Sandalwood Leading OnlineMedia

ರಶ್ಮಿಕಾ ಮಂದಣ್ಣ ಫ್ಯಾಮಿಲಿ ಸ್ಟಾರ್ ಗೆ ಡಾರ್ಲಿಂಗ್ಸ್ ವಿಜಯ ದೇವರಕೊಂಡ ಮತ್ತು ಪರಶುರಾಮ್ ಶುಭ ಹಾರೈಸಿದ್ದಾರೆ

ಗೀತ ಗೋವಿಂದಂ’ ಸಿನಿಮಾದಲ್ಲಿ ವಿಜಯ್ ಹಾಗು ರಶ್ಮಿಕಾ ಒಟ್ಟಾಗಿ ನಟಿಸಿದಾಗಿನಿಂದಲೂ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಒಬ್ಬರ ವೃತ್ತಿ ಜೀವನಕ್ಕೆ ಮತ್ತೊಬ್ಬರು ಬೆಂಬಲವಾಗಿ ನಿಲ್ಲುತ್ತಿದ್ದಾರೆ. ವಿಜಯ್ ಬಳಿ ರಶ್ಮಿಕಾ ಹಲವು ಸಲಹೆಗಳನ್ನು ಕೇಳುತ್ತಾರಂತೆ. ಈ ವಿಚಾರವನ್ನು ಅವರೇ ಈ ಮೊದಲು ಹೇಳಿಕೊಂಡಿದ್ದರು.

ವಿಜಯ್ ದೇವರಕೊಂಡ (Vijay Devarakonda) ಹಾಗೂ ಮೃಣಾಲ್ ಠಾಕೂರ್ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಏಪ್ರಿಲ್ 5ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಎಲ್ಲರೂ ಆಲ್​ ದಿ ಬೆಸ್ಟ್ ಹೇಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ  ಕೂಡ ವಿಜಯ್ ದೇವರಕೊಂಡಗೆ ವಿಶ್ ಮಾಡಿದ್ದಾರೆ. ‘ಅಲ್ ದಿ ಬೆಸ್ಟ್ ಡಾರ್ಲಿಂಗ್ಸ್’ ಎಂದು ಪ್ರಿತಿಯಿಂದ ಶುಭಕೋರಿದ್ದಾರೆ.

ಗೀತ ಗೋವಿಂದಂ’ ಸಿನಿಮಾದಲ್ಲಿ ವಿಜಯ್ ಹಾಗು ರಶ್ಮಿಕಾ ಒಟ್ಟಾಗಿ ನಟಿಸಿದಾಗಿನಿಂದಲೂ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಒಬ್ಬರ ವೃತ್ತಿ ಜೀವನಕ್ಕೆ ಮತ್ತೊಬ್ಬರು ಬೆಂಬಲವಾಗಿ ನಿಲ್ಲುತ್ತಿದ್ದಾರೆ. ವಿಜಯ್ ಬಳಿ ರಶ್ಮಿಕಾ ಹಲವು ಸಲಹೆಗಳನ್ನು ಕೇಳುತ್ತಾರಂತೆ. ಈ ವಿಚಾರವನ್ನು ಅವರೇ ಈ ಮೊದಲು ಹೇಳಿಕೊಂಡಿದ್ದರು. ಅದೇ ರೀತಿ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಒಬ್ಬರಿಗೊಬ್ಬರು ವಿಶ್ ಮಾಡಿಕೊಳ್ಳುತ್ತಾರೆ.

ಇದನ್ನೂ ಓದಿ :ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಕೆಟ್ಟ ಸುದ್ದಿ: ಮುಂಬೈ ಇಂಡಿಯನ್ಸ್​ಗೆ ಬಿಗ್ ಶಾಕ್ : Suryakumar Yadav

‘ಫ್ಯಾಮಿಲಿ ಸ್ಟಾರ್’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ರಶ್ಮಿಕಾ ಟ್ವೀಟ್ ಮಾಡಿದ್ದಾರೆ. ‘ನಾನು ನನ್ನ ಡಾರ್ಲಿಂಗ್​​ಗಳಾದ ವಿಜಯ್ ದೇವರಕೊಂಡ ಹಾಗೂ ಪರಶುರಾಮ್ ಪೆಟ್ಲಾಗೆ (ನಿರ್ದೇಶಕ) ವಿಶ್ ಮಾಡುತ್ತೇನೆ. ಏಪ್ರಿಲ್ 5ರಂದು ಸಿನಿಮಾ ರಿಲೀಸ್ ಆಗಲಿದೆ. ಸಾಕಷ್ಟು ಎಗ್ಸೈಟ್ ಆಗಿದ್ದೇನೆ. ಪಾರ್ಟಿ ಬೇಕು’ ಎಂದಿರುವ ಅವರು, ಮೃಣಾಲ್​ಗೆ ‘ಆಲ್ ದಿ ಬೆಸ್ಟ್ ಮೈ ಲವ್’ ಎಂದು ಬರೆದಿದ್ದಾರೆ.

 

 

ಇದನ್ನೂ ಓದಿ :ಸಮಂತಾ-ನಾಗಚೈತನ್ಯ ಡಿವೋರ್ಸ್‌ಗೆ ಕಾರಣ ಇದೇ!! 4 ವರ್ಷಗಳ ನಂತರ ಬಟಾಬಯಲಾಯ್ತು ಅಸಲಿ ಸತ್ಯ!

‘ಫ್ಯಾಮಿಲಿ ಸ್ಟಾರ್’ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಈ ಟ್ರೇಲರ್ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಈ ಸಿನಿಮಾ ನೋಡಲು ಫ್ಯಾನ್ಸ್ ಕಾದಿದ್ದಾರೆ. ವಿಜಯ್ ದೇವರಕೊಂಡ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಖುಷಿ’ ಚಿತ್ರದಲ್ಲಿ. ಈ ಸಿನಿಮಾದಲ್ಲಿ ಅವರು ಸಮಂತಾ ಜೊತೆ ತೆರೆ ಹಂಚಿಕೊಂಡಿದ್ದರು.

Share this post:

Related Posts

To Subscribe to our News Letter.

Translate »