ಅಂತು ಇಂತು ಬಹಳ ಕಾತುರದಿಂದ ಕಾಯುತ್ತಿದ್ದಂತ ಸಿನಿಮಾ ಇಂದು ಬೆಳ್ಳಿ ತೆರೆಗೆ ಅಪ್ಪಳಿಸಿದೆ. ಹಾಡುಗಳಿಂದಾನೇ ಸಿಕ್ಕಾಪಟ್ಟೆ ಟ್ರೆಂಡ್ ಕ್ರಿಯೇಟ್ ಮಾಡಿದ್ದಂತ ಕೃಷ್ಣಂ ಪ್ರಣಯ ಸಖಿ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ನಾ ಮುಂದು ತಾ ಮುಂದು ಎಂಬಂತೆ ಸಿನಿಮಾದ ಹಾಡುಗಳಿಗೆ ರೀಲ್ಸ್ ಮಾಡಿದ್ದ ಮಂದಿ, ಥಿಯೇಟರ್ ಕಡೆಗೂ ಹೆಜ್ಜೆ ಹಾಕುತ್ತಿದ್ದಾರೆ. ಇಂಪಾದ ಹಾಡುಗಳನ್ನು ಥಿಯೇಟರ್ ನಲ್ಲಿ ಕೇಳುವ ಮಜವೇ ಬೇರೆ. ಸದ್ಯ ರಾಜ್ಯಾದ್ಯಂತ ರಿಲೀಸ್ ಆಗಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾಗೆ ಬಿಗ್ ಓಪನಿಂಗ್ ಸಿಕ್ಕಿದೆ.
ಇದನ್ನೂ ಓದಿ ಇಂದ್ರಜಿತ್ ಲಂಕೇಶ್ ನಿರ್ದೇಶನದ ಹಾಗೂ ಸಮರ್ಜಿತ್ ಲಂಕೇಶ್ ಅಭಿನಯದ ಈ ಚಿತ್ರ ಆಗಸ್ಟ್ 15 ರಂದು ತೆರೆಗೆ .
ಇನ್ನು ಥಿಯೇಟರ್ ರಿಲೀಸ್ ಗೂ ಮುನ್ನವೇ ನಿನ್ನೆ ರಾತ್ರಿ ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿತ್ತು. ಕನ್ನಡ ಚಿತ್ರರಂಗದ ಕಲಾವಿದರೆಲ್ಲಾ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಶ್ರೀನಿವಾಸ್ ರಾಜು ಕಥೆ ಹೇಳುವ ರೀತಿಗೆ ಫಿದಾ ಆಗಿದ್ದಾರೆ. ಕ್ರೈಂ ಇರಲಿ.. ಲವ್ ಇರಲಿ ಜನರನ್ನು ಸೆಳೆಯುವಂತೆ ಶ್ರೀನಿವಾಸ್ ರಾಜು ಕಥೆ ಹೇಳುತ್ತಾರೆ ಎಂಬುದು ಕೃಷ್ಣಂ ಪ್ರಣಯ ಸಖಿ ಸಿನಿಮಾ ಮೂಲಕ ಪ್ರೂವ್ ಆಗಿದೆ.
ಇದನ್ನೂ ಓದಿ ‘ಲಾಫಿಂಗ್ ಬುದ್ದ’ ಥೀಯೆಟರ್‌ಗೆ ಬರಲು ಸನ್ನದ್ಧ ; ನಿರೀಕ್ಷೆ ಮೂಡಿಸಿದ ಎಂಥಾ ಚಂದಾನೇ ಇವಳು’ ಹಾಡು
ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾದಲ್ಲಿ ಹಾಡು ಹಿಟ್ ಆದ ಮೇಲೆ ಸಿನಿಮಾ ಹಿಟ್ ಆಗದೆ ಉಳಿದಿರುವ ಹಿಸ್ಟರಿಯೇ ಇಲ್ಲ. ಸಿನಿಮಾ ನೋಡಿದ ಸೆಲೆಬ್ರೆಟಿಗಳು ಕೂಡ ಸಿನಿಮಾ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಘಟಾನುಘಟಿ ಕಲಾವಿದರೇ ಸಿನಿಮಾದಲ್ಲಿದ್ದು, ಫ್ಯಾಮಿಲಿ ಡ್ರಾಮಾ ಜೊತೆಗೆ ವಿಶೇಷ ಕಂಟೆಂಟ್ ಕೊಟ್ಟಿದ್ದಾರೆ. ರಂಗಾಯಣ ರಘು, ಗಿರಿ ಶಿವಣ್ಣ ಸೇರಿ ಒಂದಷ್ಟು ಮನರಂಜನೆಯನ್ನು ನೀಡಿದ್ದಾರೆ.
ಇದನ್ನೂ ಓದಿ ಸೃಜನ್ ಲೋಕೇಶ್ ಪ್ರಥಮ ನಿರ್ದೇಶನದ “GST” ಚಿತ್ರದ ಚಿತ್ರೀಕರಣ ಮುಕ್ತಾಯ
ಇಡೀ ಕುಟುಂಬ ಕೂತು, ಅದ್ದೂರಿ ಸಿನಿಮಾ ನೋಡಬೇಕೆಂಬ ಆಸೆ ಕೃಷ್ಣಂ ಪ್ರಣಯ ಸಖಿಯಿಂದ ನೆರವೇರಿದೆ. ಹಾಡುಗಳನ್ನೆ ಕೇಳಿ ಖುಷಿಪಟ್ಟವರು ಒಮ್ಮೆ ಥಿಯೇಟರ್ ಹೋಗಿ ಸಿನಿಮಾ ನೋಡಿ. ಕೃಷ್ಣಂ ಪ್ರಣಯ ಸಖಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುವ ಎಲ್ಲಾ ಭರವಸೆಗಳು ಮೂಡಿವೆ.