ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ ಸಿನಿಮಾ ‘KGF’. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ದೊಡ್ಡ ಹೆಸರು ಬಂದಿದೆ. ಬಹುತೇಕ ಕನ್ನಡ ಕಲಾವಿದರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದರು. ಅದರಲ್ಲೂ ಈ ಸಿನಿಮಾದಲ್ಲಿ ಜೂನಿಯರ್ ರಾಕಿಬಾಯ್ ಆಗಿ ಕಾಣಿಸಿಕೊಂಡ ಹುಡುಗ ಈಗ ಹೇಗಿದ್ದಾರೆ ಎಂಬುದು ಗೊತ್ತಾ..?
‘KGF’ ಸರಣಿಯಲ್ಲಿ ನಟಿಸಿದ ಪ್ರತಿ ಪಾತ್ರವೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಚಿತ್ರದಲ್ಲಿ ರಾಕಿಭಾಯ್ ಚಿಕ್ಕಂದಿನ ಪಾತ್ರದಲ್ಲಿ ಬಾಲನಟ ಅನ್ಮೋಲ್ ಭಟ್ಕಳ್ ನಟಿಸಿದ್ದ. ಜ್ಯೂ. ರಾಕಿ ಭಾಯ್ ಆಗಿ ಆತನ ನಟನೆ ಕೂಡ ಸಿನಿರಸಿಕರಿಗೆ ಇಷ್ಟವಾಗಿತ್ತು. ಚಿಕ್ಕಂದಿನಿಂದಲೇ ರಾಕಿ ಎಷ್ಟು ಮಹತ್ವಾಕಾಂಕ್ಷಿ, ಧೈರ್ಯವಂತ ಎನ್ನುವುದನ್ನು ಆತನ ಮೂಲಕ ನೀಲ್ ತೋರಿಸಿದ್ದರು.
ಈಗ ಕೂಡ ಎಲ್ಲೇ ಹೋದರೂ ಜನ ಜ್ಯೂ. ರಾಕಿ ಭಾಯ್ ಅಂತ್ಲೇ ಆತನನ್ನು ಗುರ್ತಿಸುತ್ತಾರೆ. ಅಷ್ಟರಮಟ್ಟಿಗೆ ಆತ ಮೋಡಿ ಮಾಡಿದ್ದಾರೆ. ಅಂದಹಾಗೆ ‘KGF’ ಸರಣಿಯಲ್ಲಿ ಬಾಲನಟನಾಗಿದ್ದ ಅನ್ಮೋಲ್ ಈಗ ಡಿಗ್ರಿ ಓದುತ್ತಿದ್ದಾರೆ. ಆದರೆ ಪ್ರೇಕ್ಷಕರಿಗೆ ಮಾತ್ರ ಇನ್ನು ಆತ ಬಾಲನಟನಾಗಿಯೇ ನೆನಪಿನಲ್ಲಿ ಉಳಿದಿದ್ದಾರೆ. ಖುದ್ದು ಅನ್ಮೋಲ್ ಹೇಳಿದಂತೆ ‘KGF’-1 ಚಿತ್ರೀಕರಣ ಶುರುವಾದಾಗ 8ನೇ ತರಗತಿ ಓದುತ್ತಿದ್ದ. ಚಾಪ್ಟರ್-2 ಬಿಡುಗಡೆ ವೇಳೆಗೆ ದ್ವಿತೀಯ ಪಿಯುಸಿ ಮುಗಿಸಿದ್ದರು.