ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ಪತಿ ವಿಘ‍್ನೇಶ್ ಶಿವನ್ ನಡುವೆ ಎಲ್ಲವೂ ಸರಿಯಿಲ್ಲ, ದಂಪತಿ ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂಬ ಗಾಸಿಪ್ ಇಂದು ಹುಟ್ಟಿಕೊಂಡಿತ್ತು. ಆದರೆ ನಂತರ ಆಗಿದ್ದೇ ಬೇರೆ.ನಯನತಾರಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ವಿಘ‍್ನೇಶ್ ಶಿವನ್ ಅವರನ್ನು ಅನ್ ಫಾಲೋ ಮಾಡಿದರು. ಬಳಿಕ ಬೇಸರದ ಸಂದೇಶವೊಂದನ್ನು ಬರೆದುಕೊಂಡರು. ಇದನ್ನು ನೋಡಿ ನಯನತಾರಾ ಮತ್ತು ವಿಘ‍್ನೇಶ್ ನಡುವೆ ಎಲ್ಲವೂ ಸರಿಯಿಲ್ಲ ಎಂದು ಎಲ್ಲಾ ಕಡೆ ಸುದ್ದಿ ಹಬ್ಬಲಾರಂಭಿಸಿತು.
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ನಯನತಾರಾ ಮತ್ತೆ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ವಿಘ‍್ನೇಶ್ ಶಿವನ್ ಅವರನ್ನು ಫಾಲೋ ಮಾಡಿದ್ದಾರೆ. ಅತ್ತ ವಿಘ‍್ನೇಶ್ ಕೂಡಾ ನಯನತಾರಾ ಫೋಟೋ ಸಮೇತ ಜಾಹೀರಾತೊಂದರ ಫೋಟೋ ಪ್ರಕಟಿಸುವ ಮೂಲಕ ಗಾಸಿಪ್ ಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದರು.
20222 ರಲ್ಲಿ ಈ ಜೋಡಿ ಬಹುಕಾಲ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆಲವೇ ತಿಂಗಳಲ್ಲಿ ಬಾಡಿಗೆ ತಾಯ್ತನದ ಮೂಲಕ ಇಬ್ಬರು ಅವಳಿ ಮಕ್ಕಳನ್ನು ಪಡೆದಿದ್ದಾರೆ. ಮದುವೆ ಬಳಿಕ ನಯನತಾರಾ ಬಾಲಿವುಡ್ ನಲ್ಲಿ ಶಾರುಖ್ ಖಾನ್ ಜೊತೆ ಸಿನಿಮಾ ಮಾಡಿದ್ದರು. ಇದರ ನಡುವೆಯೇ ಅವರ ಸಂಬಂಧದ ಬಗ್ಗೆ ಇಂತಹದ್ದೊಂದು ಗಾಸಿಪ್ ಕೇಳಿಬಂದಿದ್ದು ನಿಜಕ್ಕೂ ವಿಪರ್ಯಾಸ.