ಕನ್ನಡ ಚಿತ್ರರಂಗ ಮೇರು ನಟ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಮುದ್ದಾದ ಮಗಳ ಮೇಘನಾ ರಾಜ್ ಮಲಯಾಳ ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟು ಪುಂಡ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ತತ್ಸಮ ತದ್ಭವ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡುತ್ತಿರುವ ಮೇಘನಾ ಒಂದು ಮುಖ್ಯವಾದ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನೂ ಓದಿ *ವರ್ಷ ಪೂರ್ತಿ ಹಾಸ್ಯ ಚಕ್ರವರ್ತಿ T R ನರಸಿಂಹರಾಜು ಜನ್ಮ ಶತಮಾನೋತ್ಸವ ಆಚರಣೆ* .
ಚಿರಂಜೀವಿ ಸರ್ಜಾ ಅಗಲಿದ ಮೇಲೆ ಮೇಘನಾ ಎರಡನೇ ಮದುವೆ ಆಗ್ತಾರೆ, ಸೈಲೆಂಟ್ ಆಗಿ ಯಾರನ್ನೋ ಇಷ್ಟ ಪಡುತ್ತಿದ್ದಾರೆ, ಫ್ಯಾಮಿಲಿ ಒತ್ತಾಯಕ್ಕೆ ಮದುವೆ ಆಗ್ತಾರೆ ಹಾಗೆ ಹೀಗೆ ಎಂದು ಸಾಕಷ್ಟು ವಿಚಾರಗಳು ವೈರಲ್ ಆಗಿತ್ತು. ಯಾರೆ ಈ ಯಾವ ಪ್ರಶ್ನೆಗೂ ಮೇಘನಾ ಉತ್ತರ ಕೊಟ್ಟಿರಲಿಲ್ಲ.ಈಗ ಸ್ವತಃ ಮೇಘನಾ ಕೊಟ್ಟಿರುವ ಕ್ಲಾರಿಟಿ ವೈರಲ್ ಆಗುತ್ತಿದೆ.‘ನಿಜ ಹೇಳಬೇಕು ಅಂದ್ರೆ ಎರಡನೇ ಮದುವೆ ಬಗ್ಗೆ ನಾನು ಯೊಚನೆ ಕೂಡ ಮಾಡಿಲ್ಲ. ನಿಜ ಹೇಳಬೇಕು ಅಂದ್ರೆ ಈ ತರ ಒಂದು ಅಯ್ಕೆ ಇದೆ ಅನ್ನೋ ಯೋಚನೆ ಕೂಡ ನನಗೆ ಬಂದಿಲ್ಲ ಈ ವಿಚಾರದ ಬಗ್ಗೆ ಯಾರೂ ನನ್ನ ಜೊತೆ ಚರ್ಚೆ ಮಾಡಿಲ್ಲ. ಎರಡನೇ ಮದುವೆ ಬಗ್ಗೆ ಯೋಚನೆ ಮಾಡಿಲ್ಲ ಮಾಡೋದು ಇಲ್ಲ. ಒಂದು ವಿಚಾರದ ಬಗ್ಗೆ ತುಂಬಾ ಕ್ಲಿಯರ್ ಆಗಿರುವ ನನ್ನ ಜೀವನದಲ್ಲಿ ನನಗೆ ನನ್ನ ಮಗ ಮುಖ್ಯವಾಗುತ್ತಾನೆ ನನ್ನ ಗಮನ ಇರುವುದು ಅವನ ಮೇಲೆ ಮಾತ್ರ ಇದಕ್ಕಿಂತ ಸಿಂಪಲ್ ಆಗು ಏನೂ ಹೇಳಲು ಆಗಲ್ಲ. ನನ್ನ ಜೀವನ ಇರುವುದೇ ರಾಯನ್ ರಾಜ್ ಸರ್ಜಾನಿಗೆ ಅದಾದ ಮೇಲೆ ನನಗೆ ಯಾವುದು ಮುಖ್ಯವಲ್ಲ ನನ್ನ ಜೀವನದಲ್ಲಿ. ನನ್ನ ಮಗನೇ ನನ್ನ ಓನ್ ಆಂಡ್ ಆಲ್’ ಎಂದು ಕನ್ನಡ ಖಾಸಗಿ ಮಾಧ್ಯಮ ಸಂದರ್ಶನದಲ್ಲಿ ಮೇಘನಾ ಮಾತನಾಡಿದ್ದಾರೆ.
10 ವರ್ಷಗಳ ಕಾಲ ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ನಟಿಸಿ ಅಕ್ಟೋವರ್ 22, 2017ರಲ್ಲಿ ನಿಶ್ಚಿತಾರ್ಥವಾಗಿ, ಮೇ 2, 2018ರಲ್ಲಿ ಅದ್ದೂರಿಯಾಗಿ ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮದುವೆ ಮಾಡಿಕೊಂಡರು. ಆದರೆ ಜೂನ್ 7,2020 ಹೃದಯಾಘಾತದಿಂದ ಚಿರಂಜೀವಿ ಇಹಲೋಕ ತ್ಯಜಿಸಿದರು ಆ ಸಮಯದಲ್ಲಿ ಮೇಘನಾ ರಾಜ್ ಗರ್ಭಿಣಿ ಆಗಿದ್ದರು. ಅಕ್ಟೋಬರ್ 22, 2020ರಂದು ಪುತ್ರ ರಾಯನ್ ರಾಜ್ ಸರ್ಜಾ ಜನಿಸಿದನು. ಕಲರ್‌ಫುಲ್ ಜೀವನಕ್ಕೆ ಈ ರೀತಿ ಆಗಬಾರದಿತ್ತು ಎಂದು ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದರು. ಆದರೂ ರಾಯನ್‌ಗೆ ದೊಡ್ಡ ಮಟ್ಟದಲ್ಲಿ ಪ್ರೀತಿ ಕೊಡುತ್ತಿದ್ದಾರೆ ಕರ್ನಾಟಕದ ಜನತೆ.ಚಿರು ಆಪ್ತ ಸ್ನೇಹಿತ ಪನ್ನಗಾಭರಣ ನಿರ್ದೇಶನ ಮಾಡುತ್ತಿರುವ ತತ್ಸಮ ತದ್ಭವ ಚಿತ್ರದಲ್ಲಿ ಮೇಘನಾ ರಾಜ್ ಮತ್ತು ಪ್ರಜ್ವಲ್ ದೇವರಾಜ್ ನಟಿಸುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಅಂತಿಮದಲ್ಲಿದ್ದು ಸಣ್ಣ ಪುಟ್ಟ ಪ್ರಚಾರ ಶುರು ಮಾಡಿಕೊಂಡಿದ್ದಾರೆ.