Sandalwood Leading OnlineMedia

ಸ್ಟೈಲ್ ಐಕಾನ್ ಪ್ರಶಸ್ತಿಗೆ ಭಾಜನರಾದ ನಭಾ ನಟೇಶ್

ಸ್ಯಾಂಡಲ್ ವುಡ್ ಪಟಾಕಾ ಫುಲ್ ಖುಷಿಯಲಿದ್ದಾರೆ. ಕನ್ನಡದಿಂದ ನಟನಾ ಜರ್ನಿ ಆರಂಭಿಸಿದ್ದ ನಭಾ ನಟೇಶ್ ಈಗ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಶೃಂಗೇರಿ ಮೂಲದ ಈ ನಟಿ ಸದ್ಯ ತೆಲುಗು ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿರುವ ನಭಾ, ಔಟ್ ಲುಕ್ ಇಂಡಿಯನ್ ಬ್ಯುಸಿನೆಸ್ ಕೊಡುವ ಮಾಡುವ 2024ರ ಸ್ಟೈಲ್ ಐಕಾನ್ ಪ್ರಶಸ್ತಿಗೆ ಭಜನರಾಗಿದ್ದಾರೆ. ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ನಭಾಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು. ಸ್ಟೈಲೀಶ್ ಲುಕ್ ನಲ್ಲಿ ಅವಾರ್ಡ್ ಸ್ವೀಕರಿಸಿ ಕ್ಯಾಮೆರಾಗೆ ಪಟಾಕಾ ಪೋಸ್ ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ Jalandhara Movie Review: ಸುಳಿಯಲ್ಲಿ ಸಿಕ್ಕ ಸಾವಿನ ಸುಳಿವು!

ನಭಾ ನಟೇಶ್ ತೆಲುಗಿನಲ್ಲಿ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿಖಿಲ್ ನಾಯಕನಾಗಿ ನಟಿಸುತ್ತಿರುವ ಸ್ವಯಂಭೂ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅವರು ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದರ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಮೂವೀ ನಾಗಬಂಧಂನಯಲ್ಲಿಯೂ ಅಭಿನಯಿಸುತ್ತಿದ್ದಾರೆ. ಈ ಎರಡು ಚಿತ್ರಗಳೊಂದಿಗೆ, ನಭಾ ನಟೇಶ್ ಮತ್ತೊಮ್ಮೆ ಎಲ್ಲರ ಗಮನವನ್ನು ಸೆಳೆಯುಲು ಕಾತರರಾಗಿದ್ದಾರೆ.

 

 

 

Share this post:

Related Posts

To Subscribe to our News Letter.

Translate »