`ಮೌನ ಮಾತಾದಾಗ’ promo / ಪುಟ್ಟಣ್ಣ ಕಣಗಾಲ್ ಇಬ್ಬರು ಹೆಣ್ಣು ಮಕ್ಕಳಿಗೆ ಮೋಸ ಮಾಡಿದ್ನಲ್ಲಾ!
`ಚಿತ್ತಾರ’ ಪತ್ರಿಕೆಯಿಂದ `ಯೂಟ್ಯೂಬ್’ ಚಾನೆಲ್ನಲ್ಲೊಂದು ವಿನೂತನ ಕಾರ್ಯಕ್ರಮ
ಅಂತಿಮ ಹಂತದ ಚಿತ್ರೀಕರಣ ಮುಗಿಸಿದ ‘ರಂಗಸಮುದ್ರ’
ಕಳೆದ ಹದಿಮೂರು ವರ್ಷಗಳಿಂದ ಚಿತ್ತಾರ ಸಿನಿಮಾಸಿಕಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದು ತನ್ನದೇ ಆದ ಛಾಪು ಮೂಡಿಸಿದೆ. ಈಗಾಗಲೇ ಅನೇಕ ಹೊಸ ಪ್ರಯತ್ನಗಳಿಗೆ ತೆರೆದುಕೊಂಡಿರುವ ಚಿತ್ತಾರ, ಪ್ರಸ್ತುತ ಮತ್ತೊಂದು ಹೊಸ ಹೆಜ್ಜೆಯಾಗಿ ಗಣೇಶ್ ಕಾಸರಗೋಡು ಅವರ ನೇತೃತ್ವದಲ್ಲಿ ಮೌನ ಮಾತಾದಾಗ ಎಂಬ ಶಿರ್ಷೀಕೆ ಅಡಿಯಲ್ಲಿ `ವಿಡಿಯೋ ಸಂದರ್ಶನ ಸರಣಿ’ ಕಾರ್ಯಕ್ರಮವನ್ನು ಆರಂಭಿಸುತ್ತಿದೆ. ಗಣೇಶ್ ಕಾಸರಗೋಡು ಅವರು ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನೆಡಿಸಿ, ಯಶಸ್ವಿಗೊಳಿಸಿದವರು. ಈ ಹಿಂದೆ, `ಚಿತ್ತಾರ’ ಸಂಸ್ಥೆಯಲ್ಲಿ ಅವರದ್ದೇ ಪರಿಕಲ್ಪನೆಯ ಮೂಲಕ ಪ್ರಸಾರವಾದ ಶುಭಂ ಆಡಿಯೋ ಸರಣಿ’ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿತ್ತು.
`ಮೌನ ಮಾತಾದಾಗ’ ಕಾರ್ಯಕ್ರಮದ ಮೊದಲ ಹಂತದಲ್ಲಿ ಹಿರಿಯ ನಿರ್ದೇಶಕರಾದ ದೊರೈ ಭಗವಾನ್ ಮತ್ತು ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಭಾ.ಮಾ.ಹರೀಶ್ ಭಾಗವಹಿಸಿದ್ದು, ಈಗಾಗಲೇ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಸಂದರ್ಶನದಲ್ಲಿ ದೊರೈ ಭಗವಾನ್ ಹಿರಿಯ ನಿರ್ದೇಕರಾದ ಪುಟ್ಟಣ್ಣ ಕಣಗಾಲ್ ಮತ್ತು ಸಿದ್ದಲಿಂಗಯ್ಯ ಅವರ ಬಗ್ಗೆ ನೀಡಿರುವ ಹೇಳಿಕೆಗಳು ಸಾಕಷ್ಟು ಸದ್ದು ಮಾಡುತ್ತಿವೆ. ಇನ್ನೊಂದೆಡೆ, ಪ್ರೋಮೋದಲ್ಲಿ ಭಾ.ಮಾ.ಹರೀಶ್ ಮತ್ತು ಸಾ.ರಾ.ಗೋವಿಂದು ಅವರ ತರೆಮೆರೆಯ ಗುದ್ದಾಟ ಬೀದಿಗೆ ಬಂದು ನಿಂತಿದೆ.
ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ: ದೊಡ್ಮನೆ ಭೇಟಿಯಾದ ತೋಟಗಾರಿಕ ಇಲಾಖೆ
`ಮೌನ ಮಾತಾದಾಗ’ ಕಾರ್ಯಕ್ರಮದ ಮುಂದಿನ ಹಂತದಲ್ಲ್ಲಿ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ದುಡಿದ ಪ್ರತಿಭೆಗಳ ಅಪರೂಪದ ಸಂದರ್ಶನಗಳು ಪ್ರಸಾರವಾಗಲಿದ್ದು, ಪ್ರೇಕ್ಷಕರಿಗೆ ಒಂದು ಹೊಸ ರೀತಿಯ ಕಾರ್ಯಕ್ರಮವನ್ನು ನೀಡುವ ತುಡಿತ `ಚಿತ್ತಾರ’ ಸಂಸ್ಥೆಯದ್ದು.