Sandalwood Leading OnlineMedia

ಡಿಸೆಂಬರ್ 6ಕ್ಕೆ ‘ನಂದಿ ಫಿಲ್ಮಂ ಅವಾರ್ಡ್’ ಸಮಾರಂಭ… ಏನಿದರ ಉದ್ದೇಶ..ಯಾರಿಗೆಲ್ಲಾ ಸಿಗಲಿದೆ ಈ ಗರಿ?

ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ನಂದಿ ಪ್ರಶಸ್ತಿ ಆರಂಭವಾಗಿದ್ದು, ಇದರ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದ್ದರು. ನೆರೆಯ ಆಂಧ್ರಪ್ರದೇಶ ಮನರಂಜನಾ ಕ್ಷೇತ್ರದ ಸಾಧಕರಿಗೆ ಕೊಡುವ ರಾಜ್ಯಪ್ರಶಸ್ತಿಗೂ ನಂದಿ ಅವಾರ್ಡ್ಸ್ ಎಂದೇ ಹೆಸರಿದೆ. ಹೀಗಾಗಿ ನಮ್ಮ ರಾಜ್ಯದ ಈ ಹೊಸ ಖಾಸಗಿ ಪ್ರಶಸ್ತಿಗೆ ಅದೇ ಹೆಸರಿಟ್ಟಿರೋದು ನೋಡಿ ಇದಕ್ಕೂ ಆಂಧ್ರದ ಅವಾರ್ಡ್‌ಗೂ ಸಂಬಂಧ ಇದೆ ಎಂದುಕೊಳ್ಳಬೇಡಿ. ಇವೆರಡೂ ಸಂಪೂರ್ಣವಾಗಿ ಬೇರೆಯೇ ಆಗಿವೆ.

ಇದನ್ನೂ ಒದಿ  ಯುವ ರಾಜಕುಮಾರ್ ಅಭಿನಯದ “ಯುವ” ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

ನಂದಿ ಎನ್ನುವುದು ಕನ್ನಡದ ಪಾಲಿಗೂ ಒಂದು ಪವರ್‌ಫುಲ್ ಇಮೇಜ್ ಎನಿಸುವ ಲಾಂಛನ. ಆ ಕಾರಣದಿಂದ ಅದೇ ಪದವನ್ನು ಇಲ್ಲಿ ಆಯ್ಕೆ ಮಾಡಲಾಗಿದೆ ಅಷ್ಟೇ. ಇನ್ನು ನಂದಿ ಅವಾರ್ಡ್ ಅನೌನ್ಸ್ ಆಗ್ತಿದ್ದಂತೆ ಚೊಚ್ಚಲ ನಂದಿ ಪ್ರಶಸ್ತಿಯನ್ನು ಕನ್ನಡದ ಯಾವೆಲ್ಲಾ ಕಲಾವಿದರು, ತಂತ್ರಜ್ಞರು ಪಡೆಯಬಹುದು. ಯಾವಾಗ ನಡೆಯಲಿದೆ ಈ ಸಮಾರಂಭ? ಎಷ್ಟು ಕೆಟಗರಿ, ಎಷ್ಟು ಪ್ರಶಸ್ತಿ ಎನ್ನುವ ವಿವರಗಳನ್ನೆಲ್ಲವನ್ನು ಸುದ್ದಿಗೋಷ್ಠಿ ನಡೆಸಿ ‘ನಂದಿ ಫಿಲ್ಮಂ ಅವಾರ್ಡ್’ ಸಂಸ್ಥಾಪಕರ ತಂಡ ತೀರ್ಮಾನಿಸಿ ಮಾಧ್ಯಮದವರಿಗೆ ತಿಳಿಸಿದೆ.

ಇದನ್ನೂ ಒದಿ  ಮತ್ತೆ ಒಂದಾಯ್ತು ‘ಸೂರರೈ ಪೋಟ್ರು’ ಟೀ…ಸೂರ್ಯ 43ನೇ ಸಿನಿಮಾಗೆ ಸುಧಾ ಕೊಂಗರ ಆಕ್ಷನ್ ಕಟ್

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟ ಪೂರ್ವ ಅಧ್ಯಕ್ಷರಾದ ಭಾ.ಮಾ.ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ ಈ ಪ್ರಶಸ್ತಿ ಸಂಸ್ಥಾಪರಾಗಿದ್ದು, ಭಾ.ಮಾ.ಗಿರೀಶ್, ಹರ್ಷಿತಾ, ನಂದಿತಾ ಹಾಗೂ ಆಶೋಕ್ ಡೈರೆಕ್ಟರ್ಸ್ ಗಳಾಗಿದ್ದಾರೆ. ಪ್ರಶಸ್ತಿ ಸಮಾರಂಭದ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕರಾದ ನಿತ್ಯಾನಂದ ಪ್ರಭು, ಕರ್ನಾಟಕ ನಂದಿ ಫಿಲ್ಮಂ ಅವಾರ್ಡ್-2023 ಅಂತಾ ನಾವು ಏನೂ ಹಮ್ಮಿಕೊಂಡಿದ್ದೇವೋ ಅದು 2022ನೇ ಸಾಲಿನ ಸಿನಿಮಾಗಳಿಗೆ ಅನ್ವಯಿಸುತ್ತದೆ. ಸೌತ್ ಇಂಡಿಯಾದಲ್ಲಿ ನಂದಿ ಅವಾರ್ಡ್ ಅಂತಾ ನಡೆಯುತ್ತಿತ್ತು. 2016ರಲ್ಲಿ ನಿಲ್ಲಿಸಲಾಗಿದೆ. ತೆಲುಗಿನಲ್ಲಿ ನಂದಿ ಫಿಲ್ಮಂ ಅವಾರ್ಡ್ ನಡೆಯುತ್ತಿದೆ. ಕನ್ನಡ ಇಂಡಸ್ಟ್ರೀಗೆ ಪ್ರತ್ಯಕ್ಷವಾಗಿ ನಂದಿ ಅವಾರ್ಡ್ಸ್ ನೀಡಲಾಗುವುದು. ಕನ್ನಡ ಸಿನಿಮಾಗಳು, ಪ್ರಾದೇಶಿಕವಾಗಿ ಭಾಷೆಗಳಾದ ತುಳು, ಕೊಡವ, ಕೊಂಕಣಿ, ಬ್ಯಾರಿ ಹಾಗೂ ಭಂಜಾರ ಈ ಭಾಷೆಗಳಿಗೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಸಾಹಿತ್ಯ, ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಗೂ ಪ್ರಶಸ್ತಿ ನೀಡಲಾಗುತ್ತದೆ. 50ಕ್ಕೂ ಹೆಚ್ಚು ವಿಭಾಗದ ಪ್ರತಿಭೆ ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ.

 

 

ಕನ್ನಡದ್ದೇ ಆದ ಸ್ವಂತ ಪ್ರಶಸ್ತಿ ನೀಡುವ ವೇದಿಕೆ, ಆ ಮೂಲಕ ನಮ್ಮ ಪ್ರತಿಭೆಗಳನ್ನು ನಾವೇ ಗುರುತಿಸಿ ಬೆನ್ನು ತಟ್ಟುವ ಪ್ರಯತ್ನ ಮಾಡಬೇಕಿದೆ. ಇದನ್ನೆಲ್ಲಾ ಮನಗಂಡು, ಚರ್ಚಿಸಿ ಮಂಡಳಿ ನಂದಿ ಅವಾರ್ಡ್ ಕೊಡುವ ನಿರ್ಧಾರ ಮಾಡಿದೆ. ಬೆಂಗಳೂರಿನ ಒರಿಯನ್ ಮಾಲ್ ನಲ್ಲಿ ಡಿಸೆಂಬರ್ ತಿಂಗಳ 6ರಂದು ಸಮಾರಂಭ ನಡೆಯಲಿದ್ದು, 50 ವಿಭಾಗಗಳಿಗೆ ಪ್ರಶಸ್ತಿ ನೀಡಲಾಗಿದೆ.

Share this post:

Related Posts

To Subscribe to our News Letter.

Translate »