ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬಂದಿರುವ, ಮಲ್ಲು ಜಮಖಂಡಿ, ಶಿವಗಂಗಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ, ನನ್ನಾಕಿ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಜೀವ ಇರೋರ‍್ಗೂ ಜೊತೆಗಿರಾಕಿ ಎಂಬ ಟ್ಯಾಗ್‌ಲೈನ್ ಕೂಡ ಈ ಚಿತ್ರಕ್ಕಿದ್ದು, ಇಡೀ ಚಿತ್ರವನ್ನು ಐಫೋನಿನಲ್ಲೇ ಚಿತ್ರೀಕರಿಸಿರುವುದು ವಿಶೇಷ. ಆನಂದ್ ಎಂಜೆ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸೌತ್ ಇಂಡಿಯನ್ ಹೀರೋ ಖ್ಯಾತಿಯ ಅನಿಲ್ ಸಿಜೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಗ್ರಾಹಕ ವಿಶಾಲ್ ಇಡೀ ಚಿತ್ರವನ್ನು ಐಫೋನಿನಲ್ಲೇ ಚಿತ್ರೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಾಯಕ ಕಮ್ ನಿರ್ದೇಶಕ ಮಲ್ಲು ಜಮಖಂಡಿ, ಆರಂಭದಲ್ಲಿ ನಾನು ಉತ್ತರ ಕರ್ನಾಟಕದಲ್ಲಿ ಟಿಕ್‌ಟಾಕ್ ಮಾಡಿಕೊಂಡಿದ್ದೆ, ಅಲ್ಲದೆ ಸಾಕಷ್ಟು ಯೂಟ್ಯೂಬ್ ಸ್ಕಿಟ್‌ಗಳನ್ನು ಸಹ ಮಾಡಿದ್ದೇನೆ. ನನಗೆ ತುಂಬಾಜನ ಫಾಲೋವರ‍್ಸ್ ಕೂಡ ಇದ್ದಾರೆ. ಒಂದು ಶಾರ್ಟ್ ಮೂವೀ ಮಾಡೋಣ ಅಂತ ಈ ಚಿತ್ರವನ್ನು ಪ್ರಾರಂಭಿಸಿದೆವು. ಮ್ಯೂಸಿಕ್ ಮಾಡಿಸಲು ಅನಿಲ್ ಸಿಜೆ ಅವರಬಳಿ ಹೋದಾಗ ಚಿತ್ರ ನೋಡಿ ಸಿನಿಮಾ ಚೆನ್ನಾಗೇ ಬಂದಿದೆ, ಮೂವೀನೇ ಮಾಡಿ ಎಂದು ಸಲಹೆ ನೀಡಿದರು, ಮತ್ತೊಂದಷ್ಟು ಕಮರ್ಷಿಯಲ್ ಎಲಿಮೆಂಟ್ಸ್ ಸೇರಿಸಿ ಸಿನಿಮಾರೂಪಕ್ಕೆ ತಂದಿದ್ದೇನೆ. ಅನಿಲ್ ಅವರು ನಮ್ಮ ಇಡೀ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಉಮೇಶ್ ಕೂಡ ಜೊತೆಗಿದ್ದಾರೆ, ಹೊಸಪೇಟೆಯ ಶಿವಗಂಗಾ ಚಿತ್ರದ ನಾಯಕಿ ಪಾತ್ರ ನಿರ್ವಹಿಸಿದ್ದು, ರಂಗಭೂಮಿ ಕಲಾವಿದರಾದ ಬಾಬಣ್ಣ, ರೇಖಾದಾಸ್ ಕೂಡ ಅಭಿನಯಿಸಿದ್ದಾರೆ.
ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಪುಷ್ಪ-2 ಟೀಸರ್ ರಿಲೀಸ್… ಹೇಗಿದೆ ಪುಷ್ಪ-2 ಗ್ಲಿಂಪ್ಸ್.?
ಬಟ್ಟೆ ಅಂಗಡಿ ಇಟ್ಟುಕೊಂಡಿರುವ ನಾಯಕ ಹುಡುಗಿಯ ಹಿಂದೆ ತಿರುಗಾಡಿಕೊಂಡಿರುತ್ತಾನೆ. ನಂತರ ಆಕೆಯನ್ನು ಪಟಾಯಿಸಲು ಹೋಗಿ ರಾದ್ದಾಂತ ಮಾಡಿಕೊಳ್ಳುತ್ತಾನೆ. ಕೊನೆಯಲ್ಲಿ ಪ್ರೀತಿ ಮಾಡುವ ಪ್ರೇಮಿಗಳಿಗೆ, ಪೋಷಕರಿಗೆ ಒಂದೊಳ್ಳೇ ಮೆಸೇಜನ್ನು ಚಿತ್ರದಲ್ಲಿ ಹೇಳಿದ್ದೇವೆ. ಇಡೀ ಚಿತ್ರವನ್ನು ಉತ್ತರ ಕರ್ನಾಟಕ ಸೊಗಡಿನಲ್ಲಿ ಮಾಡಿದ್ದೇವೆ ಎಂದರು. ನಂತರ ಸಂಗೀತ ನಿರ್ದೇಶಕ ಅನಿಲ್ ಮಾತನಾಡಿ ಚಿತ್ರದಲ್ಲಿ ೪ ಹಾಡುಗಳಿವೆ. ನಾಗೇಂದ್ರಪ್ರಸಾದ್ ಲಿರಿಕ್ಸ್ ಬರೆದಿದ್ದಾರೆ. ಒಂದು ಹಾಡನ್ನು ಕೈಲಾಶ್ ಖೇರ್ ಹಾಡಿದ್ದಾರೆ. ಮತ್ತೊಂದು ಗೀತೆಯನ್ನು ವಿಜಯಪ್ರಕಾಶ್ ಕೈಲಿ ಹಾಡಿಸಬೇಕಿದೆ. ಚಿತ್ರದಲ್ಲಿ ನಾರ್ತ್ ಕರ್ನಾಟಕ ಭಾಷೆ ತುಂಬಾ ಸೊಗಸಾಗಿ ಮೂಡಿಬಂದಿದೆ. ಹಾಗಾಗಿ ಚಿತ್ರಕ್ಕೆ ಸಿಂಪಲ್ಲಾಗಿ ಬಿಜಿಎಂ ಮಾಡಿದ್ದೇನೆ ಎಂದರು.
ಚಿತ್ರದ ನಾಯಕಿ ಶಿವಗಂಗಾ ಮಾತನಾಡುತ್ತ ಮಿಡಲ್‌ಕ್ಲಾಸ್ ಫ್ಯಾಮಿಲಿ ಹುಡುಗಿಯಾಗಿ ನಾನೀ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆಕೆಗೆ ಹೇಗೆ ಲವ್ ಆಗುತ್ತೆ, ಮನೆಯವರನ್ನೆಲ್ಲ ಎದುರಿಸಿ ಆಕೆ ಹೇಗೆ ಲವ್ ಮಾಡುತ್ತಾಳೆ ಅಂತ ನನ್ನ ಪಾತ್ರದ ಮೂಲಕ ನಿರ್ದೇಶಕರು ಹೇಳಹೊರಟಿದ್ದಾರೆ ಎಂದರು.
ಛಾಯಾಗ್ರಾಹಕ ವಿಶಾಲ್ ಮಾತನಾಡಿ ಪೂರ್ತಿ ಚಿತ್ರವನ್ನು ಮರ‍್ನಾಲ್ಕು ಐಫೋನ್‌ಗಳನ್ನು ಉಪಯೋಗಿಸಿ ಶೂಟ್ ಮಾಡಿದ್ದೇವೆ. ಯಾವುದೇ ಟೈಟಿಂಗ್ಸ್ ಬಳಸದೆ ನ್ಯಾಚುರಲ್ ಲೈಟಿಂಜಮೈಕಗ್‌ನಲ್ಲೇ ಚಿತ್ರೀಕರಿಸಿದ್ದೇವೆ. ಜೊತೆಗೆ ಚಿತ್ರದಲ್ಲಿ ನಾಯಕನ ಸ್ನೇಹಿತನಾಗಿಯೂ ಕಾಣಿಸಿಕೊಂಡಿದ್ದೇನೆ ಎಂದರೆ, ಮತ್ತೊಬ್ಬ ನಟ ಆನಂದ್ ಹುಣ್ಣೂರು ಮಾತನಾಡಿ ಚಿತ್ರದಲ್ಲಿ ನಾನು ಕೂಡ ಹೀರೋ ಸ್ನೇಹಿತ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಆಗಿದ್ದು ಯು/ಎ ಪ್ರಮಾಣಪತ್ರ ಸಿಕ್ಕಿದೆ ಎಂದರು. ಚಿತ್ರದ ಶೀರ್ಷಿಕೆ ಸೂಚಿಸಿ ಸ್ಪರ್ದೆಯಲ್ಲಿ ಸೂಕ್ತ ಹೆಸರನ್ನು ಕಳಿಸಿದ್ದ ಬೀದರ್‌ನ ಶೃದ್ದಾ ಅವರಿಗೆ ಚಿತ್ರತಂಡದಿAದ ಬಹುಮಾನ ವಿತರಿಸಲಾಯಿತು.