ಬಹುಭಾಷಾ ನಟಿ ಮೃಣಾಲ್ ಠಾಕೂರ್ ಜೊತೆ ಡೇಟಿಂಗ್ ವಿಚಾರದ ಕುರಿತು ಕೊನೆಗೂ ರ‍್ಯಾಪರ್ ಬಾದ್ ಶಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಚಾರವೊಂದನ್ನು ರಿವೀಲ್ ಮಾಡಿದ್ದು, ಪ್ಯಾನ್ಸ್ ಶಾಕ್‌ಗೆ ಒಳಗಾಗಿದ್ದಾರೆ.
ಇದನ್ನೂ ಓದಿ ತೆಲುಗು, ಬಾಲಿವುಡ್ ತಾರೆಯರ ದೀಪಾವಳಿ ಸಂಭ್ರಮ: ಫೋಟೋಗಳು
ಬಿಟೌನ್ ನಟಿ ಮೃಣಾಲ್ ಠಾಕೂರ್ ಹಾಗೂ ರ‍್ಯಾಪರ್ ಬಾದ್ ಶಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮ್ಯಾಟರ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ, ಈ ಕುರಿತು ವಿಡಿಯೋ ಮತ್ತು ಫೋಟೋಸ್ ಸಹ ಸಖತ್ ವೈರಲ್ ಆಗಿವೆ. ಸಧ್ಯ ಈ ವದಂತಿಗೆ ರ‍್ಯಾಪರ್ ಬಾದ್ ಶಾ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ ತೆಲುಗು, ಬಾಲಿವುಡ್ ತಾರೆಯರ ದೀಪಾವಳಿ ಸಂಭ್ರಮ: ಫೋಟೋಗಳು
ಹೌದು.. ಶಿಲ್ಪಾ ಶೆಟ್ಟಿ ಮನೆಯಲ್ಲಿ ಜರುಗಿದ ದೀಪಾವಳಿ ಸಂಭ್ರಮದಲ್ಲಿ ಬಾಲಿವುಡ್ ತಾರೆಯಲ್ಲಿ ಪಾಲ್ಗೊಂಡಿದ್ದರು. ಅದರಂತೆ ರ‍್ಯಾಪರ್ ಬಾದ್ ಶಾ ಮತ್ತು ಮೃಣಾಲ್ ಸಹ ಭಾಗಿಯಾಗಿದ್ದರು. ಪಾರ್ಟಿಗೆ ಇಬ್ಬರು ಒಟ್ಟಿಗೆ ಬಂದಿದ್ದರು, ಇಷ್ಟೇ ಸಾಕಿತ್ತು ಅನಿಸುತ್ತೆ… ನೆಟ್ಟಿಗರು ತಾವೇ ಒಂದು ಕಥೆ ಕಟ್ಟಿ, ಲವ್ ಹೆಸರು ಇಟ್ಟು ಟ್ರೋಲ್ ಮಾಡಲು ಸ್ಟಾರ್ಟ್ ಮಾಡಿದ್ರು.
ಇನ್ನು ಮೃಣಾಲ್ ಬಾದ್ ಸಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಮ್ಯಾಟರ್ ಇಬ್ಬರೂ ಮದುವೆಯಾಗ್ತಾರೆ ಎನ್ನುವ ಮಟ್ಟಕ್ಕೆ ಹೋಗಿದೆ. ಸಧ್ಯ ಈ ಕುರಿತು ಬಾದ್ ಸಾ ಪ್ರತಿಕ್ರಿಯೆ ನೀಡಿದ್ದಾರೆ. ಮೃಣಾಲ್ ಜೊತೆಗಿನ ವಿಡಿಯೋ ಹಂಚಿಕೊಂಡು, “ಇಂಟರ್ನೆಟ್, ನಿಮ್ಮನ್ನು ಮತ್ತೊಮ್ಮೆ ನಿರಾಶೆಗೊಳಿಸಿದ್ದಕ್ಕೆ ಕ್ಷಮಿಸಿ.. ನೀವು ಅಂದುಕೊಂಡಂತೆ ಏನೂ ಇಲ್ಲ..” ಎಂದು ನಗುವ ಎಮೋಜಿ ಹಾಕಿ ಡೇಟಿಂಗ್ ಮ್ಯಾಟರ್ ಸುಳ್ಳು ಅಂತ ಸ್ಪಷ್ಟ ಪಡಿಸಿದ್ದಾರೆ.
ಈ ಹಿಂದೆ ಮಾಡೆಲ್ ಇಶಾ ರಿಖಿ ಜೊತೆ ಬಾದ್‌ಶಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಅದನ್ನು ರ‍್ಯಾಪರ್ ಸಂಪೂರ್ಣವಾಗಿ ನಿರಾಕರಿಸಿದ್ದರು. ಬಾದಶಹ ಈ ಹಿಂದೆ ಜಾಸ್ಮಿನ್ ಮಸಿಹ್ ಎಂಬಾಕೆಯನ್ನು ಮದುವೆಯಾಗಿದ್ದ. ಅವರು 2020 ರಲ್ಲಿ ವಿಚ್ಛೇದನ ಪಡೆದರು. ಅವರಿಗೆ ಜೆಸ್ಸೆಮಿ ಗ್ರೇಸ್ ಮಸಿಹ್ ಸಿಂಗ್ ಎಂಬ ಮಗಳೂ ಇದ್ದಾಳೆ.