Sandalwood Leading OnlineMedia

ನಯನತಾರ ಧರಿಸಿದ್ದ ಬಟ್ಟೆಯ ಮೇಲೆ ಕೂಡ ಧನುಷ್‌ಗೆ ರೈಟ್ಸ್ ಇದೆ : ಏನಿದು ನಾನುಂ ರೌಡಿತಾನ್ ವಿವಾದ..?

ನಯನತಾರಾ ಡಾಕ್ಯುಮೆಂಟರಿ ರೈಟ್ಸ್ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇದೀಗ ನಟ, ನಿರ್ಮಾಪಕರ ಧನುಷ್ ಹೊಸ ವಾದ ಮುಂದಿಟ್ಟಿದ್ದಾರೆ. ‘ನಾನುಂ ರೌಡಿತಾನ್’ ಚಿತ್ರದಲ್ಲಿ ನಯನತಾರ ಧರಿಸಿದ್ದ ಬಟ್ಟೆಯ ಮೇಲೆ ಕೂಡ ಧನುಷ್‌ಗೆ ರೈಟ್ಸ್ ಇದೆ ಎಂದಿರುವುದು ಅಚ್ಚರಿ ಮೂಡಿಸಿದೆ. ವಿಘ್ನೇಶ್ ಶಿವನ್ ಹಾಗೂ ನಯನತಾರ ಅದ್ಧೂರಿಯಾಗಿ ಮದುವೆ ಆಗಿದ್ದರು. ಆ ಮದುವೆ ಸಮಾರಂಭದ ಚಿತ್ರೀಕರಣ ಹಾಗೂ ಪ್ರಸಾರದ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಕೊಂಡುಕೊಂಡಿತ್ತು. ಗೌತಮ್ ವಾಸುದೇವನ್ ನಿರ್ದೇಶನದಲ್ಲಿ ನಯನತಾರ ಜೀವನದ ಕಥೆಯನ್ನು ಡಾಕ್ಯುಮೆಂಟರಿ ರೂಪದಲ್ಲಿ ಕಟ್ಟಿಕೊಡಲಾಗಿತ್ತು. ಅದರಲ್ಲಿ ನಯನತಾರ ಹುಟ್ಟಿನಿಂದ ಮದುವೆ ಆಗಿ ಸಾರೋಗಸಿ ಪದ್ಧತಿಯಲ್ಲಿ ಅವಳಿ ಮಕ್ಕಳನ್ನು ಪಡೆದ ವಿಚಾರದವರೆಗೂ ಎಲ್ಲಾ ಸಂಗತಿಯನ್ನು ಹೇಳಲಾಗಿದೆ.

ಹೆಸರಿತ್ತು!” ‘ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ ಹೆಸರಿನ ಡಾಕ್ಯುಮೆಂಟರಿ ಇತ್ತೀಚೆಗೆ ಸ್ಟ್ರೀಮಿಂಗ್ ಆಗಿತ್ತು. ಆದರೆ ಡಾಕ್ಯುಮೆಂಟರಿಯಲ್ಲಿ ನಯನತಾರ ಹಾಗೂ ವಿಘ್ನೇಶ್ ಶಿವನ್ ಪ್ರೀತಿ ಮದುವೆ ಬಗ್ಗೆ ಪ್ರಸ್ತಾಪಿಸುವಾಗ ‘ನಾನುಂ ರೌಡಿತಾನ್’ ವಿಚಾರ ಬರುತ್ತದೆ. ವಿಘ್ನೇಶ್ ನಿರ್ದೇಶನದ ಆ ಚಿತ್ರದಲ್ಲಿ ನಯನ್ ನಟಿಸಿದ್ದರು. ಚಿತ್ರವನ್ನು ಧನುಷ್ ನಿರ್ಮಾಣ ಮಾಡಿದ್ದರು. ಡಾಕ್ಯುಮೆಂಟರಿಗೆ ಚಿತ್ರದ ಮೇಕಿಂಗ್ ತುಣು ಬಳಸಿಕೊಳ್ಳಲಾಗಿತ್ತು. ಇದಕ್ಕೆ ಧನುಷ್ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾನೂನಾತ್ಮಕವಾಗಿ ನೋಟಿಸ್ ನೀಡಿ 10 ಕೋಟಿ ರೂ. ಪರಹಾರ ಕೇಳಿ ಧನುಷ್ ಕೋರ್ಟ್ ಮೆಟ್ಟಿಲೇರಿದ್ದರು. ಅದಕ್ಕೆ ನಯನತಾರ ತಿರುಗೇಟು ನೀಡಿದ್ದರು. ಸುದೀರ್ಘವಾಗಿ ಪೋಸ್ಟ್ ಮಾಡಿದ್ದರು. ಕಾನೂನಾತ್ಮಕವಾಗಿಯೂ ಹೋರಾಟ ನಡೆಸುತ್ತಿದ್ದಾರೆ. ಇದೀಗ ವಿಚಾರಣೆ ವೇಳೆ ಧನುಷ್ ಪರ ವಕೀಲರು ಮತ್ತೊಂದು ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಡಾಕ್ಯುಮೆಂಟರಿಯಲ್ಲಿ ಬಳಸಿರುವ ಆ 28 ಸೆಕೆಂಡ್ ಮೇಕಿಂಗ್ ವೀಡಿಯೋ ಚಿತ್ರಕ್ಕೆ ಸಹಿ ಮಾಡುವಾಗ ನಿರ್ಮಾಪಕ ಧನುಷ್ ಜೊತೆ ನಯನತಾರಾ ಮಾಡಿಕೊಂಡು ಒಪ್ಪಂದ(ಅಗ್ರಿಮೆಂಟ್) ಉಲ್ಲಂಘಿಸಿದಂತೆ ಆಗುತ್ತದೆ. ಹಾಗಾಗಿ ಅವರ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಬೇಕು ಎಂದು ಧನುಷ್ ಪರ ವಕೀಲರಾದ ಪಿ ಎಸ್ ರಾಮನ್ ನ್ಯಾಯಾಲಯದಲ್ಲಿ ಕೋರಿದ್ದಾರೆ.

ಧನುಷ್ ಒಡೆತನದ ವಂಡರ್‌ಬಾರ್ ಫಿಲ್ಮ್ಸ್ ಸಂಸ್ಥೆ ‘ನಾನುಂ ರೌಡಿತಾನ್’ ಚಿತ್ರ ನಿರ್ಮಿಸಿತ್ತು. ತನ್ನ ಹಾಗೂ ನಯನತಾರ ವಿರುದ್ಧ ವಂಡರ್‌ಬಾರ್ ಸಂಸ್ಥೆ ಹೂಡಿರುವ ಮೊಕದ್ದಮೆ ತಿರಸ್ಕರಿಸುವಂತೆ ನೆಟ್‌ಫಿಕ್ಸ್ ಅರ್ಜಿ ಸಲ್ಲಿಸಿತ್ತು. ಅದರ ತೀರ್ಪನ್ನು ಮದ್ರಾಸ್ ಹೈಕೋರ್ಟ್ ಕಾಯ್ದಿರಿಸಿತ್ತು. ಆದರೆ ನಯನತಾರ ಚಿತ್ರೀಕರಣದ ವೇಳೆ ತೊಟ್ಟ ಕಾಸ್ಟ್ಯೂಮ್ ಮೇಲೂ ನನಗೆ ರೈಟ್ಸ್ ಇದೆ. ಹಾಗಾಗಿ ದಾವೆಯನ್ನು ಉಲ್ಲಂಘಿಸಲು ಸಾಧ್ಯವಿಲ್ಲ, ವಿಚಾರಣೆ ನಡೆಸಬಹುದು ಎಂದು ವಕೀಲರ ಮೂಲಕ ಧನುಷ್ ವಾದ ಮುಂದಿಟ್ಟಿದ್ದಾರೆ.

Share this post:

Related Posts

To Subscribe to our News Letter.

Translate »