Sandalwood Leading OnlineMedia

ನ್ಯಾಚುರಲ್ ಸ್ಟಾರ್ ನಾನಿ 30ನೇ ಸಿನಿಮಾಗೆ ಟೈಟಲ್ ಫಿಕ್ಸ್..ಅಪ್ಪ-ಮಗಳ ಎಮೋಷನ್ ಜರ್ನಿಗೆ ಸೀತಾರಾಮಂ ಬ್ಯೂಟಿ ಮೃಣಾಲ್ ನಾಯಕಿ*

*ಹಾಯ್ ನಾನ್ನ ಎನ್ನುತ್ತಾ ಎಂಟ್ರಿ ಕೊಟ್ಟ ಸೀತಾರಾಮಂ ಬ್ಯೂಟಿ ಮೃಣಾಲ್…ಇದು ನ್ಯಾಚುರಲ್ ಸ್ಟಾರ್ ನಾನಿ 30ನೇ ಸಿನಿಮಾ ಚಿತ್ರದ ಟೈಟಲ್*ದಸರಾ ಸಿನಿಮಾ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಬಳಿಕ ನ್ಯಾಚುರಲ್ ಸ್ಟಾರ್ ನಾನಿ ನಟಿಸುತ್ತಿರುವ 30ನೇ ಸಿನಿಮಾಗೆ ಟೈಟಲ್ ಫಿಕ್ಸ್ ಮಾಡಲಾಗಿದೆ. ಸಣ್ಣದೊಂದು ಝಲಕ್ ಮೂಲಕ ಚಿತ್ರತಂಡ ಶೀರ್ಷಿಕೆಯನ್ನು ಘೋಷಿಸಿದೆ. ನಾನಿ 30 ಚಿತ್ರಕ್ಕೆ ‘ಹಾಯ್ ನಾನ್ನ’ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಹಾಯ್ ನಾನ್ನ ಎಂಬ ತೆಲುಗು ಸಾಲಿನ ಅರ್ಥ ‘ಹಾಯ್ ಅಪ್ಪ’ ಎಂಬುದಾಗಿದೆ. ಸೌತ್ ಭಾಷೆಯಲ್ಲಿ ಒಂದೇ ಟೈಟಲ್ ಇರಲಿ ಎಂಬ ಉದ್ದೇಶದಿಂದ ಚಿತ್ರತಂಡ ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿಯೂ ಹಾಯ್ ನಾನ್ನ ಎಂದೇ ಶೀರ್ಷಿಕೆ ಫಿಕ್ಸ್ ಮಾಡಿದೆ.

ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದೊಂದಿಗೆ ಕಿಕ್ ಸ್ಟಾರ್ಟ್ ಸಿಕ್ಕಿರುವ ನಾನಿ 30ನೇ ಸಿನಿಮಾವನ್ನು, ಶೌರ್ಯುವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕನಾಗಿ ಇದು ಇವರ ಮೊದಲ ಸಿನಿಮಾವಾಗಿದೆ. ಎಮೋಶನಲ್ ಫ್ಯಾಮಿಲಿ ಎಂಟಟೈನ್ಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅಪ್ಪ-ಮಗಳ ಬಾಂದವ್ಯದ ಸುತ್ತ ಹೆಣೆಯಲಾದ ವಿಭಿನ್ನ ಕಥಾಹಂದರ ಒಳಗೊಂಡಿದೆ. ನಾನಿ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದಾರೆ.

ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಡಿ ಮೋಹನ್ ಚೆರುಕುರಿ, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸಾನು ಜಾನ್ ವರ್ಗೀಸ್ ISC ಕ್ಯಾಮೆರಾ ವರ್ಕ್ ಚಿತ್ರಕ್ಕಿರಲಿದ್ದು, ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ.

Share this post:

Related Posts

To Subscribe to our News Letter.

Translate »