*ನಂದಮೂರಿ ಕಲ್ಯಾಣ್ ರಾಮ್ ಹುಟ್ಟುಹಬ್ಬಕ್ಕೆ ಅನೌನ್ಸ್ ಆಯ್ತು 21ನೇ ಸಿನಿಮಾ..*
ಜೂನಿಯರ್ ಎನ್ ಟಿಆರ್ ಸಹೋದರ ನಂದಮೂರಿ ಕಲ್ಯಾಣ್ ರಾಮ್ ಹುಟ್ಟುಹಬ್ಬಕ್ಕೆ ಸಾಲು ಸಾಲು ಉಡುಗೊರೆಗಳು ಸಿಕ್ಕಿದೆ. ಒಂದ್ಕಡೆ ಡೆವಿಲ್ ಸಿನಿಮಾದ ಗ್ಲಿಂಪ್ಸ್, ಮತ್ತೊಂದ್ಕಡೆ ಕಲ್ಯಾಣ್ 21 ಚಿತ್ರ ಕೂಡ ಅನೌನ್ಸ್ ಆಗಿದೆ. ಅಶೋಕ ಕ್ರಿಯೇಷನ್ ಹಾಗೂ ಎನ್ ಟಿಆರ್ ಆರ್ಟ್ಸ್ ಬ್ಯಾನರ್ ನಡಿ ಮೂಡಿ ಬರ್ತಿರುವ ಈ ಸಿನಿಮಾಗೆ ಅಶೋಕ್ ವರ್ಧನ್ ಮುಪ್ಪಾ ಮತ್ತು ಸುನಿಲ್ ಬಲುಸು ಅವರು ಬಂಡವಾಳ ಹೂಡಿದ್ದು, ಪ್ರದೀಪ್ ಚಿಲುಕುರಿ ಆಕ್ಷನ್ ಕಟ್ ಹೇಳಿದ್ದಾರೆ.
ಇನ್ನೂ ಓದಿ : *ಮಲಯಾಳಂ ನಟಿಯ ತಂದೆಯಿಂದಲೇ ಕೊಲೆ ಬೆದರಿಕೆ, ಅವರೂ ಕೂಡ ಖ್ಯಾತ ನಟರೆ ….*
ನಂದಮೂರಿ ಕಲ್ಯಾಣ್ ರಾಮ್ ಸಿನಿಮಾ ಕರಿಯರ್ ನಲ್ಲಿ ಅತಿ ದೊಡ್ಡ ಬಜೆಟ್ ಚಿತ್ರ ಇದಾಗಿದೆ. ಔಟ್-ಅಂಡ್-ಔಟ್ ಆಕ್ಷನ್ ಎಂಟರ್‌ಟೈನರ್ ಕಥಾಹಂದರ ಚಿತ್ರದಲ್ಲಿ ಕಲ್ಯಾಣ್ ರಾಮ್ ಹಿಂದೆಂದೂ ಕಾಣದ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರಿಕೃಷ್ಣ ಭಂಡಾರಿ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಇನ್ನುಳಿದ ತಾರಾಗಣ ಮತ್ತು ತಾಂತ್ರಿಕ ಬಳಗವನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು.ಈ ಹಿಂದೆ ಎಟಿಆರ್ ಆರ್ಟ್ಸ್ ಬ್ಯಾನರ್ ನಡಿ ಕಲ್ಯಾಣ್ ರಾಮ್ ನಟಿಸಿದ್ದ ಬಿಂಬಿಸಾರ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಇದೇ ಬ್ಯಾನರ್ ನಡಿ ಯಂಗ್ ಟೈಗರ್ ಎನ್ ಟಿಆರ್ ಹಾಗೂ ಕೊರಟಲಾ ಶಿವ ನಟನೆಯ ದೇವರ ಸಿನಿಮಾ ತಯಾರಾಗುತ್ತಿದ್ದು, ಪ್ರಶಾಂತ್ ನೀಲ್ ಹಾಗೂ ತಾರಕ್ ಚಿತ್ರ ಕೂಡ ಎನ್ ಟಿಆರ್ ಬ್ಯಾನರ್ ನ ಮತ್ತೊಂದು ಕೊಡುಗೆ