ಶುಕ್ರವಾರ ಬಂತು ಅಂದ್ರೆ ಹಲವು ಸಿನಿಮಾಗಳು ರಿಲೀಸ್ ಆಗುತ್ತೆ. ಅದರಲ್ಲಿ ಹೊಸಬರದ್ದು ಇರುತ್ತೆ, ಸ್ಟಾರ್ ಗಳದ್ದು ಇರುತ್ತೆ. ಈ ವಾರ ನಮಸ್ತೆ ಗೋಸ್ಟ್ ಎಂಬ ಸಿನಿಮಾ ಕೂಡ ತೆರೆಗೆ ಬಂದಿದೆ. ಹೆಸೆಉ ಡಿಫ್ರೆಂಟ್ ಆಗಿರುವಂತೆ ಕಥೆಯೂ ಅಷ್ಟೇ ಡಿಫ್ರೆಂಟ್ ಆಗಿದೆ. ಭರತ್ ನಂದಾ ಈ ಸಿನಿಮಾದ ಕಥಾ ನಾಯಕ. ಅಷ್ಟೇ ಅಲ್ಲ ನಿರ್ದೇಶಕ ಕೂಡ. ಹಳ್ಳಿಯಲ್ಲಿ ಹೆಂಗೆ ಬೇಕೋ ಜೀವನ ಕಳೆಯುತ್ತಿದ್ದ ಹುಡುಗ ಶಿವು. ಅದೇ ಊರಿಗೆ ಬರುವ ಆಶಾಗೆ ಅವನ ಒಳ್ಳೆಯತನದ ಮೇಲೆ ಲವ್ವಾಗುತ್ತೆ. ಹೇಳದೆ, ಕೇಳದೆ ಮನಸ್ಸಲ್ಲೇ ಪ್ರೀತಿಯ ಗೋಪುರ ಕಟ್ಟಿಕೊಳ್ಳುತ್ತಾಳೆ. ಅಪ್ಒ ಮಗನಿಗೆ ಜಗಳವಾಗಿ ಶಿವು ಊರು ಬಿಟ್ಟು ಹೋಗುವಾಗ, ಅವನ ಹಿಂದೆಯೇ ಓಡುವ ಆಶಾ ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪುತ್ತಾಳೆ.

ಇದನ್ನೂ ಓದಿ: *ಖುಷಿ ಸಿನಿಮಾದ ಎರಡನೇ ಹಾಡು ರಿಲೀಸ್..ವಿಜಯ್ ದೇವರಕೊಂಡ ಸಮಂತಾ ಜೋಡಿಯ ಪ್ರೇಮಗೀತೆ ಹೇಗಿದೆ?*
ಇಷ್ಟು ಕಥೆ ನಿಮಗೆ ಫಸ್ಟ್ ಆಫ್ ಅಲ್ಲ. ಇದು ಸೆಕೆಂಡ್ ಆಫ್ ನಲ್ಲಿ ಬರುವ ಮನಕಲುಕುವ ಕಥೆ. ಆದ್ರೆ ಇದೇ ಕಥೆ ನಾಯಕನನ್ನ ಮೊದಲಿಂದ ಕನಸಾಗಿ ಕಾಡುತ್ತೆ. ಆ ಆಕ್ಸಿಡೆಂಟ್ ಆದ ಆಶಾ ಮತ್ತೆ ಸಿಕ್ತಾಳೆ, ದೆವ್ವದ ಜೊತೆಗೆ ಪ್ರೀತಿ ಆಗುತ್ತೆ, ದೆವ್ವದ ಜೊತೆಗೆ ಜೀವನ ಮಾಡಲು ನಿರ್ಧರಿಸುತ್ತಾನೆ. ಆಮೇಲೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಾ ಹೋಗುತ್ತೆ. ಆ ಕಥೆಯ ಸ್ವಾದ ಪಡೆಯಬೇಕು ಅಂದ್ರೆ ಒಮ್ಮೆ ನಮಸ್ತೆ ಗೋಸ್ಟ್ ನೋಡಲೇಬೇಕು. ನಮಸ್ತಡ ಗೋಸ್ಟ್ ನಲ್ಲಿ ಫಸ್ಟ್ ಆಫ್ ಹೊಟ್ಟೆ ಉಣ್ಣಾಗಿಸುವಷ್ಟು ನಗು ಇದೆ. ನಾಯಲ ನಟನ ಸಿಂಪಲ್ ಕಾಮಿಡಿ ನಮ್ಮೆಲ್ಲರನ್ನು ಮನರಂಜಿಸುತ್ತೆ. ಹಾಗೇ ಯಾವುದೆ ಆಡಂಬರವಿಲ್ಲದೆ ನಟಿಸಿರುವ ನಾಯಕ ಶಿವುನನ್ನು ನೋಡುತ್ತಿದ್ದರೆ ನಮ್ಮ ನಡುವಿನ ಹುಡುಗನೇನೋ ಎಂಬ ಫೀಲ್ ಕೊಡುತ್ತದೆ. ಮೈಂಡ್ ಫುಲ್ ಅಪ್ಸೆಟ್ ಆದಾಗ ನಮಸ್ತೆ ಗೋಸ್ಟ್ ನೋಡಿಕೊಂಡು ಬಂದರೆ ಒಂದಷ್ಟು ನಗು, ಒಂದಷ್ಟು ನಡುಕ ಎರಡು ಸಿಗೋದು ಗ್ಯಾರಂಟಿ. ಭರತ್ ನಂದಾ ಹೊಸ ನಾಯಕನೇ ಆದರೂ ಎಲ್ಲೂ ಅತಿಶಯೋಕ್ತಿ ಎಂಬಂತೆ ಬಿಲ್ಡಪ್ ಕೊಟ್ಟಿಲ್ಲ. ವಿದ್ಯಾರಾಜ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಮೇಶ್ ಕುಮಾರ್ ಎನ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
