Sandalwood Leading OnlineMedia

ಮತ್ತೆ ಟಿ.ಎಸ್.ಎನ್ ಗರಡಿಯಲ್ಲಿ ಡಾಲಿ ; ಅಂದು `ಅಲ್ಲಮ’ ಇಂದು `ಕೆಂಪೇಗೌಡ’

ಮೇರು ಯೋಧ ಮತ್ತು ಬೆಂಗಳೂರಿನ ಕಾರಣಿಕ, ಕೆಂಪೇಗೌಡರ ಜೀವನ ಚರಿತ್ರೆಯನ್ನು ಹೇಳುವ ಕಥೆ “ನಾಡಪ್ರಭು ಕೆಂಪೇಗೌಡ” ಆಗಿದ್ದು,‌ ಇದನ್ನು ಖ್ಯಾತ ನಿರ್ದೇಶಕ ಡಾ.ಟಿ.ಎಸ್.ನಾಗಾಭರಣ ನಿರ್ದೇಶಿಸಲಿದ್ದಾರೆ ಹಾಗೂ ಚಿತ್ರದಲ್ಲಿ ನಟರಾಕ್ಷಸ ಡಾಲಿ‌ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪೋಸ್ಟರ್ ನಲ್ಲಿ‌, ಧನಂಜಯ ಅವರ ಐತಿಹಾಸಿಕ ಲುಕ್ ಎಲ್ಲರ‌ ಗಮನ ಸೆಳೆದಿದೆ.
ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ. ಚಿತ್ರವನ್ನು ಡಾ.ಎಂ.ಎನ್.ಶಿವರುದ್ರಪ್ಪ ಮತ್ತು ಶುಭಂ ಗುಂಡಲ‌ ಈಶ್ವರ ಎಂಟರ್ಟೇನ್ ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.

READ MORE; Kreem Movie Review: ಜನ ಸಾಮಾನ್ಯನಿಗೆ ನಿಲುಕದ ಅಸಮಾನ್ಯ ಚಿತ್ರ!

“ಬಂಗಾರದ ಜಿಂಕೆ”, “ಜನುಮದ ಜೋಡಿ”, “ಕಲ್ಲರಳಿ ಹೂವಾಗಿ” ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿದ ಮೇರು ನಿರ್ದೇಶಕ ಡಾ.ಟಿ.ಎಸ್
ನಾಗಾಭರಣ ಅವರ ಎರಡು ದಶಕಗಳ ಕನಸಿನ ಕೂಸಾದ “ನಾಡಪ್ರಭು ಕೆಂಪೇಗೌಡ”, ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಸದ್ದು ಮಾಡಿರುವ ಜೀವನ ಚರಿತ್ರೆಯ ಕಥನವಾಗಿದೆ. ಹಲವಾರು ವರ್ಷಗಳ ನಂತರ ಮತ್ತೆ ಆಕ್ಷನ್ ಕಟ್ ಹೇಳಲು ಹೊರಟಿರುವ‌ ನಾಗಾಭರಣ ಅವರಿಗೆ ಈ ಚಿತ್ರವು ಕಮ್ ಬ್ಯಾಕ್ ಆಗಲಿದೆ ಎಂಬುದು ಸಿನಿ ಪ್ರೇಕ್ಷಕರ ಅಭಿಪ್ರಾಯ. ಈ ಹಿಂದೆ 2017ರಲ್ಲಿ ಡಾಲಿ ಮತ್ತು ಟಿ.ಎಸ್.ಎನ್ ಕಾಂಬಿನೇಶನ್‌ನಲ್ಲಿ `ಅಲ್ಲಮ’ ಚಿತ್ರ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿದ್ದು, ಈಗ ಇದೇ ಕಾರಣಕ್ಕೆ ಈಗಾಗಲೇ `ನಾಡಪ್ರಭು ಕೆಂಪೇಗೌಡ’ ಚಿತ್ರದ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.

 

Share this post:

Related Posts

To Subscribe to our News Letter.

Translate »