ಶನಿ, ಹರ ಹರ ಮಹಾದೇವ ಸೇರಿ ಹಲವಾರು ಸೀರಿಯಲ್ ಗಳಲ್ಲಿ ಅಭಿನಯಿಸಿರುವ, ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಕಥಾಹಂದರ ಹೊಂದಿರುವ, ರಾಜ್ ಮನೀಶ್ ನಾಯಕನಾಗಿ ನಟಿಸಿರುವ ನಾನೇ ನರರಾಕ್ಷಸ ಚಿತ್ರ ಡಿ.೯ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಪ್ರೀತಿಗೆ ರಾಜ, ಎಂಬ ಟ್ಯಾಗ್ ಲೈನ್ ಇದ್ದು, ರಾಜ್ ಮನೀಶ್ ಅವರೇ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಲಾವಣ್ಯ ಈ ಚಿತ್ರದ ನಾಯಕಿಯಾಗಿದ್ದು ಕುಸುಮ ಮತ್ತೊಬ್ಬ ನಾಯಕಿ. ಶೇ. 9೦% ಭಾಗ ಕಾಡಿನಲ್ಲಿಯೇ ನಡೆವ ಕಥೆ ಇದಾಗಿದ್ದು, ಬನ್ನುರು, ಮೈಸೂರು ಸುತ್ತಮುತ್ತಲ ಭಾಗದಲ್ಲಿ ಶೂಟಿಂಗ್ ನಡೆಸಲಾಗಿದೆ. ನಾಯಕನ ತಾಯಿ ರಾಧಮ್ಮ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುನೀಲ್ ರಾಜ್ ಚಿತ್ರದ ಮತ್ತೊಬ್ಬ ನಾಯಕನಾಗಿ, ವಿಲನ್ ಪಾತ್ರದಲ್ಲಿ ಸ್ನೇಕ ಶಂಕರ್, ದಿವ್ಯಾ ಕುಮಾರ್ ಸತ್ಯಗಾಲ ನಟಿಸಿದ್ದಾರೆ.ವಿಜಯಚಂದ್ರ ಅವರ ಕ್ಯಾಮೆರಾ ವರ್ಕ್, ನೀತು ನಿನಾದ್ ಅವರ ಸಂಗೀತ ಸಂಯೋಜನೆ, ಸಾಗರ್ ಅವರ ಸಂಕಲನ ಈ ಚಿತ್ರಕ್ಕಿದೆ.
ರೋಚಕ ಅನುಭವ ನೀಡಲು, ಡಾ. 56 ಮೂಲಕ ಸಿಬಿಐ ಆಫೀಸರ್ ಆಗಿ ಡಿಸೆಂಬರ್ 9ಕ್ಕೆ ಬರ್ತಿದ್ದಾರೆ ಪ್ರಿಯಾಮಣಿ