ಅಮೆರಿಕಾದಲ್ಲಿ ದೊಡ್ಡ ಹೆಸರು ಮಾಡಿರುವ ತಮಿಳುನಾಡು ಮೂಲದ ನನ್ಬನ್ ಸಮೂಹ ಸಂಸ್ಥೆಗಳ ಭಾರತೀಯ ರಾಯಭಾರಿಯಾಗಿ ಖ್ಯಾತ ತಮಿಳು ನಟ ಮತ್ತು ‘ಬಿಗ್ ಬಾಸ್ ಸೀಸನ್ 4’ ವಿಜೇತ ಆರಿ ಅರ್ಜುನನ್ ಅವರನ್ನು ಆಯ್ಕೆ ಮಾಡಲಾಗಿದೆ. 2005ರಲ್ಲಿ ‘ಆಲಯಾದಿಕುತ್ತು’ ಎಂಬ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ನಟರಾಗಿ ಪರಿಚಿತರಾದ ಆರಿ ಅರ್ಜುನನ್, ಕಳೆದ 18 ವರ್ಷಗಳಲ್ಲಿ ಹಲವಾರು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ‘ಬಿಗ್ ಬಾಸ್-4’ರಲ್ಲಿ ಪ್ರೇಕ್ಷಕರಿಂದ 16 ಕೋಟಿಗೂ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಅವರು ಕಿರುತೆರೆಯ ಇತಿಹಾಸದಲ್ಲೇ ಹೊಸದೊಂದು ದಾಖಲೆಯನ್ನು ಬರೆದಿದ್ದಾರೆ. ಭಾರತೀಯ ಕಿರುತೆರೆ ಇತಿಹಾಸದಲ್ಲೇ ಯಾರೊಬ್ಬರೂ, ಇಷ್ಟೊಂದು ಅಧಿಕ ಮೊತ್ತದ ಮತಗಳನ್ನು ಪಡೆದ ಉದಾಹರಣೆಯೇ ಇಲ್ಲ. ನಟನೆಯ ಜತೆಗೆ ತಮ್ಮ ಸಾಮಾಜಿಕ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿರುವ ಅವರು, ತಮ್ಮದೇ ರೀತಿಯಲ್ಲಿ ಹಲವು ಜನಪರ ಕೆಲಸಗಳಲ್ಲಿ ಕೈಜೋಡಿಸಿದ್ದಾರೆ.
ಮಿಲಿಯನ್ ವೀಕ್ಷಣೆ ಪಡೆದ `ಲಂಕಾಸುರ’ ಚಿತ್ರದ “ಮಾಡರ್ನ್ ಮಹಾಲಕ್ಷ್ಮಿ” ಹಾಡು
ನನ್ಬನ್ ಸಮೂಹ ಸಂಸ್ಥೆಗಳ ರಾಯಭಾರಿಯಾಗಿ ಆಯ್ಕೆಯಾಗಿರುವ ಆರಿ ಅರ್ಜುನನ್ ಅವರಿಗೆ ಸ್ವಾಗತ ಕೋರಿ ಮಾತನಾಡಿರುವ ಸಂಸ್ಥೆಯ ಅಧ್ಯಕ್ಷ ಮತ್ತು ಸಂಸ್ಥಾಪಕ ಗೋಪಾಲ ಕೃಷ್ಣನ್ (ಜಿಕೆ), ‘ಅರ್ಜುನನ್ ಅವರ ಉತ್ಸಾಹ, ಸೇವಾ ಮನೋಭಾವ ಮತ್ತು ಅವರ ಖ್ಯಾತಿಯು, ಹೂಡಿಕೆದಾರರ ಆರ್ಥಿಕ ಕನಸುಗಳನ್ನು ನೈತಿಕತೆ ಮತ್ತು ಸಮಗ್ರತೆಯೊಂದಿಗೆ ಪೂರೈಸಲು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಅವರನ್ನು ಸಂಸ್ಥೆಯ ರಾಯಭಾರಿಯನ್ನಾಗಿ ನೇಮಿಸಲು ಹರ್ಷಪಡುತ್ತೇವೆ’ ಎಂದು ಹೇಳಿದ್ದಾರೆ.
ಪ್ರೇಮಿಗಳ ದಿನಕ್ಕೆ “ಚೌಕಾಬಾರ” ದಿಂದ ರೊಮ್ಯಾಂಟಿಕ್ ಸಾಂಗ್
ನನ್ಬನ್ ಸಮೂಹ ಸಂಸ್ಥೆಗಳ ಕುರಿತು: ನನ್ಬನ್ ಎಂದರೆ ತಮಿಳಿನಲ್ಲಿ ನಿಜವಾದ ಸ್ನೇಹಿತ ಎಂದರ್ಥ. ಅದಕ್ಕೆ ಅನುಗುಣವಾಗಿ ಏನನ್ನೂ ನಿರೀಕ್ಷಿಸದೆ ಬೇಷರತ್ತಾಗಿ ಇತರರಿಗೆ ಸಹಾಯ ಮಾಡುವ ಏಕೈಕ ದೃಷ್ಟಿಯೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ, ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯಲು ಸಮುದಾಯವನ್ನು ಸಕ್ರಿಯಗೊಳಿಸುವುದರ ಜತೆಗೆ, ಹಿಂದುಳಿದವರಿಗೆ ಬೆಂಬಲ ನೀಡುವ ಮತ್ತು ಹಸಿರು ಗ್ರಹಕ್ಕಾಗಿ ಸುಸ್ಥಿರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಈ ನನ್ಬನ್ ಸಮೂಹ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.
‘ಬೀಗ’ ಚಿತ್ರದ ಭರ್ಜರಿ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ; ಮತ್ತೆ ಘರ್ಜಿಸಿದ ಅರ್ಮುಗಂ!
ನನ್ಬನ್ ಸಮೂಹ ಸಂಸ್ಥೆಗಳಡಿ ನನ್ಬನ್ ವೆಂಚರ್ಸ್, ನನ್ಬನ್ ರಿಯಾಲ್ಟಿ, ನನ್ಬನ್ ಚೋಲಾ ಲ್ಯಾಂಡ್ ಹೋಲ್ಡಿಂಗ್ಸ್, ನನ್ಬನ್ ಪ್ರೈವೇಟ್ ಇಕ್ವಿಟಿ, ನನ್ಬನ್ ಇಎಸ್ಜಿ ಸೊಲ್ಯೂಷನ್ಸ್ ಮತ್ತು ನನ್ಬನ್ ಎಂಟರ್ಟೈನ್ಮೆಂಟ್ ಸೇರಿದಂತೆ ಹಲವು ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ESG ಪರಿಹಾರಗಳನ್ನು ಉತ್ತೇಜಿಸಲು ಮತ್ತು ಪ್ರಪಂಚದಾದ್ಯಂತದ ವ್ಯಕ್ತಿಗಳು ಮತ್ತು ಸಮುದಾಯಗಳಿಗೆ ಆರ್ಥಿಕ ಸ್ವಾತಂತ್ರ್ಯವನ್ನು ತರಲು ಈ ವಿಭಾಗಗಳು ಒಟ್ಟಾಗಿ ಕೆಲಸ ಮಾಡುತ್ತವೆ. ನನ್ಬನ್ ಸಮೂಹ ಸಂಸ್ಥೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: www.nanban.com