಾರತ ಎ ಮಹಿಳಾ ತಂಡ,

ಗಯಾನಾ ಅಮೆಜಾನ್ ವಾರಿಯರ್ಸ್, ಭಾರತ.


ಶ್ರೇಯಾಂಕಾ ಪಾಟೀಲ್ ಕರ್ನಾಟಕ ಮಹಿಳಾ ತಂಡದಿಂದ ಕಳೆದ ವರ್ಷ ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಆರ್‌ಸಿಬಿ ಮಹಿಳಾ ತಂಡಕ್ಕೆ ಆಯ್ಕೆಯಾದರು. ನಂತರ ಅಲ್ಲಿನ ಉತ್ತಮ ಪ್ರದರ್ಶನವು ಅವರನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್‌ವರೆಗೂ ಕರೆದುಕೊಂಡು ಹೋಯಿತು.

2023ರಲ್ಲಿ 21 ವಷದೊಳಗಿನ ಮಹಿಳಾ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಮಿಂಚಿದ ಬಳಿಕ ಶ್ರೇಯಾಂಕಾ ಪಾಟೀಲ್ ಅವರು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 2023ರ ಡಿಸೆಂಬರ್ 6ರಂದು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ಹಿರಿಯರ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದರು.

ಶ್ರೇಯಾಂಕಾ ಪಾಟೀಲ್ ತನ್ನ ಉತ್ಸಾಹಭರಿತ ವ್ಯಕ್ತಿತ್ವ, ಪಟಪಟನೆ ಮಾತನಾಡುವ ಮತ್ತು ಕ್ರಿಕೆಟ್ ಬಗೆಗಿನ ಅತಿಯಾದ ಒಲವಿನಿಂದ ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಹೊಸ ವಾತಾವರಣ ನಿರ್ಮಿಸಿದ್ದಾರೆ.

ಇತ್ತೀಚಿಗೆ ಶ್ರೇಯಾಂಕಾ ಪಾಟೀಲ್ ಅಭ್ಯಾಸ ಮಾಡುತ್ತಿದ್ದಾಗ ನೀಡಿದ ಹೇಳಿಕೆ ಭಾರೀ ವೈರಲ್ ಆಗಿತ್ತು. “”ಖಡಕ್ ರೊಟ್ಟಿ, ಶೇಂಗಾ ಚಟ್ನಿ, ಎಣಗಾಯಿ ಪಲ್ಯ ಕೊಟ್ರೆ ಇವಾಗ್ಲೂ ಇಲ್ಲೇ ಕುತ್ಕೊಂಡು ನಿಂತೀನಿ, ಅಷ್ಟು ಇಷ್ಟ. ನಮ್ಮ ಅಮ್ಮ ಮಾಡೋದು, ನಮ್ ಅಜ್ಜಿ ತುಂಬಾ ಚೆನ್ನಾಗಿ ಮಾಡ್ತಾರೆ. ಅದು ತಿಂದ್ರೇನೆ ಒಂಥರಾ ತೃಪ್ತಿ. ಫಿಜ್ಜಾ, ಬರ್ಗರ್ ನಾನ್ ಇಷ್ಟಪಡಲ್ಲ,” ಎಂದಿದ್ದರು.

ಇತ್ತೀಚಿಗೆ ಆರ್‌ಸಿಬಿ ತಂಡ ಮಹಿಳಾ ಪ್ರೀಮಿಯರ್ ಲೀಗ್ ಗೆದ್ದ ನಂತರ, ಸಂತೋಷಕ್ಕೆ ಪಾರವೇ ಇರಲಿಲ್ಲ ಎಂಬಂತೆ ಶ್ರೇಯಾಂಕಾ ಪಾಟೀಲ್ ಇಡೀ ಮೈದಾನದ ತುಂಬೆಲ್ಲಾ ಹುಚ್ಚೆದ್ದು ಕುಣಿದಾಡಿದರು.

ಇದನ್ನು ಓದು: ಹದಿನೇಳು ನಿಮಿಷಗಳಲ್ಲಿ ಮನಮುಟ್ಟುವ ಕಥೆ ಹೇಳುವ ಕಿರುಚಿತ್ರ “ದ್ವಂದ್ವಂ ದ್ವಯಂ”

 

Share this post:

Related Posts

To Subscribe to our News Letter.

Translate »