Sandalwood Leading OnlineMedia

ಮತ್ತೇ ಆಕ್ಷನ್ ರೂಪದಲ್ಲಿ ಕಾಣಿಸಿಕೊಂಡ ತಮಿಳು ಲೇಡಿ ಸೂಪರ್ ಸ್ಟಾರ್ ನಯನತಾರ!!

‘ಜವಾನ್’ ಸಿನಿಮಾದಲ್ಲಿ ನಯನತಾರಾ ಅವರು ಆಯಕ್ಷನ್ ಮೆರೆಯಲಿದ್ದಾರೆ. ಇದಕ್ಕೆ ಹೊಸ ಪೋಸ್ಟರ್​ಗಳೇ ಸಾಕ್ಷಿ. ಅಭಿಮಾನಿಗಳ
ವಲಯದಲ್ಲಿ ಇದು ವೈರಲ್ ಆಗುತ್ತಿದೆ.
‘ಜವಾನ್’ ಕೇವಲ ಶಾರುಖ್ ಖಾನ್ ಅವರ ಚಿತ್ರವಲ್ಲ. ಅಲ್ಲಿ ಇನ್ನೂ ಕೆಲ ಕಲಾವಿದರು ಪ್ರಮುಖ ಪಾತ್ರವಹಿಸಿದ್ದಾರೆ.

*ಕನ್ನಡಕ್ಕೆ ವಿಕ್ರಂ ವೇದ ಮ್ಯೂಸಿಕ್ ಡೈರೆಕ್ಟರ್ ಎಂಟ್ರಿ…ಶಿವಣ್ಣನ ಹೊಸ ಸಿನಿಮಾಗೆ ಟ್ಯೂನ್ ಹಾಕಲಿದ್ದಾರೆ ಸ್ಯಾಮ್ ಸಿ.ಎಸ್*

ಇತ್ತೀಚೆಗೆ ರಿಲೀಸ್ ಆದ ‘ಜವಾನ್’ ಪ್ರಿವ್ಯೂನಲ್ಲಿ ಅನೇಕ ಕಲಾವಿದರು ಮಿಂಚಿದ್ದರು. ಈ ಸಾಲಿನಲ್ಲಿ ನಯನತಾರಾ ಕೂಡ ಇದ್ದಾರೆ. ಈಗ ಅವರ ಪಾತ್ರ ಹೇಗಿರಲಿದೆ ಎಂಬುದನ್ನು ಶಾರುಖ್ ಖಾನ್ ಅವರು ವಿವರಿಸಿದ್ದಾರೆ. ಹೊಸ ಪೋಸ್ಟರ್ ಹಂಚಿಕೊಂಡು ಅವರು ಚಿತ್ರದ ಬಗ್ಗೆ ಇರುವ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಇದು ವೈರಲ್ ಆಗುತ್ತಿದೆ.

ವಿಜಯ್ ದೇವರಕೊಂಡ ಜೊತೆ  ನಟಿಸಲು  ಕನ್ನಡದ ನಟಿ  ಶ್ರೀಲೀಲಾ  ಬೇಡಿಕೆ ಇಟ್ಟ ಸಂಭಾವನೆ  ಎಷ್ಟು ಗೊತ್ತಾ ?

ನಟಿ ನಯನತಾರಾ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರು ಆಯಕ್ಷನ್ ರೀತಿಯ ಸಿನಿಮಾಗಳನ್ನು ಮಾಡಿಯೂ ಗಮನ ಸೆಳೆದಿದ್ದಾರೆ. ಈ ಮೊದಲು ಅನೇಕ ಸಿನಿಮಾಗಳಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದರು. ಈಗ ‘ಜವಾನ್’ ಸಿನಿಮಾದಲ್ಲೂ ಅವರು ಆಯಕ್ಷನ್ ಮೆರೆಯಲಿದ್ದಾರೆ. ಇದಕ್ಕೆ ಹೊಸ ಪೋಸ್ಟರ್​ಗಳೇ ಸಾಕ್ಷಿ.
ಶಾರುಖ್ ಖಾನ್ ಅವರು ಹಂಚಿಕೊಂಡಿರುವ ಹೊಸ ಪೋಸ್ಟರ್​ನಲ್ಲಿ ನಯನತಾರಾ ಅವರು ಗನ್ ಹಿಡಿದು ನಿಂತಿದ್ದಾರೆ. ಕಣ್ಣಿಗೆ ಕನ್ನಡಕ ಹಾಕಿದ್ದಾರೆ. ದೇಹಕ್ಕೆ ಅವರು ಬುಲೆಟ್ ಪ್ರೂಫ್ ಜಾಕೆಟ್ ಹಾಕಿದ್ದಾರೆ. ಈ ಪೋಸ್ಟರ್ ಗಮನ ಸೆಳೆಯುತ್ತಿದೆ. ನಯನತಾರಾ ಅವರನ್ನು ಆಯಕ್ಷನ್ ಅವತಾರದಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ‘ಇವಳು ಗುಡುಗು. ಬಿರುಗಾಳಿಗೂ ಮೊದಲೇ ಅದರ ಆಗಮನ ಆಗುತ್ತದೆ’ ಎಂದು ಶಾರುಖ್ ಖಾನ್ ಬರೆದುಕೊಂಡಿದ್ದಾರೆ

Share this post:

Related Posts

To Subscribe to our News Letter.

Translate »