Sandalwood Leading OnlineMedia

ನವೀನ್ ದ್ವಾರಕನಾಥ್ ಹೊಸ ಸಿನಿಮಾಗೆ ಅವರ ಗುರುಗಳೇ ಪ್ರೊಡ್ಯೂಸರ್

ಫಾರ್​ ರಿಜಿಸ್ಟ್ರೇಷನ್ ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರಾದವರು ನವೀನ್ ದ್ವಾರಕನಾಥ್. ಮೊದಲ ಚಿತ್ರದಲ್ಲಿಯೇ ಸ್ವೀಟ್ ಲವ್ ಸ್ಟೋರಿ ಫ್ಯಾಮಿಲಿ ಡ್ರಾಮಾ ಕಥೆ ಹೇಳಿದ್ದ ಅವರೀಗ ಎರಡನೇ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ನವೀನ್ ತಮ್ಮ ಗುರುಗಳು ಕೆ ಚಂದ್ರಶೇಖರ್ ಅವರು ಬರೆದ ಕಥೆಗೆ ದೃಶ್ಯರೂಪ ಕೊಡುತ್ತಿದ್ದಾರೆ‌. ಇದೊಂದು ಆಕ್ಷನ್ ಫ್ಯಾಮಿಲಿ ಡ್ರಾಮಾ ಕಥಾಹಂದರ ಹೊಂದಿದ್ದು, ಸದ್ಯ ಕಥೆ ಬರವಣಿಗೆಯ ಕೊನೆ ಹಂತದಲ್ಲಿದೆ.

                 ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ ರಾಜೀವ್ ನಟನೆಯ ಬೇಗೂರು ಕಾಲೋನಿ ಟೀಸರ್ ರಿಲೀಸ್ ಮಾಡಿದ ತರುಣ್ ಸುಧೀರ್-ಸತೀಶ್ ರೆಡ್ಡಿ

ಅಂದಹಾಗೇ ಕೆ ಚಂದ್ರಶೇಖರ್ ಅವರಿಗೆ ಚಿತ್ರರಂಗವೇನು ಹೊಸತಲ್ಲ. ಈ ಹಿಂದೆ ಕನ್ನಡದ ಸುರಸುಂದರ ರಮೇಶ್ ಅರವಿಂದ್ ನಟನೆಯ ಓ‌ ಮಲ್ಲಿಗೆ ಸಿನಿಮಾ ಸುರ ಸುಂದರ ಹಾಡಿಗೆ ಕೋರಿಯೋಗ್ರಫಿ ಮಾಡಿದ್ದವರು ಇದೇ ಚಂದ್ರಶೇಖರ್. ವಿ ಮನೋಹರ್ ನಿರ್ದೇಶನ ಹಾಗೂ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಹಾಡು ಅಂದು ದೊಡ್ಡಮಟ್ಟದ ಹಿಟ್ ಕಂಡಿತ್ತು. ರಮೇಶ್ ಅರವಿಂದ್ ಸ್ಟೈಲ್, ಸಂಗೀತ ಹಾಗೂ ಕೋರಿಯೋಗ್ರಫಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಅದೇ ಚಂದ್ರಶೇಖರ್ ಈಗ ಕಥೆ ಜೊತೆಗೆ ನಿರ್ಮಾಪಕರಾಗಿಯೂ ಮತ್ತೆ ಚಿತ್ರರಂಗಕ್ಕೆ ಮತ್ತೆ ಆಗಮಿಸಿದ್ದಾರೆ. ನವೀನ್ ದ್ವಾರಕನಾಥ್ ಎರಡನೇ ಸಿನಿಮಾಗೆ ಅವರೇ ಬಂಡವಾಳ ಹೂಡುತ್ತಿದ್ದಾರೆ. ಶಿಷ್ಯನ ಸಿನಿಮಾಗೆ ಗುರುಗಳೇ ಸಾಥ್ ನೀಡುತ್ತಿರುವುದು ವಿಶೇಷ.

ಕಥೆ ಬರವಣೆ ಮುಗಿದ ಬಳಿಕ ಕಲಾವಿದರು ಹಾಗೂ ತಂತ್ರಜ್ಞಾರನ್ನು ಆಯ್ಕೆ‌ ಮಾಡಲಾಗುವುದು. “ಅಪಾರ ಸ್ಟುಡಿಯೋಸ್” ಬ್ಯಾನರ್ ನಡಿ ಬಹಳ ಸಿನಿಮಾ ಪ್ರೀತಿಯಿಂದ ಕೆ ಚಂದ್ರಶೇಖರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಕನ್ನಡ ಚಿತ್ರರಂಗಕ್ಕೆ‌‌ ಒಳ್ಳೊಳ್ಳೆ ಚಿತ್ರಗಳನ್ನು ಕಾಣಿಕೆಯಾಗಿ ನೀಡುವ ತವಕ ಅವರಲ್ಲಿದೆ.

 

Share this post:

Related Posts

To Subscribe to our News Letter.

Translate »