ತೆಲುಗು ನಟ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ಕ್ರೇಜಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಸ್ವಯಂಭು ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಸಹಸ್ರಮಾನಗಳ ಹಿಂದಿನ ಕಥೆಯನ್ನೊಳಗೊಂಡಿರುವ ಈ ಚಿತ್ರದ ಮೂಲಕ ವಜ್ರಕಾಯದ ಪಟಾಕ ಕಂಬ್ಯಾಕ್ ಮಾಡುತ್ತಿದ್ದಾರೆ. ಕನ್ನಡತಿ ನಭಾ ನಟೇಶ್ಗೆ 2023ರಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಈ ವೇಳೆ ಅವರು ಸರ್ಜರಿಗೂ ಒಳಗಾಗಬೇಕಾಯಿತು. ಈಗ ಸಂಪೂರ್ಣ ಚೇತರಿಕೆ ಕಂಡಿರುವ ಶೃಂಗೇರಿ ಸುಂದರಿ ಸ್ವಯಂಭು ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ.
ಇದನ್ನೂ ಓದಿ :ನಾಳೆಯಿಂದ ಚಿತ್ರಮಂದಿರಗಳಲ್ಲಿ ಬರೀ `ಮ್ಯಾಟ್ನಿ’ ಶೋ! : ಸತೀಶ್ ನೀನಾಸಂ ಅಭಿನಯದ ಬಹುನಿರೀಕ್ಷಿತ ಚಿತ್ರ ತೆರೆಗೆ
ಸ್ವಯಂಭು ಶೂಟಿಂಗ್ ಅಖಾಡಕ್ಕೆ ನಭಾ ಎಂಟ್ರಿ ಕೊಟ್ಟಿದ್ದಾರೆ. ಸಣ್ಣ ಝಲಕ್ ಮೂಲಕ ಚಿತ್ರತಂಡ ಆಕೆಯನ್ನು ಚಿತ್ರಪ್ರೇಮಿಗಳಿಗೆ ಪರಿಚಯಿಸಿದೆ. ರಾಣಿಯಂತೆ ಕಂಗೊಳಿಸುತ್ತಿರುವ ನಭಾ ಲುಕ್ ರಿವೀಲ್ ಮಾಡಲಾಗಿದೆ. ಆದ್ರೆ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟುಬಿಟ್ಟುಬಿಟ್ಟುಕೊಟ್ಟಿಲ್ಲ. ಶಿವಣ್ಣ ನಟನೆಯ ವಜ್ರಕಾಯ ಚಿತ್ರದ ಮೂಲಕ ಸಿನಿಮಾ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ನಭಾ, ಪೂರಿ ಜಗನ್ನಾಥ್ ನಿರ್ದೇಶನದ ಇಸ್ಮಾರ್ಟ್ ಶಂಕರ್ ಮೂಲಕ ಪ್ರಖ್ಯಾತಿ ಗಳಿಸಿದರು. ನಿಖಿಲ್ ನಾಯಕನಟನಾಗಿರುವ ಸ್ವಯಂಭು ಸಿನಿಮಾದಲ್ಲಿ ಸಂಯುಕ್ತ ಮೆನನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮ್ಮ ಪಾತ್ರಕ್ಕಾಗಿ ಅವರು ತಯಾರಿಯಲ್ಲಿದ್ದಾರೆ. ಅಂದಹಾಗೇ ಭರತ್ ಕೃಷ್ಣಮಾಚಾರಿ ಸ್ವಯಂಭು ಆಕ್ಷನ್ ಕಟ್ ಹೇಳಿದ್ದಾರೆ.
ಇದನ್ನೂ ಓದಿ :‘ಜಾಜಿ’ ಹಾಡು ಬಿಡುಗಡೆ ಮಾಡಿ ಶುಭಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ .
ಪಿಕ್ಸೆಲ್ ಸ್ಟುಡಿಯೋ ಮೂಲಕ ಭುವನ್ ಹಾಗೂ ಶ್ರೀಕರ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಟ್ಯಾಗೋರೆ ಮಧು ಪ್ರಸ್ತುತಪಡಿಸುತ್ತಿದ್ದಾರೆ. ಸ್ವಯಂಭೂ ಎಂದರೆ ಸ್ವಯಂ ಹುಟ್ಟು ಎಂದರ್ಥ. ಈ ಸಿನಿಮಾ ನಿಖಿಲ್ ಸಿದ್ದಾರ್ಥ್ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರವಾಗಿದೆ. ಮನೋಜ್ ಪರಮಹಂಸ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ವಾಸುದೇವ್ ಮುನೆಪ್ಪಗರಿ ಚಿತ್ರಕ್ಕೆ ಸಂಭಾಷಣೆಯನ್ನು ನೀಡಿದ್ದಾರೆ.