Sandalwood Leading OnlineMedia

ಅರಸು ಚಿತ್ರದ ಮೀರಾ ಜಾಸ್ಮಿನ್ ಇವರೇನಾ? ಹೇಗಿದೆ ಗೊತ್ತಾ ಹೊಸ ಲುಕ್..?

ನಾಯಕಿ ಮೀರಾ ಜಾಸ್ಮಿನ್ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಅರಸು ಚಿತ್ರದಲ್ಲಿ ಅವರ ನಟನೆಯನ್ನು ಯಾರೂ ಮರೆತಿಲ್ಲ.

ಬಹಳ ದಿನಗಳಿಂದ ಸಿನಿಮಾದಿಂದ ದೂರವಿದ್ದರೂ ಈ ನಟಿಗೆ ಅಭಿಮಾನಿಗಳು ಕಡಿಮೆಯಾಗಿಲ್ಲ. ಇನ್ನು ಇತ್ತೀಚೆಗೆ ಮೀರಾ ಜಾಸ್ಮಿನ್ ಫೋಟೋ ವೈರಲ್ ಆಗುತ್ತಿದ್ದು, ಆ ಫೋಟೋಗಳು ಇಲ್ಲಿದೆ.

    

ನಟಿ ಮೀರಾ ಜಾಸ್ಮಿನ್ ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅವತಾರದ ಮೂಲಕ ಫ್ಯಾನ್ಸ್ ಗಳನ್ನು ಹುಬ್ಬೇರಿಸುವಂತೆ ಮಾಡುತ್ತಾರೆ.

ಹೌದು ಅವರ ಫ್ಯಾಶನ್ ಸೆನ್ಸ್ ಅಂತೂ ನಿಜಕ್ಕೂ ಪಡ್ಡೆ ಹುಡುಗರನ್ನು ಕಣ್ಣು ಕುಕ್ಕಿಸುವಂತೆ ಮಾಡುತ್ತದೆ.

ಬಗೆಬಗೆಯ ಫೋಟೋಗಳ ಮೂಲಕ ಮೀರಾ ಜಾಸ್ಮಿನ್​ ಅವರು ಗಮನ ಸೆಳೆಯುತ್ತಿದ್ದಾರೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಜನರು ನಾನಾ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಸೆಕೆಂಡ್ ಇನ್ನಿಂಗ್ಸ್‌ಗೆ ರೆಡಿಯಾಗಿರುವ ಮೀರಾ ಜಾಸ್ಮಿನ್ ತಮ್ಮ ಗ್ಲಾಮರ್ ಸೈಡ್ ಅನ್ನು ತೋರಿಸಿದ್ದಾರೆ. ನಾಯಕಿ ಮತ್ತು ನಿರ್ದೇಶಕರ ಪಾತ್ರಗಳಿಗೆ ನಾನು ಸಿದ್ಧ ಎಂದು ಈ ಮೂಲಕ ಹೇಳುತ್ತಿದ್ದಾರೆ.

ಮೀರಾ ಜಾಸ್ಮಿನ್​ ಅವರು ಗ್ಲಾಮರಸ್​ ಆಗಿ ಪೋಸ್​ ನೀಡಿದ್ದನ್ನು ಕಂಡು ಪ್ಯಾನ್ಸ್​ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೆ ಅವರು ಸಿನಿಮಾಗಳಲ್ಲಿ ಸಕ್ರಿಯವಾಗಲಿ, ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸಲಿ ಎಂದು ಅಭಿಮಾನಿಗಳು ಹಂಬಲ ವ್ಯಕ್ತಪಡಿಸುತ್ತಿದ್ದಾರೆ.

 

   

 

 

Share this post:

Related Posts

To Subscribe to our News Letter.

Translate »