‘ಮುಂಗಾರು ಮಳೆ’ ನಟಿ ಪೂಜಾಗಾಂಧಿ ವಿವಾಹವಾಗುತ್ತಿರೋದು ಕನ್ಫರ್ಮ್ ಆಗಿದೆ. ಸ್ವತ: ಪೂಜಾಗಾಂಧಿಯೇ ಮದುವೆ ಆಗಮಿಸುವಂತೆ ತಮ್ಮ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ. ಮೊದಲ ಸುದ್ದಿಯಾದಂತೆ ನಾಳೆ ( ನವೆಂಬರ್ 29) ಪೂಜಾ ಗಾಂಧಿ ತಮ್ಮ ಬಹುದಿನದ ಗೆಳೆಯನೊಂದಿಗೆ ಕೌಟುಂಬಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಪೂಜಾ ಗಾಂಧಿ ಕೆಲವು ದಿನಗಳಿಂದ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿ ಇದ್ದರು. ಇತ್ತೀಚೆಗೆ ಕನ್ನಡ ಕಲಿಯುವ ಮೂಲಕ ಕನ್ನಡಿಗರ ಮನಗೆದ್ದಿದ್ದರು. ಈ ವಿಷಯವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಲೇ ಇದ್ದರು.
ಇದನ್ನೂ ಓದಿ ’ಕ್ಲಾಂತ’ ಮೂಲಕ ಕನ್ನಡಕ್ಕೆ ಬಂದ ವಿಘ್ನೇಶ್..ಭರವಸೆ ಹುಟ್ಟಿಸಿದ ತುಳು ಹೀರೋ..
ಈಗ ಸದ್ದಿಲ್ಲದೆ ಸಿಂಪಲ್ ಆಗಿ ಕುವೆಂಪು ಅವರ ಮಂತ್ರ ಮಾಂಗಲ್ಯದಂತೆ ನಾಳೆ (ನವೆಂಬರ್ 29) ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಸಂಬಂಧ ನಟಿ ತಮ್ಮ ಕೈಯ್ಯಾರೆ ಕನ್ನಡದಲ್ಲಿಯೇ ಬರೆದು ತಮ್ಮ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ. ಈ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ‘ಮುಂಗಾರು ಮಳೆ’ ನಟಿ ಪೂಜಾ ಗಾಂಧಿ ಬೆಂಗಳೂರು ಮೂಲದ ಉದ್ಯಮಿಯನ್ನು ಮದುವೆ ಆಗುತ್ತಿದ್ದಾರೆ. ಬೆಂಗಳೂರಿನ ಲಾಜಿಸ್ಟಿಕ್ ಕಂಪನಿ ಮಾಲೀಕರಾಗಿರೋ ವಿಜಯ್ ಘೋರ್ಪಡೆ ಎಂಬುವವರ ಜೊತೆ ಪೂಜಾ ಗಾಂಧಿ ಕೆಲವು ದಿನಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈಗ ಇಬ್ಬರೂ ಕೌಟುಂಬಿಕ ಜೀವನಕ್ಕೆ ಕಾಲಿಡುವುದಕ್ಕೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಇದೇ ನವೆಂಬರ್ 29ರಂದು ಬೆಂಗಳೂರಿನ ಯಲಂಹಕದ ಸಮೀಪ ನಟಿ ಪೂಜಾ ಗಾಂಧಿ ಮದುವೆ ಮಂತ್ರ ಮಾಂಗಲ್ಯದಂತೆ ನಡೆಯಲಿದೆ. ಆದರೆ, ಪೂಜಾ ಗಾಂಧಿ ಇನ್ನೂ ಮದುವೆ ಸ್ಥಳವನ್ನು ಬಹಿರಂಗ ಪಡಿಸಿಲ್ಲ. ಮದುವೆ ದಿನವೇ ತಿಳಿಸುವುದಾಗಿ ಆಮಂತ್ರಣ ಪತ್ರಿಕೆಯಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ ‘ಒಂದೇ ಒಂದು ಕಾಲ್’: ಧನ್ವೀರ್, ಅಭಿ, ಚಿಕ್ಕಣ್ಣಗೆ ದರ್ಶನ್ ಹೀಗೆ ಯಾಕೆ ಹೇಳಿದ್ರು…
“ಆತ್ಮೀಯರೇ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ನನ್ನ ಚಿತ್ರ ಜೀವನದ ಎಲ್ಲಾ ಬೆಳವಣಿಗೆಗಳಲ್ಲೂ ನೀವು ನನ್ನ ಜೊತೆಗಿದ್ದೀರಿ. ನವೆಂಬರ್ 29-11-2023ನೇ ತಾರೀಕು ಕುವೆಂಪು ಆಶಯದ “ಮಂತ್ರ ಮಾಂಗಲ್ಯ”ದ ಮೂಲಕ ವಿಜಯ್ ಘೋರ್ಪಡೆಯವರೊಂದಿಗೆ ಮದುವೆಯಾಗುತ್ತಿದ್ದೇನೆ. ಕುಟುಂಬದವರಾಗಿ ನೀವು ಬಂದು ಹರಸಿ,ಆಶೀರ್ವದಿಸಿ.” ಎಂದು ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಪೂಜಾಗಾಂಧಿ ಕನ್ನಡ ಕಲಿಯುವುದರಲ್ಲಿ ಉದ್ಯಮಿ ವಿಜಯ್ ಘೋರ್ಪಡೆಯವರೇ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದ ಕನ್ನಡ ಕಲಿಯುವುದಕ್ಕೆ ಪ್ರಯತ್ನ ಮಾಡುತ್ತಿದ್ದರು. ಕನ್ನಡ ಮಾತಾಡುವುದಕ್ಕೆ ಕಲಿತಿದ್ದರು. ಆದರೆ, ಓದಲು ಹಾಗೂ ಬರೆಯುವುದಕ್ಕೆ ಬರುತ್ತಿರಲಿಲ್ಲ. ಈಗ ಅದನ್ನೂ ಕಲಿತು ಭೇಷ್ ಎನಿಸಿಕೊಂಡಿದ್ದಾರೆ. ಈ ಪ್ರಯತ್ನದ ಹಿಂದೆ ವಿಜಯ್ ಇದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ ಕುತೂಹಲ ಮೂಡಿಸಿದೆ ಅದಿತಿ ಪ್ರಭುದೇವ – ಪವನ್ ತೇಜ ಅಭಿನಯದ “ಅಲೆಕ್ಸಾ” ಟ್ರೇಲರ್
ನಟಿ ಪೂಜಾಗಾಂಧಿ ಉತ್ತರ ಪ್ರದೇಶದ ಮೀರತ್‌ನವರು. ಇವರದ್ದು ಅಪ್ಪಟ ಪಂಜಾಬಿ ಕುಟುಂಬ. ಆದರೆ, ಪೂಜಾ ಗಾಂಧಿ ಬೆಳೆದಿದ್ದೆಲ್ಲ ದೆಹಲಿಯಲ್ಲಿ. ಹೀಗಾಗಿ ಶಿಕ್ಷಣ ಮುಗಿದ ಕೂಡಲೇ ಜಾಹೀತಾರು ಹಾಗೂ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ‘ಮುಂಗಾರು ಮಳೆ’ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಬಳಿಕ ಕನ್ನಡ ಚಿತ್ರರಂಗದಲ್ಲಿಯೇ ನೆಲೆಯೂರಿದ್ದಾರೆ.