ಬಾಲಿವುಡ್‌ನಲ್ಲಿ ಸಿನಿಮಾ ಹಿನ್ನೆಲೆ ಇರದೇ ಬಂದು ಸ್ಟಾರ್ ಕಲಾವಿದನ ಪಟ್ಟ ಗಿಟ್ಟಿಸಿಕೊಂಡವರಲ್ಲಿ ನಟ ನವಾಜುದ್ದೀನ್ ಸಿದ್ಧೀಕಿ ಮುನ್ನೆಲೆಗೆ ಬರುತ್ತಾರೆ. ಬಿಹಾರದ ಕುಗ್ರಾಮವೊಂದರಿಂದ ಬಂದ ಈ ನಟ ತಮ್ಮ ನಟನಾ ಕೌಶಲದಿಂದಲೇ ಎಲ್ಲರ ಮನದಲ್ಲಿ ನೆಲೆ ನಿಂತಿದ್ದಾರೆ.ಇದೀಗ ಸ್ಟಾರ್ ಹೀರೋಗಳು ಪಡೆಯುವಷ್ಟೇ ಸಂಭಾವನೆ ಪಡೆಯುತ್ತಿದ್ದಾರೆ.1999ರಲ್ಲಿ ಆಮೀರ್ ಖಾನ್ ನಟಿಸಿದ್ದ ಸರ್ಫರೋಶ್ ಸಿನಿಮಾ ಮೂಲಕ ಬಾಲಿವುಡ್‌ಗೆ ಬಂದ ನವಾಜುದ್ದೀನ್, ಅದಾದ ಬಳಿಕ ಸಣ್ಣಪುಟ್ಟ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತ ಎಲ್ಲರ ಗಮನ ಸೆಳೆದರು.ಇದೀಗ ಸ್ಟಾರ್ ಸಿನಿಮಾಗಳಲ್ಲಿ ವಿಲನ್ ಆಗಿಯೂ ನವಾಜುದ್ದೀನ್ ಮಿಂಚುತ್ತಿದ್ದಾರೆ. ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನೂ ನವಾಜುದ್ದೀನ್ ಹೊಂದಿದ್ದಾರೆ. ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ, ಇದೇ ನವಾಜುದ್ದೀನ್ ಅವರ ಈ ಸಿನಿಮಾ ಪಯಣ ಅಷ್ಟು ಸುಲಭದ್ದಾಗಿರಲಿಲ್ಲ. ಆರಂಭದಲ್ಲಿ ಎದುರಿಸಿದ ಕಷ್ಟ, ಅವಮಾನವೂ ಸಣ್ಣದಲ್ಲ. ಆ ಪೈಕಿ ಅವರ ಮನಸ್ಸನ್ನು ತುಂಬ ಘಾಸಿಗೊಳಿಸಿದ ಘಟನೆಯೆಂದರೆ ಸೆಟ್‌ನಲ್ಲಿ ಊಟ ಮಾಡುವಾಗ ಕೊರಳಪಟ್ಟಿ ಹಿಡಿದು ಆಚೆ ಹಾಕಿದ್ದು!
*”ಸಪ್ತ ಸಾಗರದಾಚೆ ಎಲ್ಲೋ” ಕೇಳುತ್ತಿದೆ “ಹೋರಾಟ”ದ ಹಾಡು* .
ನವಾಜುದ್ದೀನ್ ಸಿದ್ಧೀಕಿ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದರು. ಹಾಗಂತ ಆ ಸಿನಿಮಾ ಯಾವುದು, ಆ ಸಿನಿಮಾ ನಿರ್ದೇಶಕರು, ಹೀರೋ ಯಾವುದನ್ನೂ ಅವರು ರಿವೀಲ್ ಮಾಡಿಲ್ಲ. ಆ ಘಟನೆಯನ್ನಷ್ಟೇ ಮೆಲುಕು ಹಾಕಿದ್ದರು. ಮೊದಲೆಲ್ಲ ಸಿನಿಮಾ ಶೂಟಿಂಗ್ ಸೆಟ್‌ಗಳಲ್ಲಿ ಪ್ರಮುಖ ಕಲಾವಿದರಿಗೆ ಬೇರೆಯೇ ಊಟದ ವ್ಯವಸ್ಥೆ ಇರುತ್ತಿತ್ತು. ಕೆಳ ದರ್ಜೆಯ ನಟರಿಗೇ ಬೇರೆ ಸ್ಥಳದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು.
*ವರ್ಷ ಪೂರ್ತಿ ಹಾಸ್ಯ ಚಕ್ರವರ್ತಿ T R ನರಸಿಂಹರಾಜು ಜನ್ಮ ಶತಮಾನೋತ್ಸವ ಆಚರಣೆ* .
ಹೀಗಿರುವಾಗ ಒಂದು ದಿನ ಸಣ್ಣ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನವಾಜುದ್ದೀನ್, ದೊಡ್ಡ ದೊಡ್ಡ ಸಿನಿಮಾ ಸ್ಟಾರ್‌ಗಳು ಊಟ ಮಾಡುವ ಜಾಗದಲ್ಲಿ ತಮಗೆ ಅರಿವಿಗೆ ಬಾರದೇ ಅಲ್ಲಿನ ಊಟ ಸೇವಿಸಿದ್ದರು. ಅದನ್ನು ನೋಡಿದ ಅಲ್ಲಿನ ಉಸ್ತುವಾರಿ ವಹಿಸಿದ್ದವ ನೇರವಾಗಿ ನವಾಜುದ್ದೀನ್ ಅವರ ಕೊರಳಪಟ್ಟಿ ಹಿಡಿದು ಸೆಟ್‌ನಿಂದಲೇ ಆಚೆ ಕಳುಹಿಸಿದ್ದ. ಅಷ್ಟೇ ಅಲ್ಲ ಕೆಲವು ಸಿನಿಮಾಗಳಲ್ಲಿ ದುಡಿಸಿಕೊಂಡು, ಸಂಭಾವನೆಯನ್ನೂ ನೀಡುತ್ತಿರುಲಿಲ್ಲ. ಈ ವಿಚಾರಗಳನ್ನು ನವಾಜುದ್ದೀನ್ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
*ವರ್ಷ ಪೂರ್ತಿ ಹಾಸ್ಯ ಚಕ್ರವರ್ತಿ T R ನರಸಿಂಹರಾಜು ಜನ್ಮ ಶತಮಾನೋತ್ಸವ ಆಚರಣೆ* .
ಬಾಲಿವುಡ್‌ನಲ್ಲಿ ತ್ರಿವಳಿ ಖಾನ್‌ಗಳ ಜತೆ ಸಿನಿಮಾ ಅವಕಾಶ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಪ್ರತಿಭೆಯ ಮೂಲಕವೇ ನವಾಜುದ್ದೀನ್ ಆ ಅವಕಾಶ ಗಿಟ್ಟಿಸಿಕೊಂಡು, ಅವರ ಸರಿಸಮನಾಗಿಯೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆರಂಭದಲ್ಲಿ ಆಮೀರ್ ಖಾನ್ ಸಿನಿಮಾ ಮೂಲಕವೇ ಬಣ್ಣದ ಲೋಕಕ್ಕೆ ಬಂದ ನವಾಜುದ್ದೀನ್, ಸಲ್ಮಾನ್ ಖಾನ್ ಜತೆಗೆ ಭಜರಂಗಿ ಬಾಯಿಜಾನ್ ಸಿನಿಮಾದಲ್ಲಿ ನಟಿಸಿದರು. ಶಾರುಖ್ ಖಾನ್ ಜತೆಗೆ ರಯೀಸ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿಯೂ ಕಾಣಿಸಿಕೊಂಡರು.