ಬೆಂಗಳೂರು: ದಿವಂಗತ ಪುನೀತ್ ಹುಟ್ಟಿದ ಹಬ್ಬದ ಹಿನ್ನೆಲೆ ಅವರ ಅಭಿಮಾನಿಯಾಗಿರುವ ನಟಿ, ಬಿಗ್‌ಬಾಸ್ ಸ್ಪರ್ಧಿ ನಮ್ರತಾ ಗೌಡ ಅವರು ಅನ್ನದಾನ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಮಾರ್ಚ್ 17ರಂದು ದಿ.ಪುನೀತ್ ರಾಜಕುಮಾರ್ ಅವರ ಬರ್ತಡೇಯನ್ನು ರಾಜ್ಯದಾದ್ಯಂತ ಸ್ಫೂರ್ತಿ ದಿನವನ್ನಾಗಿ ಅವರ ಅಭಿಮಾನಿಗಳು ಆಚರಿಸಿದ್ದರು.ಅದರಂತೆಯೇ ಅಪ್ಪು ಅಭಿಮಾನಿಯಾಗಿರುವ ಬಿಗ್‌ಬಾಸ್ ಸ್ಪರ್ಧಿ ನಮ್ರತಾ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು, ಟು ಡೇ ಈಸ್ ಮಾರ್ಚ್ 17, ಎಸ್ ಮೈ ಬಾಸ್ ಪುನೀತ್ ರಾಜಕುಮಾರ್ ಅವರ ಹುಟ್ಟಿದ ಹಬ್ಬ, ಇವತ್ತು ನಾನು ನನ್ನ ಕೈಲಾದಷ್ಟು ಸಹಾಯವನ್ನು ಮಾಡ್ತ ಇದ್ದೀನಿ. ಹಾಗೂ ಇದನ್ನೇ ನಾನು ಪ್ರತಿ ತಿಂಗಳ 17ರಂದು ಮಾಡುತ್ತೇನೆಂದು ವಿಡಿಯೋವನ್ನು ಹಂಚಿಕೊಂಡಿದ್ದರು.
ಇವರ ಮಾನವೀಯ ಕೆಲಸವನ್ನು ನೋಡಿ ಹಲವು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇದೊಂದು ಪಬ್ಲಿಸಿಟಿ ಗಿಮಿಕ್ ಎಂದಿದ್ದಾರೆ.
ಕೆಮೆಂಟ್ ಹೀಗಿದೆ:
ಸಹಾಯ ಮಾಡೋದು ಒಂದು ಕೈಯಲ್ಲಿ ಮಾಡಿದ್ದೂ ಇನ್ನೊಂದು ಕೈ ಗೆ ಗೊತಾಗಬಾರ್ದು ಅಂತಾರಲ್ಲ ನೀವು ಪಬ್ಲಿಸಿಟಿ ಗೋಸ್ಕರ ಮಾಡೋದ ಅಕ್ಕ..
ಸೂಪರ್ ಮ್ಯಾಮ್ ನೀವು ಪುನೀತ್ ಇಷ್ಟು ಸರ್ ನ ಇಷ್ಟು ದೊಡ್ಡ ಅಭಿಮಾನಿ ಅಂತ ಗೊತ್ತಿರ್ಲಿಲ್ಲ. ಕೈಯಲ್ಲೂ ಸರ್ ನೇಮ್ ಟ್ಯಾಟೂ ಆಕುಸ್ಕೊಂಡಿದಿರ. ಕೆಲವೊಬ್ಬರು ಬಿಗ್ ಬಾಸ್ ಮನೇಲಿ ವೋಟ್ ಗೋಸ್ಕರ ನಾನ್ ಅವ್ರ ಫ್ಯಾನ್ ಹೊರ್ಗಡೆ ಬಂದಮೇಲೆ ಇನ್ನೊಬ್ರ ಫ್ಯಾನ್ ಬರೀ ವೋಟ್ ಗೋಸ್ಕರ ಬಕೆಟ್ ಇಡಿತಿದ್ರು. ಆದ್ರೂ ನೀವು ನಿಮ್ಮ ಸ್ವಂತಿಕೆ ಇಂದ ಆಟ ಆಡಿದ್ರೆ ನೀವು ನಮ್ ದೇವ್ರ ಅಭಿಮಾನಿ ಅಂಥ ಗೊತ್ತಿದ್ರೆ ನಿಮಗೆ ಇನ್ನ ತುಂಬಾ ವೊಟ್ಸ್ ಬರೋವು. ಈ ಬಿಗ್ ಬಾಸ್ ನವ್ರು ಆ ಟ್ಯಾಟೂ ನ ಎಲ್ಲೂ ಝೂಮ್ ಮಾಡಿ ತೋರಿಸಲಿಲ್ಲ.
ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.