ಬೆಂಗಳೂರು: ನಟಿ ಮೇಘಾ ಶೆಟ್ಟಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪ್ಪಟ ಅಭಿಮಾನಿ ಎಂದು ಎಲ್ಲರಿಗೂ ಗೊತ್ತು. ಮೇಘಾ ಇತ್ತೀಚೆಗೆ ಡಿ ಬಾಸ್ ಪಾಳಯದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ಜೊತೆಗಿರುವ ಸ್ನೇಹ ಸಂಬಂಧಕ್ಕೆ ಸಾಕ್ಷಿ.
ಧನ್ವೀರ್ ಗೌಡ ಜೊತೆ ಮೇಘಾ ನಾಯಕಿಯಾಗಿ ಅಭಿನಯಿಸಿದ್ದ ಕೈವ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದೆ. ಈ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ದರ್ಶನ್ ಬಂದಿದ್ದರು.ಅದಾದ ಬಳಿಕ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾದ ಹುಬ್ಬಳ್ಳಿ ಮತ್ತು ಮಂಡ್ಯ ಪ್ರಿರಿಲೀಸ್ ಈವೆಂಟ್ ನಲ್ಲಿ ಮೇಘಾ ಹಾಜರಾಗಿದ್ದರು. ಮಂಡ್ಯದಲ್ಲಂತೂ ಮೇಘಾ ಸ್ಟೇಜ್ ಮೇಲೆ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಮನ ಗೆದ್ದಿದ್ದರು.ರಂಗು ರಂಗಿನ ವೇದಿಕೆಯಲ್ಲಿ ಕುಣಿದ ಮೇಘಾ ಕೊನೆಗೆ ಸ್ಟೇಜ್ ಕೆಳಗೆ ಬಂದು ನಟ ದರ್ಶನ್ ರನ್ನೂ ಜೊತೆಗೆ ಹೆಜ್ಜೆ ಹಾಕುವಂತೆ ಮಾಡಿದ್ದರು. ದರ್ಶನ್ ಮತ್ತು ಮೇಘಾ ಶೆಟ್ಟಿ ಡ್ಯಾನ್ಸ್ ಗೆ ಸ್ಟೆಪ್ ಹಾಕಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಬಗ್ಗೆ ಮಾತನಾಡಿರುವ ಮೇಘಾ ಈ ಗಳಿಗೆಯನ್ನು ನಾನು ಜೀವನದಲ್ಲೂ ಎಂದೂ ಮರೆಯಲ್ಲ ಎಂದಿದ್ದಾರೆ.