Sandalwood Leading OnlineMedia

ಭೂಮಿಕಾ‌‌ ಚಿತ್ರಮಂದಿರದಲ್ಲಿ “ಕಾಳಿಪ್ರಸಾದ್” ಚಿತ್ರಕ್ಕೆ ಚಾಲನೆ

ವರನಟ ಡಾ||ರಾಜಕುಮಾರ್ ಅವರ ಅಭಿಮಾನಿ ಸಮೂಹ ಬಹಳ ದೊಡ್ಡದು. ಕರ್ನಾಟಕ ಮಾತ್ರವಲ್ಲ.‌ ಇಡೀ ವಿಶ್ವದಾದ್ಯಂತ ರಾಜಕುಮಾರ್ ಅವರನ್ನು ಪ್ರೀತಿಸುವ ಸಾಕಷ್ಟು ಜನರಿದ್ದಾರೆ. ತಮಿಳುನಾಡಿನವರಾದ ಕೆ.ವಿ.ಎಸ್ ರಾಯ್ ಅವರು ಸಹ ಅಣ್ಣವ್ರ ದೊಡ್ಡ ಅಭಿಮಾನಿ. “ಗುರಿ” ಚಿತ್ರದಲ್ಲಿ ಡಾ||ರಾಜ್ ಹೆಸರು ಕಾಳಿಪ್ರಸಾದ್ ಎಂದು. ಈಗ ಅದೇ ಹೆಸರಿನಲ್ಲಿ ಕೆ.ವಿ.ಎಸ್ ರಾಯ್ ಚಿತ್ರವನ್ನು ಆರಂಭಿಸಿದ್ದಾರೆ.”ಕಾಳಿಪ್ರಸಾದ್” ಚಿತ್ರದ ಮುಹೂರ್ತ ಸಮಾರಂಭ ಭೂಮಿಕಾ ಚಿತ್ರಮಂದಿರದಲ್ಲಿ ನಡೆಯಿತು. ಹಿರಿಯ ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡ “ಕಾಳಿಪ್ರಸಾದ್” ಚಿತ್ರಕ್ಕೆ ಚಾಲನೆ ನೀಡಿದರು. ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
 
 
ಪಕ್ಕದ ತಮಿಳುನಾಡಿನವನಾದ ನಾನು, ಕನ್ನಡ ಹಾಗೂ ಅಣ್ಣವ್ರ ಅಭಿಮಾನಿ. ರಾಜಕುಮಾರ್ ಮೇಲಿನ ಪ್ರೀತಿಯಿಂದಾಗಿ ಚಿತ್ರಕ್ಕೆ “ಕಾಳಿಪ್ರಸಾದ್” ಅಂತ ಹೆಸರಿಟ್ಟಿದ್ದೀನಿ. ನಮ್ಮ ಚಿತ್ರದಲ್ಲಿ ಲವ್, ಆಕ್ಷನ್, ಸೆಂಟಿಮೆಂಟ್ ಎಲ್ಲಾ‌ ಅಂಶಗಳು ಇದೆ‌. ಕರ್ನಾಟಕದ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುತ್ತೇವೆ. ಐದು ಹಾಡುಗಳಿದೆ. ದೊಡರಂಗೇಗೌಡರು ಬರೆದಿರುವ ಹಾಡೊಂದನ್ನು ಬಳಸಿಕೊಂಡಿದ್ದೇವೆ ಎಂದು ಚಿತ್ರದ ಬಗ್ಗೆ ನಿರ್ದೇಶಕ ಕೆ.ವಿ.ಎಸ್ ರಾಯ್ ಮಾಹಿತಿ ನೀಡಿದರು.
ಕನ್ನಡದ ಮೇಲೆ ಅಭಿಮಾನವಿಟ್ಟು ಇಲ್ಲಿಗೆ ಬರುವ ಪ್ರತಿಯೊಬ್ಬರು ಕನ್ನಡಿಗರು. ನಮ್ಮ ಭಾಷೆಯ ಮೇಲೆ ಪ್ರೀತಿಯಿಟ್ಟು‌ ಇಲ್ಲಿಗೆ ಬಂದು ಸಿನಿಮಾ ಮಾಡುತ್ತಿರುವ, ರಾಜಕುಮಾರ್ ಅಭಿಮಾನಿಯೂ ಆಗಿರುವ ಕೆ.ವಿ.ಎಸ್ ರಾಯ್ ಅವರಿಗೆ ಹಾಗೂ ಚಿತ್ರಕ್ಕೆ ಶುಭವಾಗಲಿ ಎಂದರು ಪದ್ಮಶ್ರೀ ದೊಡ್ಡರಂಗೇಗೌಡ.
 
 
ನಾಯಕ ರಾಮ ತೇಜ್ , ನಾಯಕಿಯರಾದ ಸೇಜ್, ಪ್ರಿಯಾ ಶೆಟ್ಟಿ, ವೈಷ್ಣವಿ, ಸಂಗೀತ ನಿರ್ದೇಶಕಿ ಇಂದು ವಿಶ್ವನಾಥ್ ಹಾಗೂ ಚಿತ್ರದ ಉಸ್ತುವಾರಿ ಹೊತ್ತಿರುವ ಓಂ ಸತೀಶ್ ಚಿತ್ರದ ಕುರಿತು ಮಾತನಾಡಿದರು. ಕೆ.ವಿ.ಎಸ್ ರಾಯ್ ಹಾಗೂ ರಾಮ್ ತೇಜ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎಸ್ ಎನ್ ಬಿ ಮೂರ್ತಿ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ ಹಾಗೂ ತ್ರಿಭುವನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
 
 
 
 
 
 
 
 
 

Share this post:

Translate »