Sandalwood Leading OnlineMedia

Mr.Natwarlal Movie Review: ರಣ ರೋಚಕ `ನಟ’ವರ್ ಲಾಲ್

 

Rating /5

ನಿಜ ಜೀವನದ ಅಪರಾಧಿ, ಅಪರಾಧ ಪ್ರಕರಣಗಳ ಸಿನಿಮಾಗಳು, ವೆಬ್ ಸರಣಿಗಳು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿವೆ. ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಇತ್ತೀಚೆಗೆ ಈ ರೀತಿಯ ಪ್ರಯತ್ನಗಳು ಕಡಿಮೆ. ಕೊರತೆಯ ನಡುವೆಯೂ ಇದೇ ವಿಷಯವನ್ನು ಆಧಾರವಾಗಿಟ್ಟುಕೊಂಡು  ರಿಲೀಸ್ ಆಗಿರುವ ಸಿನಿಮಾ ಮಿ.ನಟ್ವರ್‌ಲಾಲ್. ಮಿ.ನಟ್ವರ್‌ಲಾಲ್ ಇಂಟೆಲಿಜೆoಟ್ ಕ್ರಿಮಿನಲ್‌ಗಳ ಕತೆ ಹೊತ್ತ, ಒಂದು ರೀತಿಯಲ್ಲಿ ಪ್ಯಾನ್ ಇಂಡಿಯಾ ಕನ್ನಡ ಸಿನಿಮಾ ಕೂಡ. ನಿಜವಾದ ಅಪರಾಧ ಪ್ರಕರಣಗಳನ್ನೇ ಆಧಾರವಾಗಿರಿಸಿಕೊಂಡು ಕತೆ ಹೆಣೆಯಲಾಗಿರುವ ಕನ್ನಡ ಸಿನಿಮಾ ‘ನಟ್ವರ್ ಲಾಲ್’ ಸಿನಿಮಾದ ಟೀಸರ್ release ಆಗಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಈಗ ಸಿನಿಮಾ ರಿಲೀಸ್ ಆಗಿ ಪ್ರೇಕ್ಷಕನ ನಿರೀಕ್ಷೆಯನ್ನು ಸುಳ್ಳು ಮಾಡಲಿಲ್ಲ. ಈ ಹಿಂದೆ “ನಂಜು0ಡಿ ಕಲ್ಯಾಣ”, “ಮಡಮಕ್ಕಿ” ಚಿತ್ರಗಳಲ್ಲಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದ, ನಟ, ನಿರ್ಮಾಪಕ ತನುಷ್ ಶಿವಣ್ಣ ಈಗ “ನಟ್ವರ್ ಲಾಲ್” ಚಿತ್ರದ ಮೂಲಕ ಒಬ್ಬ ಸಮರ್ಥ ನಾಯಕ ನಟನಾಗಿ ಹೊರ ಹೊಮ್ಮಿದ್ದಾರೆ.

 

ಇದನ್ನೂ ಓದಿGaradi Movie Review : ಮೋಡಿ ಮಾಡದ ಗರಡಿ : ಭಟ್ರು ಎಡವಿದ್ದೆಲ್ಲಿ?

ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾಗಳಲ್ಲಿ ಪ್ರೇಕ್ಷಕರು ಮುಖ್ಯವಾಗಿ ಬಯಸೋದು ಕುತೂಹಲ. ಈ `ಕುತೂಹಲ’ ಚಿತ್ರದ ಆರಂಭದಿ0ದ ಕೊನೆಯವರೆಗೂ ಇದ್ದು, ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸುತ್ತದೆ. ತನಿಖೆಯೊಂದರ ಮೂಲಕ  ಕಥೆ ಮುಂದೆ ಸಾಗುತ್ತಾ, ಮುಂದೆ ಟ್ವಿಸ್ಟ್ಗಳು ಕಥೆಯನ್ನು ಸಾಕಷ್ಟು ಇಂಟ್ರೆಸ್ಟಿ0ಗ್ ಆಗಿ ನೋಡಿಸಿಕೊಳ್ಳುತ್ತದೆ.ನಟ್ವರ್‌ಲಾಲ್ ತನಿಖಾ ಹಾದಿ ಯಲ್ಲಿ ಸಾಗುವ ಈ ಚಿತ್ರ ಕ್ಷಣಕ್ಕೊಂದು ತಿರುವು ಪಡೆದುಕೊಂಡು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗುತ್ತದೆ. ಒಬ್ಬ ಸಾದಾಸೀದಾ ಹುಡುಗನ ಜೀವನದಲ್ಲಿ ನಡೆಯುವ ಘಟನೆ ಹೇಗೆ ಆತನನ್ನು ದೊಡ್ಡ ಕ್ರಿಮಿನಲ್ ಆಗಿ ಮಾಡುತ್ತದೆ, ಪೋಲಿಸ್ ಮೈಂಡ್ ಅನ್ನೂ ಮೀರಿ ನಟ್ವರ್‌ಲಾಲ್ ಪ್ರತಿ ಹಂತದಲ್ಲೂ ತಪ್ಪಿಸಿಕೊಳ್ಳುವ ರೀತಿ ಅದ್ಭುತವಾಗಿದೆ.

ಇದನ್ನೂ ಓದಿ:Baanadariyalli Review: ದಾರಿ ತಪ್ಪಿದ ಬಾನ`ದಾರಿ’, ಪ್ರೇಕ್ಷಕನಿಗಿದು ದುಬಾರಿ!

ಆರಂಭದಲ್ಲಿ ಫ್ಯಾಮಿಲಿ ಡ್ರಾಮಾ ಕಥೆ ಅನ್ನಿಸುವಷ್ಟರಲ್ಲಿ ಇಡೀ ಸಿನಿಮಾದ ಜಾನರ್ ಬದಲಾಗಿ ಬಿಡುತ್ತದೆ.  ಸೆಕೆಂಡ್ ಆಫ್ ನಿಜಕ್ಕೂ ಕುತೂಹಲ ಕಾರಿಯಾಗಿ ಸಾಗುತ್ತದೆ. ಸಿನಿಮಾ ತನಿಖಾ ಹಾದಿಯತ್ತ ಮುಖ ಮಾಡುವ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವವನ್ನು ಕಟ್ಟಿ ಕೊಡುತ್ತದೆ. ನಾಯಕ ಕ್ರಿಮಿನಲ್ ಹಾದಿ ಹಿಡಿಯುವುದು ಯಾಕೆ? ಕೊನೆಗೂ ಚಾಣಾಕ್ಷ ʼನಟ್ವರ್‌ಲಾಲ್ʼ ಪೊಲೀಸ್ ಬಲೆಗೆ ಬೀಳುತ್ತಾನ? ಸೈಬರ್ ಕ್ರೈಮ್ ಲೋಕದ ಅಚ್ಚರಿಗಳೇನು? ಎಂಬುದನ್ನು ತಿಳಿದುಕೊಳ್ಳಲು ಸಿನಿಮಾವನ್ನು ಥೀಯೆಟರ್‌ನಲ್ಲಿಯೇ ನೋಡಬೇಕು. ಚಿತ್ರದ ಕಥಗೆ ತಂಕ್ಕAತೆ ಸಿನಿಮಾದ ಹಿನ್ನಲೆ ಸಂಗೀತ ಬೆರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ.

ಇದನ್ನೂ ಓದಿಲೋಕಸಭೆ ಚುನಾವಣೆಗೆ ಸುಮಲತಾ ಅಂಬರೀಶ್‌ ಮೆಗಾ ಪ್ಲಾನ್?! ಕುತೂಹಲ ಮೂಡಿಸಿದ ದರ್ಶನ್ -ಯಶ್ ನಡೆ!

ನಾಯಕ ತನುಶ್ ಶಿವಣ್ಣ ರಗಡ್ ಲುಕ್‌ನಲ್ಲಿ ಸಕತ್ ಪರ್‌ಫಾಮೆನ್ಸ್ ನೀಡಿದರೆ, ಉಳಿದಂತೆ ಸೋನಾಲ್, ರಾಜೇಶ್, ನಾಗಭೂಷಣ್ ತಾವೇ ಪಾತ್ರವಾಗಿದ್ದಾರೆ. ನಿರ್ದೇಶಕ ವಿ.ಲಾವಾ ಒಂದು ಅಸಾಧಾರಣ ಕಥೆಯನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ. ವಿಲಿಯಮ್ ಡೇವಿಡ್ ಛಾಯಾಗ್ರಹಣ, ಕೆ.ಎಮ್.ಪ್ರಕಾಶ್ ಸಂಕಲನ, ಧರ್ಮ ವಿಶ್ ಸಂಗೀತ.. ಹೀಗೆ ಎಲ್ಲವೂ `ನಟ್ವರ್ ಲಾಲ್’ನನ್ನು ಚಂದಕಾಣಿಸಿದೆ. ಇದೇ ಜಾನರ್ ಚಿತ್ರಗಳು ಬೇರೆ ಭಾಷೆಯಲ್ಲಿ ಬಂದಾಗ ಹೊಗಳುವ ನಾವು ಈ ಚಿತ್ರವನ್ನೂ ನೋಡಿ ಪ್ರೋತ್ಸಾಹಿದ್ದೇ ಆದರೆ, ಇನ್ನಷ್ಟು ಇಂತಹ ಅಪರೂಪದ ಕಥೆಗಳು ಕನ್ನಡಕ್ಕೆ ಬರುವುದು ಖಂಡಿತಾ.

Share this post:

Related Posts

To Subscribe to our News Letter.

Translate »