ಮೇಘಾ ಶೆಟ್ಟಿ, (Megha Shetty) ಜೊತೆ ಜೊತೆಯಲಿ (Jote Jotheyali) ಧಾರಾವಾಹಿಯ (Serial) ಮೂಲಕ ಜನರಿಗೆ ಪರಿಚಿತವಾದ ನಟಿ. ಅವರನ್ನು ಅನು ಸಿರಿಮನೆ ಆರ್ಯನ ಮನದರಸಿಯಾಗಿ ಜನರ ಮನದಲ್ಲಿ ಹೆಸರು ಗಳಿಸಿರುವ ಈ ಸುಂದರಿ ಕಿರುತೆರೆ ಮಾತ್ರವಲ್ಲದೇ ಸ್ಯಾಂಡಲ್ವುಡ್ನಲ್ಲಿ (Sandalwood) ಸಹ ಬ್ಯುಸಿ ಇರುವ ನಟಿ ಮೇಘಾ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ಮೇಘಾ ಶೆಟ್ಟಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ತ್ರಿಬ್ಬಲ್ ರೈಡಿಂಗ್’ ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ.
https://www.instagram.com/p/Cg02997Pfur/
ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು ನಟನೆಯ ‘ದಿಲ್ ಪಸಂದ್’ ಸಿನಿಮಾದಲ್ಲಿಯೂ ಮೇಘಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ.
ಧನ್ವೀರ್ ಗೌಡ ನಟನೆಯ ‘ಕೈವ’ ಚಿತ್ರದಲ್ಲಿಯೂ ಮೇಘಾ ನಟಿಸುತ್ತಿದ್ದಾರೆ. ಹೊಸ ನಟ ಕವೀಶ್ ಶೆಟ್ಟಿ ಜೊತೆ `ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಒಟ್ಟಿನಲ್ಲಿ ಒಂದಾದ ಮೇಲೆ ಒಂದರಂತೆ ಮೇಘಾ ಶೆಟ್ಟಿ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
https://www.instagram.com/p/Cg0rvSqI70X/
ಮೇಘಾ ಶೆಟ್ಟಿ ಅವರು ಆಗಸ್ಟ್ 4, 1998 ರಲ್ಲಿ ಜನಿಸಿದ್ದು, ಬೆಂಗಳೂರಿನಲ್ಲಿ ಬೆಳೆದ ಹುಡುಗಿ. ಇಲ್ಲೇ ಓದಿದ್ದು. ಎಂಬಿಎ ಮಾಡಿದ್ದಾರೆ. ಜೊತೆ ಜೊತೆಯಲಿ ಧಾರವಾಹಿ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದಾರೆ.