Sandalwood Leading OnlineMedia

ಭೂಗತಲೋಕದ ಅಣ್ಣ-ತಂಗಿ ಕಥೆ ಹೊತ್ತ `ನಾನು ರೌಡಿ’

 

ಕನ್ನಡದಲ್ಲೀಗ ಸಾಕಷ್ಟು ಹೊಸ ಜಾನರ್ ಚಲನಚಿತ್ರಗಳು ತೆರೆಗೆ ಬರುತ್ತಿವೆ. ಅಂಥಾ ಚಿತ್ರಗಳಲ್ಲಿ ನಾನ್‌ರೌಡಿ ಕೂಡ ಒಂದು. ಈ ಹಿಂದೆ ಮನಸಿನ ಪುಟದಲಿ ಹಾಗೂ ಬ್ರಾಂಡ್ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರಶಾಂತ್ ಕೆ.ಶೆಟ್ಟಿ ಅವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮತ್ತೊಂದು ಚಿತ್ರ ತಯಾರಾಗಿದ್ದು, ಅದಕ್ಕೆ ನಾನ್‌ರೌಡಿ ಎನ್ನುವ ಶೀರ್ಷಿಕೆ ಇಟ್ಟದ್ದಾರೆ.
ರಿಲೀಸ್‌ಗೆ ಸಿದ್ದವಾಗಿರುವ ಈ ಸಿನಿಮಾದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಇತ್ತೀಚೆಗೆ ನೆರವೇರಿತು. ಕನ್ನಡ, ತೆಲುಗು, ಹಿಂದಿ ಸೇರಿ 3 ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಪ್ರಶಾಂತ್ ಕೆ. ಶೆಟ್ಟಿ ಅವರೇ ನಾಯಕನಾಗಿ ನಟಿಸಿದ್ದು, ನಾಯಕಿಯಾಗಿ ಮುಂಬೈ ಮೂಲದ ತನುಶ್ರೀ ಚಟರ್ಜಿ ಅಲ್ಲದೆ ಐಟಂ ಹಾಡಿಗೆ ಸಮೀರಾಖಾನ್ ಹೆಜ್ಜೆ ಹಾಕಿದ್ದಾರೆ.
ಹಿರಿಯ ಜನಪದ ಗಾಯಕ ಗುರುರಾಜ ಹೊಸಕೋಟೆ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿದ್ದು ಸಾಹಿತ್ಯ ರಚನೆಯ ಜೊತೆ ಗಾಯಕರೂ ಆಗಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ಸನಿಪಯಣದ ಹಾದಿಯನ್ನು ಬಿಚ್ಚಿಟ್ಟ ಪ್ರಶಾಂತ್ ಶೆಟ್ಟಿ ಹತ್ತು ವರ್ಷಗಳ ಹಿಂದೆ ಮನಸಿನ ಪುಟದಲಿ ಹಾಗೂ ೫ ವರ್ಷಗಳ ಹಿಂದೆ ಬ್ರಾಂಡ್ ಎಂಬ
ಚಿತ್ರಗಳನ್ನು ಮಾಡಿದ್ದೆ, ಆದರ ಪ್ರಚಾರದ ಕೊರತೆಯಿಂದ ಅವೆರಡೂ ಚಿತ್ರಗಳು ಫ್ಲಾಪ್ ಆದವು. ನಂತರ ಸಿನಿಮಾನೇ ಬೇಡ ಎಂದುಕೊಂಡಿದ್ದೆ, ಆದರೆ ನನ್ನ ಸ್ನೇಹಿತ ಹೇಳಿದ ಒಂದು ಸಬ್ಜೆಕ್ಟ್ ನನ್ನನ್ನು ತುಂಬಾ ಕಾಡಿತು.

ಅಣ್ಣ ರೌಡಿಯಾದಾಗ, ಪಿಜಿಯಲ್ಲಿದ್ದ ತಂಗಿ ಜೀವನೋಪಾಯಕ್ಕಾಗಿ ಬೇರೊಂದು ದಾರಿ ಹುಡುಕಿಕೊಳ್ಳುತ್ತಾಳೆ, ಇದೇ ಕಂಟೆಂಟನ್ನು ಹಳ್ಳೀ ಬ್ಯಾಕ್‌ಡ್ರಾಪ್‌ನಲ್ಲಿ ಹೇಳಲು ಪ್ರಯತ್ನಿಸಿದ್ದೇನೆ. ಸಾಧನೆ
ಮಾಡಬೇಕೆಂದು ನೂರಾರು ಕನಸುಗಳನ್ನು ಹೊತ್ತು ಸಣ್ಣ ಊರಿನಿಂದ ಬೆಂಗಳೂರಿಗೆ ಬರುವ ಯುವಕನ ಜೀವನ ಮುಂದೆ ಯಾವರೀತಿ ತಿರುವುಗಳನ್ನು ಪಡೆಯಿತು
ಎನ್ನುವುದೇ ನಾನ್‌ರೌಡಿ ಚಿತ್ರದ ಒನ್‌ಲೈನ್ ಕಥೆ. ಬೆಂಗಳೂರು, ದಾವಣಗೆರೆ, ಚನ್ನಗಿರಿ ಹಾಗೂ ಬಾಂಬೆ ಸುತ್ತಮುತ್ತ ಚಿತ್ರೀಕರಿಸಿದ್ದೇವೆ. ನಾಯಕಿ ತನುಶ್ರೀ ಅವರು ಈಗಾಗಲೇ ಭೋಜ್ಪುರಿ, ಗುಜರಾತಿ ಅಲ್ಲದೆ ಬೆಂಗಾಳಿ ಸೇರಿ ೭೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

 

‘ಮಾನ್ಸೂನ್ ರಾಗ’ trailer out now : Sex worker ಪಾತ್ರದಲ್ಲಿ ರಚಿತಾರಾಮ್ ಹೇಗೆ ಕಾಣ್ತಾರೆ ಗೊತ್ತಾ?

ಚಿತ್ರದಲ್ಲಿ ೬ ಹಾಡುಗಳಿದ್ದು, ವಿನುಮನಸು ಅವರು ತನಗೆ ಆಕ್ಸಿಡೆಂಟ್ ಆದಾಗಲೂ ಎಡಗೈಲೇ ಬಿಜಿಎಂ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು. ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಗುರುರಾಜ ಹೊಸಕೋಟೆ ಮಾತನಾಡುತ್ತ ಪ್ರಶಾಂತ್ ಶೆಟ್ಟಿ ನನಗೆ ಬ್ರಾಂಡ್ ಸಿನಿಮಾದಿಂದ ಗೆಳೆಯರಾದವರು.
ಒಮ್ಮೆ ನನಗೆ ಈ ಕಥೆ ಹೇಳಿ ಸಿನಿಮಾ ಮಾಡಿದರೆ ಹೇಗಿರುತ್ತೆ ಎಂದರು. ನಾನು ಚೆನ್ನಾಗಿದೆ ಮಾಡಿ ಎಂದೆ. ಆಮೇಲೆ ಚಿತ್ರಕ್ಕೆ ನೀವೇ ಮ್ಯೂಸಿಕ್ ಮಾಡಬೇಕು ಎಂದರು. ಹೇಳಿಕೇಳಿ ನಾನೊಬ್ಬ ಜಾನಪದ ಹಾಡುಗಾರ ಸ್ವಲ್ಪ ಯೋಚಿಸಿ, ಎಂದರೂ ಬಿಡಲಿಲ್ಲ, ಮೂಲಜಾನಪದವನ್ನು ಬಿಟ್ಟುಕೊಡದೆ ಈಗಿನ ಜನರಿಗೂ ಇಷ್ಟವಾಗುವ ಹಾಗೆ ಸಂಗೀತ ನೀಡಿದ್ದೇನೆ. ಎರಡು ವರ್ಷಗಳಿಂದ ತುಂಬಾ ಕಷ್ಟಪಟ್ಟು ಈ ಸಿನಿಮಾ ಮಾಡಿದ್ದಾರೆ. ಅದು ಹೇಗೆಂದರೆ ನೀರಿಲ್ಲದ ಜಾಗದಲ್ಲಿ ಡೈ ಹೊಡೆದಿದ್ದಾರೆ ಎಂದು ವಿವರಿಸಿದರು. ಹಿನ್ನಲೆ ಸಂಗೀತ ಮಾಡಿದ ವಿನು ಮನಸು ಮಾತನಾಡಿ ಐಟಂಸಾಂಗ್ ಅನ್ನು ಸ್ಟೀಫನ್ ಮಾಡಿದ್ದಾರೆ. ಪ್ರಶಾಂತ್ ನನ್ನ ಬ್ರದರ್ ಇದ್ದಹಾಗೆ. ರೆಗ್ಯುಲರ್ ಆಡಂಬರ, ಅಬ್ಬರ ಇಲ್ಲದೆ ತಯಾರಾದ ಚಿತ್ರವಿದು ಎಂದರು. ಮೌಲ್ಯಚೇತನ್ ಅವರು ಚಿತ್ರನೋಡಿ ಮೆಚ್ಚಿಕೊಂಡು ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ. ಅಣಜಿ ನಾಗರಾಜ್ ಅವರ ಕ್ಯಾಮೆರಾ ವರ್ಕ್, ರಾಜೇಶ್ ಚೌಹಾಣ್ ಅವರ ಸಂಕಲನ ಈ ಚಿತ್ರಕ್ಕಿದೆ.

Share this post:

Related Posts

To Subscribe to our News Letter.

Translate »