Rating /5
Matsyagandha ಟೈಟಲ್ಲೇ ಹೇಳುವಂತೆ ಒಂದು ಕಡಲತಡಿಯ ಅಪರೂಪದ ಕಥೆ ಹೊಂದಿರುವ ಚಿತ್ರ. ಚಿತ್ರದ ಕಥೆ ಹೊನ್ನಾವರದ ಟೊಂಕ ಪೊಲೀಸ್ ಠಾಣೆಯಿಂದ ಚಿತ್ರ ಪ್ರಾರಂಭವಾಗುತ್ತದೆ. ಕೇಸುಗಳೇ ಸಿಗದ ಕಡಲತೀರದ ಊರಿನಿಂದ ವರ್ಗಾವಣೆಗೊಂಡು ಹೋಗುವುದೇ ಲೇಸು ಅನ್ನುವ ಅಧಿಕಾರಗಳ ಮಧ್ಯೆ, ಅದೇ ಠಾಣೆಯಲ್ಲಿರುವ ಚಿತ್ರದ ನಾಯಕ ಪರಂ, ಇನ್ಸ್ಪೆಕ್ಟರ್ ಆಗಿ ಬಡ್ತಿ ಪಡೆಯುತ್ತಾನೆ. ಮೀನುಗಾರರು ಮತ್ತು ಕೊಂಕಣಿಗರೇ ಪ್ರಾಬಲ್ಯ ಹೊಂದಿರುವ ಊರದು. ಎಲ್ಲರ ಹೆಗಲಿನಲ್ಲಿಯೂ ಕೇಸರಿ ಶಾಲು, ಬೈಕಲ್ಲಿ ಕೇಸರಿ ಬಾವುಟ. ಈ ಪಾಳಯಕ್ಕೆ ನಾಯಕ ಸ್ಥಳೀಯ ರಾಜಕಾರಣಿ ಸುಧೀರ್ ಪ್ರಭು. ಈ ಹುಡುಗರಿಗೆ ಕಿರಿಕ್ ಮಾಡಿ ಪರಂ ಊರವರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಇದು ಪೊಲೀಸ್ ಮತ್ತು ಊರಿನ ನಡುವಿನ ಕಿತ್ತಾಟದ ಕಥೆ ಅಂದಷ್ಟೇ ಆಗಿದ್ದರೆ ಚಿತ್ರ ಸಮಾನ್ಯ ಚಿತ್ರವಾಗುತ್ತಿತ್ತು, ಆದರೆ ಒಂದು ಅಸಮಾನ್ಯ ಟ್ವಿಸ್ಟ್ ಚಿತ್ರವನ್ನು ಇಂಟ್ರೆಸ್ಟಿoಗ್ ಆಗಿ ನೋಡುವಂತೆ ಮಾಡುತ್ತದೆ.
Read More Dhairyam Sarvatra Sadhanam Movie Review ; ಸ್ವಾಭಿಮಾನದ ನೆರಳಲ್ಲಿ ಧೈರ್ಯದ ಅನಾವರಣ
ಅಘನಾಶಿನಿ ತೀರದ ಬೆಸ್ತರ ಬದುಕು-ಬವಣೆಯನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡು ನಿರ್ದೇಶಕರು, ನಂತರದಲ್ಲಿ ಬೆಸ್ತರ ಸುಸ್ತರ ಬದುಕಿನ ಇನ್ನೊಂದು ಮಜಲಿಗೆ ಬೆಳಕು ಚೆಲ್ಲುತ್ತಾರೆ. ಕ್ಲಾಸ್-ಮಾಸ್ ಕಥೆಯಿರುವ ಈ ಚಿತ್ರ, ಪೃಥ್ವಿ ಅಂಬಾರ್‌ಗೆ ವಿಭಿನ್ನ ಮತ್ತು ಸವಾಲಿನ ಪಾತ್ರವಾಗಿದ್ದು ಅದ್ಭುತವಾಗಿ ನಿಭಾಯಿಸಿದ್ದಾರೆ. ಪಾತ್ರದ ಪೋಷಣೆಯಲ್ಲಿ ಇನ್ನಷ್ಟು ಪಕ್ವತೆ ಇದ್ದು, ಪರಂ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿದ್ದಾರೆ. ಸಂಭಾಷಣೆ ಚಿತ್ರದ ಮತ್ತೊಂದು ಹೈಲೈಟ್.
Read More Garadi Movie Review : ಮೋಡಿ ಮಾಡದ ಗರಡಿ : ಭಟ್ರು ಎಡವಿದ್ದೆಲ್ಲಿ?
ವ್ಯವಸ್ಥೆ ಬೆಂಬಲಿತ ದೊಡ್ಡ ಗ್ಯಾಂಗೊoದು ಗಾಂಜಾ ಸಾಗಾಣಿಕೆಗೆ ಊರಲ್ಲಿ ಕೇಸರಿ ಶಾಲು ಹೊದ್ದುಕೊಂಡು, ಪುಂಡಾಟಿಕೆ ಮಾಡಿಕೊಂಡಿರುವ ಈ ಮೀನುಗಾರ ಹುಡುಗರನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದೇ ಮುಖ್ಯ ಕಥೆ. ಖಳನಟರಾಗಿ ಸೌರವ್ ಲೋಕೇಶ್, ಶರತ್ ಲೋಹಿತಾಶ್ವ ಇದ್ದಾರೆ. ಇಲ್ಲಿತನಕ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಪ್ರಶಾಂತ್ ಸಿದ್ಧಿ ಖಳನಟನಾಗಿ ಜಿದ್ದಿಗೆ ಬಿದ್ದವರಂತೆ ನಟಿಸಿ, ಮ್ಯೂಸಿಕ್ ಮಾತ್ರವಲ್ಲದೇ ನಟನೆಯಲ್ಲೂ ಸ್ಕೋರ್ ಮಾಡಿದ್ದಾರೆ. ಹಾಡುಗಳು ಕಾಡುತ್ತವೆ. ಹಿನ್ನೆಲೆ ಸಂಗೀತ ಸಿದ್ಧಿಗೆ ಸಿದ್ಧಿಸಿದೆ. ಸ್ಥಳೀಯ ವಾದ್ಯಗಳನ್ನೇ ಹೆಚ್ಚಾಗಿ ಬಳಸಿರುವ ಹಿನ್ನೆಲೆ ಸಂಗೀತ ಒಂದು ಹೊಸ ಫ್ಲೇವರ್ ಅನ್ನು ಚಿತ್ರಕ್ಕೆ ಕೊಟ್ಟಿದೆ. ಛಾಯಾಚಿತ್ರಗ್ರಾಹಕ ಪ್ರವೀಣ್ ಪ್ರಭು ಉತ್ತರ ಕನ್ನಡವನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಇಂದಿನ ರಾಜಕೀಯಯದಾಟ, ಸೇಡು, ಅಸೂಯೆ, ಒಳಜಗಳ.. ಹೀಗೆ ಹಲವು ಸೋಕ್ಮ ವಿಚಾರಗಳನ್ನು ಹೇಳುವ ಡಿಫೆರೆಂಟ್ ಕಥೆ ಇರುವ ` Matsyagandha’ ನಿಜಕ್ಕೂ ಇತೀಚಿನ ದಿನಗಳಲ್ಲಿ ತೆರೆಕಂಡ ಒಂದು ಉತ್ತಮ ಕಂಟೆ0ಟ್ ಇರುವ ನೀಟ್ ಚಿತ್ರ. ಕಡಲಿನ ಮೊರೆತದ ಜೊತಗೆ ಬದುಕಿನ ಅಲೆಗಳು ತಾಕಬೇಕೆಂದರೆ ಒಂದು ಸಲ ಥೀಯೆಟರ್‌ನಲ್ಲೇ ಸಿನಿಮಾ ನೋಡಿ.