Sandalwood Leading OnlineMedia

ಅಂದು ಬಿಗ್‌ಬಿ, ಇಂದು ಮೇಘನಾ ರಾಜ್!

 

ತಮ್ಮ ಉತ್ತಮ ನಟನೆಯ ಮೂಲಕ ಜನಪ್ರಿಯರಾಗಿರುವ ನಟಿ ಮೇಘನ ರಾಜ್ ಅವರಿಗೆ ಈ ಬಾರಿಯ ಪ್ರತಿಷ್ಠಿತ “FOG HERO’’ AWARD   ದೊರಕಿದೆ. ಕ್ಯಾಲಿಫರ‍್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ `federation of indo americns of nurthen california’ ಇವರು ಆಯೋಜಿಸುವ `festival of globe’ ಸಮಾರಂಭ ಕಳೆದ ನಲ್ವತ್ಮೂರು ವರ್ಷಗಳಿಂದ ಅದ್ದೂರಿಯಾಗಿ ನಡೆದುಕೊಂಡು ಬರುತ್ತಿದೆ. ಈ ಬಾರಿ ಆಗಸ್ಟ್‌ 19, 20 ಹಾಗೂ 21 ರಂದು ಈ ಸಮಾರಂಭ ನಡೆಯಲಿದೆ.

 

ಮುದ್ದಿನ ಮಡದಿಗೆ ಕ್ಯೂಟಾಗಿ ವಿಶ್​ ಮಾಡಿದ ಲವ್ಲಿ ಸ್ಟಾರ್ ಪ್ರೇಮ್

ಮೂರು ದಿನಗಳ ಕಾಲ ನಡೆಯುವ ಈ ಸಮಾರಂಭಕ್ಕೆ ಅಲ್ಲಿ ನೆಲೆಸಿರುವ ಭಾರತೀಯರು, ಸ್ಥಳೀಯರು ಸೇರಿದಂತೆ ಲಕ್ಷಕ್ಕೂ ಅಧಿಕ ಜನ‌ರು ಬರುವ ನಿರೀಕ್ಷೆಯಿದೆ. ಅಲ್ಲಿನ ರಾಜಕೀಯ ಪ್ರಮುಖರು, ಗಣ್ಯರು ಸಹ ಸಮಾರಂಭಕ್ಕೆ ಆಗಮಿಸುತ್ತಾರೆ. ಪ್ರತಿರ‍್ಷ ಭಾರತದ ಸ್ವಾತಂತ್ರ‍್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.  ಆಗಸ್ಟ್ 15ರ ಆಸುಪಾಸಿನ ದಿನಗಳಲ್ಲಿ ಈ ಹಬ್ಬ ಸಡಗರದಿಂದ ನಡೆಯಲಿದೆ. ವಿವಿಧ ರೀತಿಯ ಸಾಂಸ್ಕೃತಿಕ ಕರ‍್ಯಕ್ರಮಗಳು ಅಲ್ಲಿ ನಡೆಯುತ್ತದೆ.

 

 ಗಾಳಿಪಟ 2 ಟ್ರೈಲರ್‌ನಲ್ಲಿ ಏನಿದೆ?  GALIPATA-2 MOVIE TRAILER LAUNCH EVENT exclusive images

ಕಳೆದ ಎರಡು ರ‍್ಷಗಳ ನಂತರ (ಕೊರೋನ ನಂತರ) ಈ ಬಾರಿ ಮತ್ತೆ ಅದ್ದೂರಿಯಾಗಿ ಈ ಹಬ್ಬವನ್ನು ಆಯೋಜಿಸಲಾಗಿದೆ. ಪ್ರತಿರ‍್ಷ ಈ ಸಂರ‍್ಭದಲ್ಲಿ ಭಾರತದಲ್ಲಿ ಸಾಧನೆ ಮಾಡಿರುವ ಗಣ್ಯರೊಬ್ಬರಿಗೆ ““FOG HERO’’ AWARD ‍ ನೀಡಲಾಗುತ್ತದೆ. ಹೆಚ್ಚಾಗಿ ಚಿತ್ರರಂಗದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಆಶಾ ಪರೇಕ್, ಅಮಿತಾಬ್ ಬಚ್ಚನ್, ದೇವಾನಂದ್, ವಿನೋದ್ ಖನ್ನಾ,  ಮುಂತಾದ ಸಿನಿರಂಗದ ಗಣ್ಯರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಬಾರಿ ದಕ್ಷಿಣ ಭಾರತದ ಖ್ಯಾತ ನಟಿ ಮೇಘನರಾಜ್ “FOG HERO’’ AWARD ಗೆ ಭಾಜನರಾಗಿದ್ದಾರೆ.  ಎಂದು ಕರ‍್ಯಕ್ರಮದ ಬಗ್ಗೆ ಹಾಗೂ ಪ್ರಶಸ್ತಿ ಪ್ರದಾನದ ಕುರಿತು ಸಂಸ್ಥೆಯ ಕ್ರಿಸ್ ಮರ‍್ತಿ ಮಾಹಿತಿ ನೀಡಿದರು.

 

ಕನ್ನಡದಲ್ಲೂ  ‘ ದಿ ಲೆಜೆಂಡ್’ ಸಿನಿಮಾ…ತಮಿಳುನಾಡಿನ ಖ್ಯಾತ ಉದ್ಯಮಿ ಅರುಲ್ ಸರವಣನ್ ಈಗ ಪ್ಯಾನ್ ಇಂಡಿಯಾ ಸ್ಟಾರ್

ಅಮಿತಾಭ್‌ ಬಚ್ಚನ್‌, ವಿನೋದ್ ಖನ್ನಾ ಮುಂತಾದ ಗಣ್ಯರು ಪಡೆದಿರುವ ಈ ಪ್ರತಿಷ್ಠಿತ ಪ್ರಶಸ್ತಿಗೆ ನಾನು ಭಾಜನಳಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ಅಂತಹ ಮಹಾನ್ ನಟರಿಗೆ ಸಂದಿರುವ ಪ್ರಶಸ್ತಿಗೆ ಈ ಬಾರಿ ನಾನು ಆಯ್ಕೆಯಾಗಿರುವುದು ನನ್ನ ಪುಣ್ಯ. ನನ್ನ ತಂದೆಯ ಮೂಲಕ ಈ ವಿಷಯ ನನಗೆ ತಿಳಿಯಿತು. ಆಗಸ್ಟ್21 ರಂದು ನಡೆಯುವ ಅದ್ದೂರಿ ಸಮಾರಂಭದಲ್ಲಿ ಈ ಪ್ರಶಸ್ತಿ ಸ್ವೀಕರಿಸಲಿದ್ದೇನೆ. ಕನ್ನಡ ಚಿತ್ರರಂಗ ಈಗ ಇಡೀ ವಿಶ್ವದಾದ್ಯಂತ ಜನಪ್ರಿಯ. ಕನ್ನಡಿಗಳಾಗಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಹೆಚ್ಚಿನ ಖುಷಿಯಾಗಿದೆ ಎಂದರು ನಟಿ ಮೇಘನರಾಜ್.

Share this post:

Related Posts

To Subscribe to our News Letter.

Translate »