ಇಂದು ದರ್ಶನ್ ಮೊಗದಲ್ಲಿ ಕೊಂಚ ನಗು ಕಂಡಿದೆ. ಅದಕ್ಕೆ ಕಾರಣ ಅವರ ತಾಯಿ ಮೀನಾ ತೂಗುದೀಪ. ಹೌದು ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಮೇಲೆ ದರ್ಶನ್ ಅವರನ್ನು ನೋಡಲು ಮೀನಾ ಅವರು ಬಂದಿರಲಿಲ್ಲ. ಯಾಕಂದ್ರೆ ಬೆಂಗಳೂರಿನಿಂದ ಬಳ್ಳಾರಿಗೆ 300 ಕಿಲೋ ಮೀಟರ್ ಆಗುತ್ತದೆ. ಹೀಗಾಗಿಯೇ ಮೀನಾ ಅವರು ಮಗನನ್ನು ನೋಡಲು ಬಂದಿರಲಿಲ್ಲ. ದರ್ಶನ್ ಕನವರಿಸುತ್ತಿದ್ದ ಕಾರಣಕ್ಕೆ ಜೈಲಿಗೆ ಬಂದಿದ್ದಾರೆ. ಇಂದು ಬಳ್ಳಾರಿ ಜೈಲಿಗೆ ಅವರ ತಾಯಿ, ಅಕ್ಕ, ಭಾವ, ಮಕ್ಕಳು ಭೇಟಿ ನೀಡಿದ್ದಾರೆ. ಕುಟುಂಬಸ್ಥರನ್ನು ಕಂಡು ದರ್ಶನ್ ಕೂಡ ಕೊಂಚ ಸಮಾಧಾನಗೊಂಡಿದ್ದಾರೆ. ಜೈಲುವಾಸ ನೂರು ದಿನಗಳಾಗಿವೆ. ಪ್ರಪಂಚದ ಸಂಪರ್ಕವೇ ಇಲ್ಲದೆ ಬದುಕುತ್ತಿರುವ ದರ್ಶನ್ ಗೆ ಕುಟುಂಬಸ್ಥರನ್ನು ನೋಡಿ, ದುಃಖ ಜೋರಾಗಿದೆ. ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಇನ್ನು ದರ್ಶನ್ ಅವರಿಗಾಗಿ ಅವರ ಅಮ್ಮ ಸ್ವೀಟು, ಹಣ್ಣು, ಊಟ ಎಲ್ಲವನ್ನು ಎರಡು ಬ್ಯಾಗ್ ನಲ್ಲಿ ತಂದಿದ್ದಾರೆ. ಊಟಕ್ಕಿಂತ ಅಮ್ಮನನ್ನು ನೋಡಿದ ಖುಷಿ ದರ್ಶನ್ ಮುಖದಲ್ಲಿ ಕಂಡಿದೆ. ಸದ್ಯ ಜಾಮೀನಿಗೆ ಅರ್ಜಿ ಹಾಕುವುದಕ್ಕೂ ಎಲ್ಲಾ ತಯಾರಿ ನಡೆಯುತ್ತಿದೆ. ದರ್ಶನ್ ಗೆ ಜಾಮೀನು ಸಿಗಬಹುದಾ ಎಂದೆಲ್ಲಾ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.
ಇನ್ನು ದರ್ಶನ್ ಅವರಿಗೆ ಧೈರ್ಯವೇ ವಿಜಯಲಕ್ಷ್ಮೀ ಹಾಗೂ ದಿನಕರ್. ಆಗಾಗ ವಿಜಯಲಕ್ಷ್ಮೀ ಹಾಗೂ ತಮ್ಮ ದಿನಕರ್ ಅವರು ಬಂದು ದರ್ಶನ್ ಅವರನ್ನು ಭೇಟಿಯಾಗಿ ಹೋಗುತ್ತಿದ್ದಾರೆ. ಸೊರಗಿ ಹೋದ, ಧೈರ್ಯ ಕಳೆದುಕೊಂಡ ದರ್ಶನ್ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಜಾಮೀನು ಸಿಗಬಹುದು ಎಂಬ ನಿರೀಕ್ಷೆಯೂ ಮನೆಯವರಲ್ಲಿದೆ.