Sandalwood Leading OnlineMedia

ನವೆಂಬರ್ 27ಕ್ಕೆ “ಮ್ಯಾಕ್ಸ್” ನ ಬಹುಮುಖ್ಯ ಘೋಷಣೆ

 

ಅಭಿನಯ ಚಕ್ರವರ್ತಿಯ ಬಹು ನಿರೀಕ್ಷಿತ ಚಿತ್ರ “ಮ್ಯಾಕ್ಸ್” ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಇದೇ ನವೆಂಬರ್ 27ಕ್ಕೆ ಒಂದು ಮುಖ್ಯ ಘೋಷಣೆಯನ್ನು ಮಾಡುವುದಾಗಿ ಒಂದು ಪೋಸ್ಟರ್ ಮೂಲಕ ಚಿತ್ರ ತಂಡ ಇಂದು ತಿಳಿಸಿ, ಎಲ್ಲೆಡೆ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ‌.

“ಮ್ಯಾಕ್ಸ್” ಒಂದು ಮಾಸ್ ಚಿತ್ರವಾಗಿದ್ದು, ಇದನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿರುತ್ತಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಮತ್ತು ಮುಂತಾದವರು ಈ ಚಿತ್ರದಲ್ಲಿ ನಟಿಸಿರುತ್ತಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿರುತ್ತಾರೆ.

Share this post:

Related Posts

To Subscribe to our News Letter.

Translate »