ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ನಿರ್ದೇಶನಕ್ಕೆ ಹೆಸರುವಾಸಿಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದಿನ ಚಿತ್ರ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ಬಹಳ ವರ್ಷಗಳ ನಂತರ ಉಪೇಂದ್ರ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದರಿಂದ ಅಭಿಮಾನಿಗಳಂತೂ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.
ಆಗಾಗ್ಗೆ ವಿಭಿನ್ನ ಫೋಸ್ಟರ್ ಬಿಡುಗಡೆ ಮೂಲಕ ಚಿತ್ರದ ಆಪ್ ಡೇಟ್ ನೀಡುವ ಉಪೇಂದ್ರ, ಫೋಸ್ಟರ್ ವೊಂದನ್ನು ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಬಡಿದ್ದೆಬಿಸುವಿರಾ… ಎಂದು ಶೀರ್ಷಿಕೆಯಡಿ ಫೋಸ್ಟರ್ ಹಂಚಿಕೊಳ್ಳುವ ಮೂಲಕ ಉಪೇಂದ್ರ ಅಭಿಮಾನಿಗಳ ತಲೆಗೆ ಮತ್ತೆ ಹುಳಬಿಟ್ಟಿದ್ದಾರೆ. ಈ ಹೊಸ ಪೋಸ್ಟರ್‌ನ್ನು ನೋಡಿದವರಿಗೆ ಅರೆ ಘಳಿಗೆ ನಿಬ್ಬೆರಗಾಗುವುದು ಪಕ್ಕಾ. ಇದನ್ನು ನೋಡಿದ ತಕ್ಷಣ ಪೋಸ್ಟರ್ ಒಳಗೊಂದು ಪೋಸ್ಟರ್ ಇರುವಂತೆ ಕಾಣುತ್ತದೆ.
ಕುದುರೆಯಾಕಾರದ ಮೂರು ಕಣ್ಣುಗಳಿರುವ ಫೋಸ್ಟರ್ ನಲ್ಲಿ ‘ಬುದ್ಧಿಯ ಬಿರುಗಾಳಿ’ ಎಂಬ ಶೀರ್ಷಿಕೆಯಿದೆ. ಚಿತ್ರ ವಿಚಿತ್ರದ ಈ ಫೋಸ್ಟರ್ ಗೆ ಅಭಿಮಾನಿಗಳು ಪಿಧಾ ಆಗಿದ್ದು, ಮತ್ತಷ್ಟು ಚಿತ್ರಗಳನ್ನು ಉಪೇಂದ್ರ ನಿರ್ದೇಶನ ಮಾಡಲಿ ಎಂದು ಹೇಳುತ್ತಿದ್ದಾರೆ.
ಈ ಚಿತ್ರದ ಟೈಟಲ್ ಏನು ಎಂಬುದು ಜನರ ಆಲೋಚನೆಗೆ ಬಿಟ್ಟಿದ್ದು. ‘ಯು’ ‘ಐ’ ಎಂದುಕೊಳ್ಳಬಹುದು, ಮೂರು ನಾಮ ಎಂದುಕೊಳ್ಳಬಹುದು ನೀನು ಮತ್ತು ನಾನು ಎಂದು ಬೇಕಾದರು ಅಂದುಕೊಳ್ಳಿ ಎಂದು ಉಪೇಂದ್ರ ಈ ಹಿಂದೆ ಹೇಳಿದ್ದರು. ಈ ಹಿಂದೆ ತನ್ನ ಫಸ್ಟ್ ಲುಕ್‌ನಿಂದ ಜನರ ತಲೆಗೆ ಹುಳ ಬಿಟ್ಟಿದ್ದ ಈ ಚಿತ್ರದ ಹೊಸ ಪೋಸ್ಟರ್ ಇಂದು ರಿಲೀಸ್ ಆಗಿದೆ. ಇದು ನೋಡುಗರ ಮೆದುಳಿಗೆ ಕೈ ಹಾಕುವಂತಿದೆ.
ಈ ಹೊಸ ಪೋಸ್ಟರ್‌ನ್ನು ನೋಡಿದವರಿಗೆ ಅರೆ ಘಳಿಗೆ ನಿಬ್ಬೆರಗಾಗುವುದು ಪಕ್ಕಾ. ಇದನ್ನು ನೋಡಿದ ತಕ್ಷಣ ಪೋಸ್ಟರ್ ಒಳಗೊಂದು ಪೋಸ್ಟರ್ ಇರುವಂತೆ ಕಾಣುತ್ತದೆ. ಸದ್ಯ ಉಪೇಂದ್ರ ನಿರ್ದೇಶನದ “UI” ಚಿತ್ರದ ಈ ಹೊಸ ಪೋಸ್ಟರ್ ಜನರಲ್ಲಿ ಸಿನಿಮಾ ಬಗ್ಗೆ ಇದ್ದ ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಉಪೇಂದ್ರ ಅವರ ಈ ಚಿತ್ರವನ್ನು ಜಿ. ಮನೋಹರನ್, ಕೆ.ಪಿ. ಶ್ರೀಕಾಂತ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದು, ನವೀನ್ ಮನೋಹರನ್ ಸಹ ನಿರ್ಮಾಪಕರಾಗಿದ್ದಾರೆ.