ನಮ್ರತಾ ಗೌಡ ಈಗ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದರಲ್ಲೂ ಬಿಗ್ ಬಾಸ್ ಮುಗಿದ ಮೇಲಂತೂ ಫುಲ್ ಫೇಮಸ್ ಆಗಿ ಹೋಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಂತು ಸಿಕ್ಕಾಪಟ್ಟೆ ಆಕ್ಟೀವ್ ಆಗಿ ಇರುತ್ತಾರೆ. ಡ್ಯಾನ್ಸ್ ಮಾಡುವುದರಲ್ಲೂ ನಂಬರ್ ಒನ್. ಕಿಶನ್ ಬೆಳಗಲಿ ಜೊತೆಗೆ ರೆಟ್ರೋ ಸ್ಟೈಲ್‌ನಲ್ಲಿ ಡ್ಯಾನ್ಸ್‌ಗಳ ಮೂಲಕ ಗುರುತಿಸಿ ಕೊಂಡಿದ್ದ ನಮ್ರತಾ ಇದೀಗ ದರ್ಶಿನಿ ಡೆಲ್ಟಾ ಅವರ ಜೊತೆಗೆ ಹೆಜ್ಜೆ ಹಾಕಿದ್ದಾರೆ.
ಕೊರಿಯೋಗ್ರಾಫರ್ ಆಗಿರುವ ದರ್ಶಿನಿ ಡೆಲ್ಟಾ ಅವರೊಂದಿಗೆ ಡಾನ್ಸ್ ಮಾಡಿರುವ ನಟಿ ನಮ್ರತಾ ಗೌಡ ನೆಟ್ಟಿಗರಿಂದ ಭೇಷ್ ಎನಿಸಿಕೊಂಡಿದ್ದಾರೆ. ದರ್ಶಿನಿ ಹಾಗೂ ನಮ್ರತಾ ಈ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಬಹಳ ಚೆನ್ನಾಗಿ ಈ ನೃತ್ಯ ಮೂಡಿ ಬಂದಿದೆ. ಮೇಲುಕೋಟೆಯಲ್ಲಿ ಇಬ್ಬರು ಹೆಜ್ಜೆ ಹಾಕಿದ್ದಾರೆ.
‘ಗಾಳಿಪಟ’ ಸಿನಿಮಾದ ಬಹಳ ಪಾಪ್ಯುಲರ್ ಹಾಡು ಆಗಿರುವ “ನಧೀಂ ಧೀಂ ತನ” ಹಾಡಿಗೆ ನಟ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಭಾವನಾ ರಾವ್ ಅವರ ಜೋಡಿ ಮೋಡಿ ಮಾಡಿತ್ತು.
ನದೀಂ ಧೀಮ್ ತನ ಹಾಡು ಅದರದ್ದೇ ಆದ ಪಾಪುಲಾರಿಟಿಯೊಂದಿಗೆ ಇಂದಿಗೂ ಪ್ರಚಲಿತದಲ್ಲಿ ಇದೆ. ಹೀಗಿರುವಾಗ ಇಬ್ಬರೂ ನಟಿಯರು ಈ ಹಾಡಿಗೆ ಡ್ಯಾನ್ಸ್ ಮಾಡಿರುವುದು ಇದೀಗ ಬಹಳ ವೈರಲ್ ಆಗಿದೆ. ಬಹಳ ಐತಿಹಾಸಿಕ ಹಿನ್ನೆಲೆ ಇರುವ ಒಂದು ಜಾಗದಲ್ಲಿ ಡ್ಯಾನ್ಸ್ ಮಾಡಿರುವ ನಟಿ ನಮ್ರತಾ ಗೌಡ ಹಾಗೂ ದರ್ಶಿನಿ ಡೆಲ್ಟಾ ಡ್ಯಾನ್ಸ್ ಮಾಡಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ. ಅದರಲ್ಲೂ ನಮ್ರತಾ ಡ್ಯಾನ್ಸ್ ನೋಡಿ ಹೊಗಳುತ್ತಿದ್ದಾರೆ.