ಇಂಡಿಯನ್ , ಖೈದಿ ನಂಬರ್ 150, 2.0, ದರ್ಬಾರ್ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಇದೀಗ ಮಿಷನ್:ಚಾಪ್ಟರ್ 1 ಸಿನಿಮಾವನ್ನು ವಿಶ್ವಾದ್ಯಂತ ರಿಲೀಸ್ ಮಾಡಲಿದೆ. ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ಭಾರೀ ಹೆಸರು ಮಾಡಿರುವ ಲೈಕಾ, ಪ್ರೇಕ್ಷಕರಿಗೆ ವಿಭಿನ್ನ ಬಗೆಯ ಚಿತ್ರಗಳನ್ನು ಉಣಬಡಿಸುತ್ತಿದೆ. ಪೊನ್ನಿಯಿನ್ ಸೆಲ್ವನ್-2, ಇಂಡಿಯನ್-2, ಲಾಲ್ ಸಲಾಂ ಸೇರಿದಂತೆ ಹಲವು ಚಿತ್ರಗಳ ನಿರ್ಮಾಣ ಮಾಡ್ತಿರುವ ಲೈಕಾ ಮಾಲೀಕ ಸುಭಾಷ್ ಕರಣ್, ‘ಮಿಷನ್:ಚಾಪ್ಟರ್-1’ ಅಖಂಡ ವಿಶ್ವ ತಲುಪಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
`ನೋಂಬು’ ಸಣ್ಣ ಕತೆ ಆಧಾರಿತ `ರಂಜಾನ್’ ಚಿತ್ರದ ಆಡಿಯೋ ಬಿಡುಗಡೆ
ಕಾಲಿವುಡ್ ಹೀರೋ ಅರುಣ್ ವಿಜಯ್ ನಟನೆಯ ‘ಮಿಷನ್:ಚಾಪ್ಟರ್-1’ ಸಿನಿಮಾಗೆ ಪ್ರತಿಭಾನ್ವಿತ ನಿರ್ದೇಶಕ ವಿಜಯ್ ಆಕ್ಷನ್ ಕಟ್ ಹೇಳಿದ್ದು, ದುಬಾರಿ ಬಜೆಟ್ ನಲ್ಲಿ ಎ ರಾಜಶೇಖರ್ ಹಾಗೂ ಎಸ್ ಸ್ವಾತಿ ನಿರ್ಮಾಣ ಮಾಡಿದ್ದಾರೆ. ‘ಮಿಷನ್:ಚಾಪ್ಟರ್-1’ ಸಿನಿಮಾವನ್ನು ಕೇವಲ 70 ದಿನದಲ್ಲಿ ಚೆನ್ನೈ ಹಾಗೂ ಲಂಡನ್ ನಲ್ಲಿ ಶೂಟಿಂಗ್ ನಡೆಸಲಾಗಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಸೆಟ್ ಹಾಕಿ ಚಿತ್ರೀಕರಿಸಲಾಗಿದ್ದು, ನಾಯಕ ಅರುಣ್ ವಿಜಯ್ ಅದ್ಭುತ ಸ್ಟಂಟ್ ಮಾಡಿದ್ದಾರೆ.
ಅರ್ಜುನ್ ಜನ್ಯ ನಿರ್ದೇಶನದ ‘45’ ಚಿತ್ರಕ್ಕೆ ಕೌಸ್ತುಭ ಮಣಿ ನಾಯಕಿ
ಆಮಿ ಜಾಕ್ಸನ್ ಸಣ್ಣದೊಂದು ಗ್ಯಾಂಪ್ ಬಳಿಕ ಈ ಸಿನಿಮಾ ಮೂಲಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದು, ಮಾಲಿವುಡ್ ಖ್ಯಾತ ನಟಿ ನಿಮಿಷಾ ಸಜಯನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಭರತ್ ಬೋಪಣ್ಣ, ವಿರಾಜ್, ಅಭಿ ಹಾಸನ್ ಸೇರಿದಂತೆ ಹಲವರು ನಟಿಸಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರುವ ‘ಮಿಷನ್:ಚಾಪ್ಟರ್-1’ ಸಿನಿಮಾಗೆ ಜಿವಿ ಪ್ರಕಾಶ್ ಕುಮಾರ್ ಸಂಗೀತ, ವಿಜಯ್ ಸಂಭಾಷಣೆ, ಆಂಥೋನಿ ಸಂಕಲನ, ಶರವಣ್ ವಸಂತ ಕಲಾ ನಿರ್ದೇಶನ, ಸಂದೀಪ್ ಕೆ ವಿಜಯ್ ಛಾಯಾಗ್ರಹಣ ಸಿನಿಮಾಕ್ಕಿದೆ. ಶೀಘ್ರದಲ್ಲಿಯೇ ಈ ಚಿತ್ರದ ಟ್ರೇಲರ್, ಆಡಿಯೋ ಹಾಗೂ ರಿಲೀಸ್ ಡೇಟ್ ಅನೌನ್ಸ್ ಆಗಲಿದ್ದು, ನಾಲ್ಕು ಭಾಷೆಯಲ್ಲಿ ಸಜ್ಜಾಗ್ತಿರುವ ‘ಮಿಷನ್:ಚಾಪ್ಟರ್-1’ ಸಿನಿಮಾವನ್ನು ಲೈಕಾ ವಿಶ್ವಾದ್ಯಂತ ವಿತರಣೆ ಮಾಡಲಿದೆ.