Sandalwood Leading OnlineMedia

ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ನಟ ನಾನಿ

 

ಹಾಯ್ ನಾನ ಚಿತ್ರ ಡಿಸೆಂಬರ್ 7 ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾ ಪ್ರಚಾರಕ್ಕಾಗಿ ನಾನಿ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ದೊಡ್ಮನೆಗೆ ಭೇಟಿ ನೀಡಿದ್ದಾರೆ.
ಶಿವರಾಜ್ ಕುಮಾರ್ ಎಲ್ಲರ ನೆಚ್ಚಿನ ನಾಯಕ ನಟರೇ ಆಗಿದ್ದಾರೆ. ಎಲ್ಲ ಇಂಡಸ್ಟ್ರೀಯಲ್ಲೂ ಶಿವಣ್ಣನಿಗೆ ಸ್ನೆಹಿತರಿದ್ದಾರೆ. ಸ್ಟಾರ್ ನಟರೆಲ್ಲ ಒಂದು ಸ್ನೇಹಿತರೇ ಆಗಿದ್ದಾರೆ. ತಮಿಳು ಇರಬಹುದು, ತೆಲುಗು ಚಿತ್ರರಂಗವೇ ಆಗಿರಬಹುದು. ಎಲ್ಲೆಡೆ ಇವರನ್ನ ಪ್ರೀತಿಸೋ ಜನರಿದ್ದಾರೆ.

ಇದನ್ನೂ ಓದಿ ಮಂಗಳೂರು ಪಾಕಿಸ್ತಾನದಲ್ಲಿದೆಯಾ? ರಿಷಬ್, ರಕ್ಷಿತ್ ಕುರಿತ ಪ್ರಶ್ನೆಗೆ ಓಂ ಪ್ರಕಾಶ್ ರಾವ್ ಖಡಕ್ ಉತ್ತರ

ಅದೇ ರೀತಿ ಟಾಲಿವುಡ್ ದಸರಾ ಹೀರೋ ನಾನಿ ಕೂಡ ಶಿವಣ್ಣನ ಸೇಹಿತರೇ ಆಗಿದ್ದಾರೆ. ವಾಪಾಸ್ ಹೈದ್ರಾಬಾದ್‌ಗೆ ಹೋಗುವ ಮೊದಲು ನಾನಿ, ಒಂದು ವಿಶೇಷ ಕೆಲಸ ಮಾಡಿದ್ದಾರೆ. ಹೌದು, ಶಿವಣ್ಣ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರೋ ಮನೆಗೆ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ   ನಿತ್ಯ ಜಗಳ, ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದ ಐಶ್ವರ್ಯಾ ರೈ! ಬಿಗ್ ಬಿ ಮಗ-ಸೊಸೆಯ ಡಿವೊರ್ಸ್ ಸುದ್ದಿ ನಿಜನಾ?

ಶಿವಣ್ಣ ಮತ್ತು ನಾನಿ ಸುಮಾರು ಹೊತ್ತು ಮಾತನಾಡಿದ್ದಾರೆ. ಸಿನಿಮಾ ವಿಚಾರಗಳನ್ನೆ ಹೆಚ್ಚು ಚರ್ಚೆ ಮಾಡಿದಂತೆ ಇದೆ. ಇದರೊಟ್ಟಿಗೆ ಕನ್ನಡದಲ್ಲಿ ಬರ್ತಿರೋ ಹಾಯ್ ನಾನ ಸಿನಿಮಾ ವಿಚಾರವನ್ನೂ ಇಲ್ಲಿ ಮಾತನಾಡಲಾಗಿದೆ. ಹಾಗೆ ಈ ತಾರೆಯರ ವಿಶೇಷ ಭೇಟಿಯ ಫೋಟೋಗಳನ್ನ ಕ್ಲಿಕಿಸಲಾಗಿದೆ.ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ದಂಪತಿ ನಾನಿಯನ್ನು ಸ್ವಾಗತಿಸಿದ್ದಾರೆ. ಈ ವೇಳೆ ಶಿವಣ್ಣ ಹಾಯ್ ನಾನ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಈ ಸಿನಿಮಾದಲ್ಲಿ ನಾನಿಗೆ ಜೋಡಿಯಾಗಿ ಮೃಣಾಲ್ ಠಾಕೂರ್ ಅಭಿನಯಿಸಿದ್ದಾರೆ. ಚಿತ್ರತಂಡ ತಂದೆ-ಮಗಳ ಬಾಂಧವ್ಯದ ಭಾವನಾತ್ಮಕ ಕತೆ ಸಿನಿಮಾದಲ್ಲಿದೆ.

Share this post:

Translate »