ಜುಲೈನಲ್ಲಿ ಯಾವ ನಟರು ಹೆಚ್ಚು ಜನಪ್ರಿಯವಾಗಿದ್ದರು ಎನ್ನುವ ಪಟ್ಟಿ ಹೊರ ಬಿದ್ದಿದೆ. ಪ್ರತಿ ಬಾರಿ ಈ ಕುರಿತಾಗಿ ಓರ್ಮಾಕ್ಸ್ ಸಮೀಕ್ಷೆ ನಡೆಸುತ್ತದೆ. ಈ ವರದಿ ಪ್ರಕಾರ ಭಾರತೀಯ ಅತ್ಯಂತ ಜನಪ್ರಿಯಗೊಂಡ 10 ಸಿನಿಮಾ ನಟರ ಹೆಸರನ್ನು ಬಿಡುಗಡೆ ಮಾಡಿದೆ.
‘ಕೆಜಿಎಫ್ 2’ ಮೂಲಕ ಹವಾ ಸೃಷ್ಟಿಸಿದ ಯಶ್ 5ನೇ ಸ್ಥಾನದಲ್ಲಿದ್ದಾರೆ. ಟಾಪ್ 10 ನಟರ ಪಟ್ಟಿಯಲ್ಲಿ ಯಶ್ 5ನೇ ಸ್ಥಾನ ಪಡೆದಿದ್ದಾರೆ. ಕನ್ನಡದ ನಟರ ಪೈಕಿ ನಟ ಯಶ್ ಒಬ್ಬರೇ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಭಾರತದ ಟಾಪ್ 10 ನಟರ ಪಟ್ಟಿಯಲ್ಲಿ ನಟ ವಿಜಯ್ ಅಗ್ರಸ್ಥಾನದಲ್ಲಿದ್ದಾರೆ. ಪ್ರಭಾಸ್ ಅವರು ಎರಡನೇ ಸ್ಥಾನ, RRRನಲ್ಲಿ ಮಿಂಚಿದ ನಟ ಜೂನಿಯರ್ ಎನ್ಟಿಆರ್ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಪುಷ್ಪ ಮೂಲಕ ಸಖತ್ ಕ್ರೇಜ್ ಸೃಷ್ಟಿಸಿದ ಅಲ್ಲು ಅರ್ಜುನ್ ಇದ್ದಾರೆ. ನಟ ರಾಮ್ ಚರಣ್ 6ನೇ ಸ್ಥಾನದಲ್ಲಿದ್ದಾರೆ. ರಾಮ್ ಚರಣ್ ಕೂಡ RRR ಸಿನಿಮಾದ ಮೂಲಕ ಜನಮನ ಗೆದ್ದಿದ್ದಾರೆ.
ನಟ ಅಜಿತ್‌ಗೆ 10ನೇ ಸ್ಥಾನ, ಟಾಲಿವುಡ್ ನಟ ಮಹೇಶ್ ಬಾಬು ಅವರು 8ನೇ ಸ್ಥಾನದಲ್ಲಿದ್ದಾರೆ.. ಇನ್ನುಳಿದಂತೆ ತಮಿಳು ನಟ ಸೂರ್ಯ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.. ತಮಿಳು ಅಜಿತ್ ಕುಮಾರ್ ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಅಕ್ಷಯ್ ಕುಮಾರ್ ಈ ಲಿಸ್ಟ್ಸೇರಿಕೊಂಡ ಬಾಲಿವುಡ್ನ ಏಕೈಕ ನಟ. ಅಕ್ಷಯ್ ಕುಮಾರ್‌ಗೆ 7ನೇ ಸ್ಥಾನ ಸಿಕ್ಕಿದೆ.