ಬೆಂಗಳೂರು: ಕನ್ನಡ ಮೂಲದ ನಟ ಅಚ್ಯುತ್ ಕುಮಾರ್ ಈಗ ತಮ್ಮ ಸಹಜ ಅಭಿನಯದಿಂದಾಗಿ ಪರಭಾಷೆಗಳಲ್ಲೂ ಅವಕಾಶ ಗಿಟ್ಟಿಸುತ್ತಿದ್ದಾರೆ.ಅನ್ನಪೂರ್ಣಿ ಎನ್ನುವ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಸೌತ್ ನಂ.1 ನಟಿ ನಯನತಾರಾ ಜೊತೆ ನಟಿಸಿದ್ದರು. ಈ ಸಿನಿಮಾದಲ್ಲಿ ಇಬ್ಬರೂ ಅಪ್ಪ-ಮಗಳ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಈ ಸಿನಿಮಾದ ಬಗ್ಗೆ ನಯನತಾರಾ ಸಂದರ್ಶನವೊಂದರಲ್ಲಿ ಮಾತನಾಡುವಾಗ ಅಚ್ಯುತ್ ಕುಮಾರ್ ಬಗ್ಗೆ ಹಾಡಿಹೊಗಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ನಿಜವಾಗಿಯೂ ಅವರು ನನಗೆ ಅಪ್ಪನಂತೇ ಇದ್ದರು. ಸೆಟ್ ನಲ್ಲಿ ಗಂಭೀರವಾಗಿಯೇ ಇರುತ್ತಿದ್ದರು. ಹೆಚ್ಚು ಮಾತನಾಡುತ್ತಿರಲಿಲ್ಲ. ನಾನಾಗಿಯೇ ಊಟ ಆಯ್ತಾ ಎಂದು ಕೇಳಿದರೆ ಆಯ್ತು ಎನ್ನುವುದೂ ಸ್ಪಷ್ಟವಾಗಿ ಕೇಳದಷ್ಟು ನಕ್ಕು ತಲೆಯಾಡಿಸುತ್ತಿದ್ದರು. ಮೂಲತಃ ಅವರು ತಮಿಳರಲ್ಲ. ಹಾಗಿದ್ದರೂ ಅವರ ಪಾತ್ರವನ್ನು ಎಷ್ಟು ಚೆನ್ನಾಗಿ ನಿಭಾಯಿಸಿದರು ಎಂದರೆ ನನಗೆ ನಿಜವಾದ ತಂದೆಯ ರೀತಿ ಅನಿಸಿತು’ ಎಂದು ಹಾಡಿ ಹೊಗಳಿದ್ದಾರೆ.