ನಟಿ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಸೀರಿಯಲ್‌ನಿಂದ ಖ್ಯಾತಿ ಪಡೆದ ನಟಿ, ಸದ್ಯ ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕ್ತಾಯಿದ್ದಾರೆ. ಈಗಾಗಲೇ ಈ ನಟಿ ಅಭಿನಯಿಸಿದ ತ್ರಿಬಲ್ ರೈಡಿಂಗ್, ದಿಲ್ ಪಸಂದ್ ಸಿನಿಮಾ ತೆರೆಕಂಡಿದ್ದು, ಕೆಲವು ದಿನಗಳ ಹಿಂದೆ ವಿನಯ್ ರಾಜ್‌ಕುಮಾರ್ ಅಭಿನಯದ ಗ್ರಾಮಾಯಣ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆಂಬ ವಿಷಯ ಹಂಚಿಕೊಂಡಿದ್ದರು.
ಇದನ್ನೂ ಓದಿ ಬಹುಭಾಷಾ ನಟಿ ಶ್ರಿಯಾ ಮನೆಯಲ್ಲಿ ದೀಪಾವಳಿ ಸಂಭ್ರಮ ಜೋರಾಗಿದೆ ,ಪತಿ ಜೊತೆ ಶ್ರಿಯಾ,ಮಗಳ ಸಂಭ್ರಮ ..
ಇದೀಗ ನಟಿ ಮೇಘಾ ಶೆಟ್ಟಿ ಪ್ರಜ್ವಲ್ ದೇವರಾಜ್ ಅಭಿನಯದ ಚೀತಾ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಚೀತಾ ಚಿತ್ರದಲ್ಲಿ ಪ್ರಜ್ವಲ್‌ಗೆ ಇಬ್ಬರು ಹೀರೋಯಿನ್ ಇದ್ದು, ಒಬ್ಬರು ಮೇಘಾ ಶೆಟ್ಟಿಯಾದರೇ, ಮತ್ತೊಬ್ಬರು ಶೃತಿ ಹರಿಹರನ್ ಇದ್ದಾರೆ. ಇಬ್ಬರಿಗೂ ಮಹತ್ವದ ರೋಲ್ ಕಾಣಿಸಲಿದ್ದಾರೆ.
ಚೀತಾ ಸಿನಿಮಾದ ನಾಯಕಿಯರ ಪರಿಚಯ ಮಾಡಿಸೋಕೆ ವಿಶೇಷವಾಗಿಯೇ ಫೋಟೋ ಶೂಟ್ ಮಾಡಿಸಿದ್ದು, ಅವಾಗಲೇ ನಾಯಕಿಯರ ಗೆಟಪ್ ಮತ್ತು ರೋಲ್ ಹೇಗಿರುತ್ತದೆ ಅನ್ನೋದನ್ನ ತಿಳಿಯುತ್ತದೆ. ಮೇಘಾ ಶೆಟ್ಟಿ ಪಾತ್ರದ ಕೆಲವು ಭಾಗದ ಶೂಟಿಂಗ್ ಮುಗಿದಿದ್ದು, ಬೆಂಗಳೂರಿನ ಎಚ್.ಎಂ.ಟಿ. ಫ್ಯಾಕ್ಟರಿಯಲ್ಲಿಯೇ ಒಂದು ದೊಡ್ಡ ಸೆಟ್ ಹಾಕಿದ್ದು, ಬಹುತೇಕ ಭಾಗವನ್ನ ಇಲ್ಲಿಯೇ ಶೂಟಿಂಗ್ ನಡೆಯುತ್ತದೆ.
ಇದನ್ನೂ ಓದಿ KGF ಸಿನಿಮಾ ಬರೋದಕ್ಕೆ ಮುಂಚೆ ‘ಯಶ್’ ಯಾರು ಅಂತಾನೆ ಗೊತಿರಲಿಲ್ಲ ಎಂದ ಅಲ್ಲೂ ಅರವಿಂದ್ …
ಸಿನಿಮಾದ ಇತರ ಮಾಹಿತಿಯನ್ನ ಹಂತ ಹಂತವಾಗಿಯೇ ಕೊಡ್ತಾ ಹೋಗುತ್ತೇವೆ. ಒಂದೊಂದೇ ಪಾತ್ರದ ಪರಿಚಯವನ್ನ ಕೂಡ ವಿಶೇಷವಾಗಿಯೇ ಮಾಡೋ ಪ್ಲಾನ್ ಇದೆ. ಅದಕ್ಕಾಗಿಯೇ ಇನ್ನು ಏನೂ ಬಿಟ್ಟಿಲ್ಲ ಅಂತಲೇ ಕಲೈ ಮಾಸ್ಟರ್ ಹೇಳಿಕೊಂಡಿದ್ದಾರೆ.